ಅಧಿಕಾರಿಗಳ ಕಣ್ತಪ್ಪಿಸಿ ಮತದಾನದ ವಿಡಿಯೋ ವೈರಲ್ ಮಾಡಿದ ಮತದಾರ

0
32
ಬೆಳಗಾವಿ : ಮತದಾರ ಮತದಾನದ ಗೌಪ್ಯತೆಯನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್  ಅಭ್ಯರ್ಥಿಗೆ ವೋಟ್ ಮಾಡಿದ ವಿಡಿಯೋ ಮತದಾರನೊರ್ವ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಇವರು ಮತಗಟ್ಟೆ ಸಿಬ್ಬಂದಿಯ ಕಣ್ತಪ್ಪಿಸಿ ವೋಟ್ ಮಾಡುವಾಗ ವಿಡಿಯೋ ಮಾಡಿಕೊಂಡು ವಿಡಿಯೋಅನ್ನು ವೈರಲ್ ಮಾಡಿದ್ದರೆ ಎಂದು ತಿಳಿದುಬಂದಿದೆ. ಈ ಬಾರಿ ಮತದಾನ ಕೇಂದ್ರದಲ್ಲಿ ಮೊಬೈಲನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ಕೂಡ ವಯಕ್ತಿಕ ಮತದಾನದ ವಿಡಿಯೋ ಹಾಗೂ ಚಿತ್ರಗಳು ಹೊರ ಬಂದಿರುವದು ವಿಪರ್ಯಾಸ.
loading...