ಅಭಿವೃದ್ಧಿ ಏನೆಂಬುದನ್ನು ಅರಿಯಲು ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವ ಹೆಗಡೆ

0
13
loading...

ಕನ್ನಡಮ್ಮ ಸುದ್ದಿ-ಕಾರವಾರ: ಕಳೆದ ಕೆಲ ವರ್ಷಗಳಿಂದ ಕಾರವಾರ ಕ್ಷೇತ್ರದಲ್ಲಿ ಕೇವಲ ಹುಚ್ಚು ರಾಜಕಾರಣದ ದರ್ಬಾರ ನಡೆದಿದೆ. ಇಲ್ಲಿ ನ್ಯಾಯ, ನೀತಿ, ಪ್ರಾಮಾಣಿಕತೆ ಹಾಗೂ ಸಭ್ಯತೆಗೆ ಬೆಲೆಯಿಲ್ಲದ್ದಾಗಿದೆ. ಕ್ಷೇತ್ರದ ಜನರಿಗೆ ನ್ಯಾಯ ನೀಡಬೇಕೆಂಬ ಉದ್ದೇಶದಿಂದ ಬಿಜೆಪಿ ಮಹಿಳೆಗೆ ಟೀಕೇಟ್‌ ನೀಡಿದ್ದು ಅಭ್ಯರ್ಥಿ ರೂಪಾಲಿ ನಾಯ್ಕ ಅವರನ್ನು ಗೆಲ್ಲಿಸಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದರು.
ಅವರು ನಗರದಲ್ಲಿ ಬುಧವಾರ ನಡೆದ ಬಿಜೆಪಿ ಬೃಹತ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು ಸೇರಿದ್ದ ಜನ ಸಾಗರನ್ನು ಉದ್ದೇಶಿಸಿ ಸುಭಾಷ್‌ ಸರ್ಕಲ್‌ ಬಳಿ ಮಾತನಾಡಿದರು. ಇಲ್ಲಿನ ಯುವಕರಿಗೆ ಭವಿಷ್ಯಕ್ಕೆ ಬೆಳಕನ್ನು ತೋರಿಸುವ ಮೂಲಕ ಅಭಿವೃದ್ಧಿ ಏನು ಎನ್ನುವುದನ್ನು ತೋರಿಸಬೇಕು. ಹೀಗಾಗಿ ಬಿಜೆಪಿಯು ರೂಪಾಲಿ ನಾಯ್ಕ ಅವರಿಗೆ ಅವಕಾಶ ನೀಡಿದೆ. ಮಹಿಳೆಗೆ ಟಿಕೇಟ್‌ ನೀಡಿದ್ದೇವೆ ಎಂದು ಹೇಳಿ ನಾವು ರಾಜಕೀಯ ಲಾಭವನ್ನು ಪಡೆಯಲು ಬಯಸುವುದಿಲ್ಲ. ಮಹಿಳೆಗೆ ಟಿಕೇಟ್‌ ಕೊಡುವ ಮೂಲಕ ಬಿಜೆಪಿಯು ಭಾರತೀಯ ಮಹಿಳೆಗೆ ಗೌರವ ನೀಡಿದೆ. ಹೀಗಾಗಿ ಎಲ್ಲ ಜನರು ಭಾರತೀಯ ಸಭ್ಯತೆ ಹಾಗೂ ಗೌರವವನ್ನು ಎತ್ತಿ ಹಿಡಿಯಬೇಕು ಎಂದರು.
