ಅಂಚೆ ಇಲಾಖೆಯಿಂದ ಮತದಾನ ಜಾಗೃತಿ

0
17
loading...

ಗದಗ: ಗದಗ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್‌ ಸಮಿತಿ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಅಂಚೆ ಇಲಾಖೆಯ ನೆರವಿನೊಂದಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವೀಪ್‌ ಸಮಿತಿಯ ನೋಡೆಲ್‌ ಅಧಿಕಾರಿ ಟಿ.ದಿನೇಶ ಚಾಲನೆ ನೀಡಿದರು.
ಜಿಲ್ಲಾ ಸ್ವೀಪ್‌ ಸಮಿತಿಯ ಅಧಿಕಾರಿಗಳು ನಗರದ ಪ್ರಧಾನ ಅಂಚೆ ಕಚೇರಿ ಜೊತೆ ಒಪ್ಪಂದ ಮಾಡಿಕೊಂಡು ಮೇ. 12 ರ ವರೆಗೆ ಅಂಚೆ ಅಣ್ಣ ಹೊತ್ತು ತರುವ ಅಂಚೆ ಪತ್ರಗಳ ಮೂಲಕ ಮತ ಜಾಗೃತಿ ಕಾರ್ಯ ನಡೆಯಲಿದೆ.
ಎರಡು ಲಕ್ಷ ಪತ್ರ : ರಜಾದಿನ ಹೊರತು ಪಡೆಸಿ ಜಿಲ್ಲೆಯಲ್ಲಿ ಅಂಚೆ ಕಚೇರಿ ಮೂಲಕ ಪ್ರತಿದಿನ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಲಕ್ಷ ಪತ್ರಗಳು ವಿಲೇವಾರಿಯಾಗುತ್ತವೆ. ಅಂಚೆ ಪತ್ರದ ಮೇಲೆ “ಮೇ. 12 ರಂದು ನಮ್ಮ ಮತ ನಮ್ಮ ಶಕ್ತಿ ಕಡ್ಡಾಯವಾಗಿ ಮತ ಚಲಾಯಿಸೋಣ”ಎಂಬ ತಲೆ ಬರಹದೊಂದಿಗೆ ಜನತೆಯ ಕೈಸೇರಲಿದೆ.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಮತ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ಸಹಾಯಕ ಅಂಚೆ ಆಧೀಕ್ಷಕ ಕೆ. ಬಾಲರಾಜ, ಅಂಚೆ ಪಾಲಕರಾದ ಬಸವರಾಜ ಬಳ್ಳೋಳ್ಳಿ, ಸುರೇಶ ಕಪ್ಪತ್ತನವರ, ಕೃಷ್ಣಾ ದೊಡ್ಡಮನಿ, ಎಸ್‌.ಎಸ್‌.ಮಳಗಿ, ಮಾರುಕಟ್ಟೆ ಅಧಿಕಾರಿ ಮಂಜುನಾಥ ಕುರಿಯವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...