ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆಸದ ಕಾರ್ಯಕರ್ತೆ

0
8
loading...

ನರಗುಂದ: ಪಟ್ಟಣದ ಆಶ್ರಯ ಕಾಲೋನಿಯಲ್ಲಿಯ ಅಂಗನವಾಡಿ ಸಂಖ್ಯೆ 120 ರಲ್ಲಿ ಕಳೆದ 15 ದಿನಗಳಿಂದ ಮಕ್ಕಳಿಗೆ ಆಹಾರ ಪೂರೈಕೆ ಮಾಡದಿರುವ ಕುರಿತು ಅಲ್ಲಿಯ ಸಾರ್ವಜನಿಕರಿಂದ ಟೀಕೆಗಳು ಕೇಳಿ ಬಂದಿವೆ.
ಈ ಮಧ್ಯೆ ಅಂಗನವಾಡಿಗಳಿಗೆ ಮೇ. 17 ರಿಂದ ಮೇ. 31 ರವರೆಗೆ ರಜೆ ನೀಡಲಾಗಿದೆ. ಅದಕ್ಕಿಂತ ಪೂರ್ವ ಅಂಗನವಾಡಿಗಳಲ್ಲಿರುವ ಮಕ್ಕಳಿಗೆ ಆಹಾರ ಪೂರೈಕೆ ಮಾಡಿಲ್ಲ. ಹಾಗೂ ಅಂಗನವಾಡಿ ಕೇಂದ್ರವನ್ನು 15 ದಿನಗಳವರೆಗೂ ನಿತ್ಯ ತೆರೆದಿರಲಿಲ್ಲವೆಂದು ಟೀಕೆಗಳು ಬಂದಿವೆ.
ಅಂಗನವಾಡಿಗಳು ಮಹಿಳಾ ಹಾಗೂ ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದ ವ್ಯಾಪ್ತಿಗೆ ಬರುವುದರಿಂದ ಅಂಗನವಾಡಿ ಮಕ್ಕಳಿಗೆ ಬೆಳಿಗ್ಗೆ ಹಾಲು ಮತ್ತು ಮದ್ಯಾಹ್ನದ ಊಟದ ವ್ಯವಸ್ಥೆ ಮತ್ತು ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ ನೀಡುವ ವಿಶೇಷ ಯೋಜನೆ ಇದೆ. ಆದರೆ 120 ರ ಕೇಂದ್ರ ಸಂಖ್ಯೆಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವವರು 15 ದಿನಗಳಿಂದ ಆಹಾರ ಪೂರೈಕೆ ಮಾಡದಿರುವ ಕುರಿತು ಅಲ್ಲಿಯ ಸಾರ್ವಜನಿಕರು ಟೀಕೆ ಮಾಡಿದ್ದಾರೆ.

ಅಂಗನವಾಡಿ ಕೇಂದ್ರ ಸಂಖ್ಯೆ 120 ರಲ್ಲಿ ಆಹಾರ ಪೂರೈಕೆ ಮಾಡದಿರುವ ಕುರಿತು ಹಾಗೂ ಅಂಗನವಾಡಿ ತೆರೆಯದಿರುವ ಕುರಿತು ಈಗತಾನೆ ಮಾಹಿತಿ ಒದಗಿದೆ. ಯಾವ ಕಾರಣಕ್ಕೆ ಆಹಾರ ಪೂರೈಕೆಯಾಗಿಲ್ಲವೆನ್ನುವುದರ ಮಾಹಿತಿಯನ್ನು ಆ ಅಂಗನವಾಡಿ ಕಾರ್ಯಕರ್ತೆಯನ್ನು ಕರೆಯಿಸಿ ವಿಚಾರಿಸಿ ಕ್ರಮ ಕೈಗೊಳ್ಳಲಾಗುವುದು.
ಎಸ್‌.ಬಿ.ಮುದರಡ್ಡಿ, ಅಂಗನವಾಡಿ ಮೇಲ್ಚಿಚಾರಕಿ

loading...