ಅಭಿವೃದ್ದಿಗೆ ಅಡ್ಡಗಾಲು ಹಾಕುವವರಿಗೆ ರಾಜ್ಯದಲ್ಲಿ ಜಾಗವಿಲ್ಲ : ಯಡಿಯೂರಪ್ಪ

0
10
loading...

ಸವಣೂರ : ಕ್ಷೇತ್ರದಲ್ಲಾದ ಅನೇಕ ಅಭಿವೃದ್ದಿ ಕಾರ್ಯಗಳನ್ನು ನೋಡಿದರೆ ಹಾಗೂ ನೀರಾವರಿ ಕ್ಷೇತ್ರದಲ್ಲಾದ ಅಭೂತ ಪೂರ್ವ ಕ್ರಾಂತಿಯನ್ನು ಗಮನಿಸಿದರೆ ಬಸವರಾಜ ಬೊಮ್ಮಾಯಿ ವಿರುದ್ಧ ಯಾರೊಬ್ಬರೂ ಸ್ಪರ್ಧಿಸದೆ ಅವಿರೋಧವಾಗಿ ಆಯ್ಕೆಮಾಡಿ ಕ್ಷೇತ್ರದ ಗೌರವವನ್ನು ಹೆಚ್ಚಿಸಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಸವಣೂರ-ಶಿಗ್ಗಾಂವ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ನಡೆದ ಮತ ಪ್ರಚಾರದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು.
ಮೇ 12 ತಾರೀಖಿನಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಆಯ್ಕೆಮಾಡುವ ಮೂಲಕ ಪ್ರತಿಸ್ಪರ್ದಿ ಎಲ್ಲ ಅಭ್ಯರ್ಥಿಗಳು ಠೇವಣಿಯನ್ನು ಕಳೆದುಕೊಳ್ಳುವಂತೆ ಮಾಡಿ ಅಭಿವೃದ್ದಿಗೆ ಅಡ್ಡಗಾಲು ಹಾಕುವವರಿಗೆ ರಾಜ್ಯದ ಯಾವ ಕ್ಷೇತ್ರದಲ್ಲಿಯೂ ಜಾಗವಿಲ್ಲ ಎನ್ನುವದನ್ನು ಸಾಬೀತುಪಡಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಸವಣೂರ ಏತನೀರಾವರಿ ಪೂರ್ಣಗೊಂಡಿಲ್ಲ, ಮುಂದಿನ ಬಿಜೆಪಿ ಸರ್ಕಾರದಲ್ಲಿ ಪೂರ್ಣಗೊಳಿಸಲು ಸಿದ್ದರಿರುವದಾಗಿ ಹಾಗೂ ಒಂದು ಲಕ್ಷ ವರೆಗಿನ ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡುವ ಮೂಲಕ ರೈತರ ಕಣ್ಣೀರನ್ನು ವರೆಸುವ ಮೂಲಕ ನೆಮ್ಮದಿಯ ಬದುಕನ್ನು ಕಲ್ಪಿಸುವದಾಗಿ ಹೇಳಿದರು.
ಮಂಜುನಾಥ ಕುನ್ನೂರ ಬೇಡಿಕೆಯಂತೆ ತ್ವರಿತ ಗತಿಯಲ್ಲಿ ಜಾರಿಗೆ ತಂದು ಬೆಡ್ತಿ ಹಾಗೂ ವರದಾ ನದಿ ಜೋಡಣೆಯ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವದು. ಹಿಂದಿನ ಬಿಜೆಪಿ ಸರ್ಕಾರ ಬಡವರಿಗಾಗಿ 14 ಸಾವಿರ ಮನೆಗಳನ್ನು ನಿರ್ಮಿಸಿದರೆ ಇಂದಿನ ಕಾಂಗ್ರೇಸ್‌ ಸರ್ಕಾರದ ಸಾಧನೆ ಕೇವಲ 3.5 ಸಾವಿರ ಮನೆಗಳಿಗೆ ಸೀಮಿತವಾಗಿದೆ. ಬಿಜೆಪಿ ಸರ್ಕಾರದ ಮುಂದಿನ 5 ವರ್ಷಗಳ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವದಾಗಿ ಹೇಳಿದರು. ಮುಂದಿನ ದಿನಗಳಲ್ಲಿ 3 ಲಕ್ಷ ಕುಟುಂಬಗಳಿಗೆ 1 ಲಕ್ಷಕ್ಕಿದ್ದ ಭಾಗ್ಯಲಕ್ಷ್ಮೀ ಬಾಂಡಿನ ಮೊತ್ತವನ್ನು 2 ಲಕ್ಷಕ್ಕೆ ಹೆಚ್ಚಿಸಲಾಗುವದು. ಕ್ಷೇತ್ರಕ್ಕೆ ಬೊಮ್ಮಾಯಿ ಅವರಂತಹ ವ್ಯಕ್ತಿ ಸಿಗುವದು ಅಪರೂಪ ಕೆಲವೊಂದು ತಿಳಿಗೇಡಿ ಜನ ಕುಚೇಷ್ಟೆಗಾಗಿ ಏನೇನೋ ಮಾಡುತ್ತಾರೆ ಅಂತವರ ಮಾತಿಗೆ ಬೆಲೆಕೊಡಬೇಡಿ ಬೊಮ್ಮಾಯಿ ನೀರಾವರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ರಾಜ್ಯಕ್ಕೆ ಮಾದರಿಯಾಗಿದೆ. ಅಂತಹ ಯೋಗ್ಯ ಪ್ರಾಮಾಣಿಕ ಅಭ್ಯರ್ಥಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್‌ನ್ನು ಮನೆಗೆ ಕಳೆಸುವಂತೆ ಮತದಾರರಿಗೆ ಕರೆನೀಡಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಬಡವರ ಪರವಾಗಿ ದಿನದಲಿತರ ಪರವಾದಂತ ಈ ಕ್ಷೇತ್ರದಲ್ಲಿ ಅಭಿವೃಧ್ದಿಯನ್ನು ಕೈಗೊಳ್ಳಲಾಗಿದೆ.