ಅನಾದರ ತಡೆಯಲು ಬಲವಾದ ಕಾನೂನು ತರಲು ಆಗ್ರಹ

0
30
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ದೇವತೆಗಳು, ಸಂತರು ಹಾಗೂ ರಾಷ್ಟ್ರ ಪುರುಷರ ಅನಾದರವನ್ನು ನಿಲ್ಲಿಸುವುದಕ್ಕಾಗಿ ಬಲವಾದ ಕಾನೂನು ಜಾರಿಯಾಗಬೇಕು ಎಂದು ರಾಷ್ಟ್ರೀಯ ಹಿಂದೂ ಆಂದೋಲನ ಸಂಘಟನೆಯ ವತಿಯಿಂದ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
ಮಂಗಳವಾರ ಸಂಘಟನೆಯ ಕಾರ್ಯಕರ್ತರು ತಾಲೂಕು ಕಚೇರಿಗೆ ತೆರಳಿ ಈ ಬಗ್ಗೆ ಬರೆದ ಮನವಿ ಪತ್ರವನ್ನು ನೀಡಿದರು.

ಇತ್ತೀಚೆಗೆ ಜನರ ಎದುರು ಬೇಕಂತಲೇ ವಿಕೃತಿಯನ್ನು ಪ್ರಸ್ತುತ ಪಡಿಸುವುದು ಹಾಗೂ ಅದರಿಂದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು, ಇದರಿಂದಾಗಿ ವಿಧ್ವಂಸಕ ಕೃತ್ಯಗಳು ನಡೆದಾಗ ಅಗ್ಗದ ಜನಪ್ರಿಯತೆಯನ್ನು ಪಡೆಯುವುದಾಗುತ್ತಿದೆ. ಮತ್ತು ಇದರಿಂದ ಆರ್ಥಿಕ ಲಾಭದ ಸಮೀಕರಣವನ್ನು ಮಾಡಲಾಗುತ್ತದೆ. ಈ ಕಾರಣದಿಂದ ದೊಡ್ಡ ಸಂಖ್ಯೆಯಲ್ಲಿ ದೇವತೆಗಳ ಅನಾದರ ಮಾಡುವಂತಹ ಚಲನಚಿತ್ರಗಳು, ನಾಟಕಗಳನ್ನು ಮಾಡಲಾಗುತ್ತಿವೆ. ಇದೇ ಪ್ರಕಾರ ಚಿತ್ರ ಪ್ರದರ್ಶಿನಿ, ನಾಟಕಗಳು, ಸೋಶಿಯಲ್ ಮೀಡಿಯಾ ಮುಂತಾದವುಗಳಲ್ಲಿ ಆಗುತ್ತಿರುವ ಹಿಂದೂಗಳ ದೇವತೆಗಳ ಅನಾದರದ ವಿರುದ್ಧ ಕ್ರಮವನ್ನು ಕೈಗೊಳ್ಳಲು ಯಾವುದೇ ಬಲವಾದ ಕಾನೂನು ಅಸ್ತಿತ್ವದಲ್ಲಿಲ್ಲ. ಇದರಿಂದಾಗಿ, ಈ ರೀತಿಯ ಅನಾದರದ ವಿರುದ್ಧ ಸೆನ್ಸಾರ್ ಬೋರ್ಡ್, ಸರಕಾರ, ಪೋಲೀಸ ಪ್ರಶಾಸನದ ಬಳಿ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಯಾವುದೇ ಬಲವಾದ ಕ್ರಮಕೈಗೊಳ್ಳುವುದಿಲ್ಲ. ಫಲಸ್ವರೂಪವಾಗಿ ಅಪರಾಧಿಗಳಿಗೆ ಯಾವುದೇ ರೀತಿಯ ತಡೆಯಿಲ್ಲದಾಗಿದೆ ಹಾಗೂ ವಿಡಂಬನೆ, ಅನಾದರದ ಘಟನೆಗಳು ನಿರಂತರವಾಗಿ ವೃದ್ಧಿಯಾಗುತ್ತಿರುವುದರಿಂದ ಅನೇಕ ಸ್ಥಳಗಳಲ್ಲಿ ಕಾನೂನು ವ್ಯವಸ್ಥೆಗೆ ಕೂಡ ಸಂಕಟ ನಿರ್ಮಾಣವಾಗುತ್ತಿದೆ. ಆದ್ದರಿಂದ ಸರಕಾರವು ನಾಟಕ, ಚಲನಚಿತ್ರ, ಜಾಹೀರಾತುಗಳು, ಕಾವ್ಯ, ಚಿತ್ರ ಮುಂತಾದ ಮಾಧ್ಯಮಗಳಿಂದಾಗುತ್ತಿರುವ ಹಿಂದೂಧರ್ಮ, ಧರ್ಮಗ್ರಂಥ, ದೇವರು, ಸಂತರು ಹಾಗೂ ರಾಷ್ಟ್ರಪುರುಷರ ಅನಾದರವನ್ನು ತಡೆಯಲು ಅತಿ ಶೀಘ್ರವಾಗಿ ಬಲವಾದ ಕಾನೂನನ್ನು ತರಬೇಕಾಗಿದೆ.
ಅಶ್ಲೀಲ ಜಾಲತಾಣದ ಮೇಲೆ ನಿರ್ಬಂಧವಿಧಿಸಿ:- ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆಯ ಘಟನೆಗಳನ್ನು ನಿಲ್ಲಿಸಲು ಅಶ್ಲೀಲ ಜಾಲತಾಣಗಳ ಮೇಲೆ ಸಂಪೂರ್ಣ ನಿರ್ಬಂಧವನ್ನು ಹಾಕಬೇಕಾಗಿದೆ.