ಕಳೆದ ಹತ್ತು ವರ್ಷ ಕಾಲದ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಾಕಷ್ಟು ಶಾಲಾ ಕಾಲೇಜುಗಳನ್ನು ತರಲಾಗಿದೆ. ಮುಂದಿನ ದಿನಗಳಲ್ಲಿ ಸ್ತ್ರೀಯರಿಗೆ ಸ್ವದ್ಯೂೕಗ ಹಾಗೂ ಗಾರ್ಮೆಟ್ಸ ಕೈಗಾರಿಕೆಗಳನ್ನು ಕ್ಷೇತ್ರಕ್ಕೆ ತಂದು ಸಾವಿರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಾಗುವದು. ಈ ಹಿನ್ನೆಲೆಯಲ್ಲಿ ನೇರವಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ಏರ್ಪಡುವ ಸ್ಪರ್ದಗೆ ಈ ಭಾರಿ ಕಾಂಗ್ರೆಸಿನ ಅಭ್ಯರ್ಥಿ ಎರಡು ಬಾರಿ ಸೋಲನ್ನು ಕಂಡಿರುವದ್ದರಿಂದ ಈ ಬಾರಿಯೂ ಕೂಡಾ ಸೋಲುವ ಬೀತಿಯಲ್ಲಿ ಸ್ವಜಾತಿ ಪಕ್ಷದವರನ್ನು ತಳುಕು ಹಾಕಿಕೊಂಡು ಕಾಂಗ್ರೆಸಿನ ಬಿ ಗುಂಪಾಗಿ ಸ್ಪರ್ದೆ ನಡೆಸಿದ್ದಾರೆ. ಅವರಿಗೆ ಮತದಾರ ಪ್ರಭುಗಳು ಮೇ 12ಕ್ಕೆ ಮತದಾನದ ಮೂಲಕ ಉತ್ತರ ನೀಡುತ್ತಾರೆ ಎನ್ನುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಉಪಾದ್ಯಕ್ಷ ಎನ್‌.ಸಿ. ಪಾಟೀಲ, ಮಾಜಿ ಜಿ.ಪಂ.ಸದಸ್ಯ ಪಾಲಾಕ್ಷಪ್ಪ ಹಾವಣಗಿ, ಮಾಜಿ ಎಪಿಎಂಸಿ ಅಧ್ಯಕ್ಷ ವಿ.ಆಯ್‌. ಪಾಟೀಲ, ಶಿವಾನಂದ ರಾಮಗೇರಿ, ಬಸವರಾಜ ಅಂಗಡಿ, ಗೋವಿಂದಪ್ಪ ಲಮಾಣಿ ಕಾಂಗ್ರೆಸ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್‌.ವಾಯ್‌ ಸಮುಖದಲ್ಲಿ ಸೇರ್ಪಡೆಗೊಂಡರು.
ಬಹಿರಂಗ ಸಭೆಯಲ್ಲಿ ಲೋಕ ಸಭೆ ಸದಸ್ಯ ಪ್ರಹ್ಲಾದ ಜೋಶಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿ.ಪ. ಸದಸ್ಯ ಸಂಕನೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಸಜ್ಜನ, ಸವಣೂರ -ಶಿಗ್ಗಾಂವ ಬಿಜೆಪಿ ತಾಲೂಕಾಧ್ಯಕ್ಷರಾದ ಗಾಳೇಪ್ಪ ದೊಡ್ಡಪೂಜಾರ ಹಾಗೂ ದೇವಣ್ಣ ಚಾಕಲಬ್ಬಿ, ಜಿಲ್ಲಾ ಉಪಾದ್ಯಕ್ಷ ಮಹೇಶ ಸಾಲಿಮಠ, ತಾಲೂಕಾ ಉಪಾದ್ಯಕ್ಷ ಗಿರೇಶ ಮಟಿಗಾರ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಮಹೋನ ಮೆಣಸಿನಕಾಯಿ, ಪುರಸಭೆ ಅಧ್ಯಕ್ಷ ಖಲಂದರ ಅಕ್ಕೂರ, ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಮಾಜಿ ಜಿ.ಪಂ.ಸದಸ್ಯೆ ಶೋಭಾ ನಿಸ್ಸೀಂಗೌಡ್ರ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದರು.

loading...