ಈ ರೀತಿಯ ಘಟನೆಗಳು ಈ ಹಿಂದೆ ಕೂಡ ಎಷ್ಟೋ ಸಲ ಬೆಳಕಿಗೆ ಬಂದಿವೆ ಹಾಗೂ ಬರುತ್ತಿವೆ. ಆದ್ದರಿಂದ ಕಠೋರ ಕಾಯಿದೆಗಳನ್ನು ಮಾಡುವುದರಿಂದ ಈ ರೀತಿಯ ಘಟನೆಗಳು ನಿಲ್ಲುವುವು ಎಂದು ವಿಚಾರ ಮಾಡುವುದು ತರ್ಕಸಂಗತವಿರದು. ಬಲಾತ್ಕಾರದ ಘಟನೆಗಳು ಹೆಚ್ಚಾಗಲು ಅನೇಕ ಕಾರಣಗಳಿವೆ. ಅದರಲ್ಲಿ ಒಂದು ಕಾರಣವೆಂದರೆ ಅಶ್ಲೀಲ ಜಾಲತಾಣ (ಪೋರ್ನ ಸೈಟ್)ಗಳನ್ನು ನೋಡುವುದು. ಇದರಿಂದ ಲೈಂಗಿಕ ಭಾವನೆಗಳು ಪ್ರಚೋದನೆಗೊಂಡು ಬಲಾತ್ಕಾರದ ಘಟನೆಗಳು ನಡೆಯುವುದರ ಅಸಂಖ್ಯಾತ ಉದಾಹರಣೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಆದ್ದರಿಂದ ಈ ರೀತಿಯ ಜಾಲತಾಣಗಳನ್ನು (`ಪೋರ್ನ್ ಸೈಟ್ಸ್’ಗಳನ್ನು) ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘಟನೆಯ ಪ್ರಮುಖರಾದ ವಿಠೋಬಾ ಮಾಳಸೇಕರ ನೇತೃತ್ವದಲ್ಲಿ ನಾರಾಯಣ ಪಾಠಣಕರ, ನಿತಿನ ಡಾಂಗೆ, ಧರ್ಮರಾಜ ಪಾಟೀಲ, ವಿನೋದ ಗಿಂಡೆ, ಸಂತೋಷ ಬುಲಬುಲೆ, ಮೊಹಿನಿ ಹುಂದುರಕರ, ನಮ್ರತಾ ಪರಬ, ಗುರುದಾಸ ನಾಯ್ಕ ಉಪಸ್ಥಿತರಿದ್ದರು.

loading...