70 ವರ್ಷಗಳಿಂದ ಕಾಂಗ್ರೆಸ್‌ ದೇಶಕ್ಕೆ ಶಾಪವಾಗಿದೆ. ಕಳೆದ 7 ದಶಕಗಳಲ್ಲಿ ದೇಶವನ್ನು ಲೂಟಿ ಮಾಡಿ ನಷ್ಟ ಹೊಂದಿರುವುದನ್ನು ವರ್ಣಿಸಲು ಸಾಧ್ಯವಿಲ್ಲ. ಕಳೆದ 70 ವರ್ಷಗಳಲ್ಲಿ ಅದೆಷ್ಟೋ ರಾಷ್ಟ್ರಗಳು ನಿರ್ಮಾಣವಾದವು. ಆದರೆ ಅವುಗಳೆಲ್ಲ ಎಷ್ಟೋ ಅಭಿವ್ರದ್ಧಿ ಕಂಡಿವೆ. ಆದರೆ ನಮ್ಮ ದುರಾದೃಷ್ಟದಿಂದಾಗಿ ಕಾಂಗ್ರೆಸ್‌ನ ಮನೆಮುರುಕ ರಾಜಕಾರಣದಿಂದಾಗಿ ನಾವು ಇಂದು ಕೂಡಾ ಹಿಂದುಳಿದಿದ್ದೇವೆ. ಕಾಂಗ್ರೆಸ್‌ಗೆ ಕೇವಲ ಮತದಾರರನ್ನು ಖರೀದಿ ಮಾಡಿ ಆಡಳಿತ ನಡೆಸಿ ಗೊತ್ತಿದೆ. ಆದರೆ ಬಿಜೆಪಿ ಪ್ರಾಮಾಣಿಕತೆಯಿಂದ ಮತದಾರರಿಗೆ ಗೌರವ ನೀಡಿ ಮತ ಕೇಳುವ ಮೂಲಕ ಭಾರತೀಯ ಸಭ್ಯತೆಯನ್ನು ಮೆರೆದಿದ್ದೇವೆ. ಹೀಗಾಗಿ ಮತದಾರರು ಇದನ್ನು ಮನಗಂಡು ಭಾರತದ ಸಭ್ಯತೆ, ಸಂಸ್ಕೃತಿ, ಘನತೆ ಹಾಗೂ ಧರ್ಮವನ್ನು ಗೆಲ್ಲಿಸಿ ಎಂದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ 24 ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಿಲ್ಲೆಯ ಮುಗ್ದ ಯುವಕ ಪರೇಶ ಮೆಸ್ತಾನನ್ನು ಬಲಿ ತೆಗೆದುಕೊಂಡರು. ಎಲ್ಲಿಯವರೆಗೆ ಈ ಅನ್ಯಾಯ ಸಹಿಸಿ ಕೊಳ್ಳಬೇಕು? ಎಲ್ಲಿಯವರೆಗೆ ಹಿಂದೂಗಳ ರಕ್ತ ನೆಲಕ್ಕೆ ಬೀಳುತ್ತಿರಬೇಕು? ಎಲ್ಲಿಯವರೆಗೆ ನಮ್ಮ ಧರ್ಮಕ್ಕೆ ಅವಮಾನವಾಗುತ್ತಿರುಬೇಕು? ಎಂದು ಪ್ರಶ್ನಿಸಿದ ಅವರು ಬಿದ್ದಿರುವ ಒಂದೊಂದು ಹನಿ ರಕ್ತಕ್ಕೂ ಒಂದೊಂದು ಮತಗಳಿಂದ ಉತ್ತರಿಸಬೇಕು ಎಂದು ಕರೆ ನೀಡಿದರು. ಹಿಂದೂ ಧರ್ಮಕ್ಕೆ ಆದ ಅಪಮಾನವನ್ನು ಒಂದೊಂದು ಓಟಿನಿಂದ ತಿರಿಸಿಕೊಳ್ಳಬೇಕಾಗಿದೆ.
ಕ್ಷೇತ್ರದ ಜನರಿಗೆ ಕಾಂಗ್ರೆಸ್‌ ಸರಕಾರವು ಅಪಾರ ನೋವು ಹಾಗೂ ಕಷ್ಟವನ್ನೇ ನೀಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ 5 ವರ್ಷಗಳಲ್ಲಿ ಯವುದೇ ಅಭಿವೃದ್ಧಿಯಾಗಿಲ್ಲ. 5 ನೇ ವರ್ಷಕ್ಕೆ ಕೋಟಿ ಗಟ್ಟಲೇ ಹಣ ಬಿಡುಗಡೆಯಾಗಿದೆ. ವಷ್ಕೆ÷್ಕ 365 ದಿನಗಳು. ಆದರೆ ಇಂತಹ 5 ವರ್ಷಗಳನ್ನು ಕಷ್ಟದಿಂದ ದಿನಕಳೆದಿದ್ದೇವೆ. ರಸ್ತೆ, ನೀರು, ವಿದ್ಯುತ್‌ ಮಾತ್ರ ಅಭಿವೃದ್ಧಿ ಅಲ್ಲ. ಇವೆಲ್ಲ ಗ್ರಾಪಂ, ಜಿಪಂ ನಿಂದ ಆಗುವ ಕಾರ್ಯಗಳು. ಆದರೆ ಶಾಸಕರಾದವರು ಮಾಡ ಬೇಕಾದ ಅಭಿವೃದ್ಧಿ ಕಾರ್ಯಗಳೇ ಬೇರೆ ಇವೆ. ಆದರೆ ಈ ರೀತಿಯ ಯಾವುದೇ ಅಭಿವೃದ್ಧಿಗಳೂ ಆಗದೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಫಲಿತಾಂಶ ಶೂನ್ಯವಾಗಿದೆ ಎಂದು ಆರೋಪಿಸಿದರು. ಅನೇಕ ನಿರುದ್ಯೋಗಿಗಳಿದ್ದರೂ ಇದುವರೆಗೆ ಕ್ಷೇತ್ರಕ್ಕೆ ಯವುದೇ ಕೈಗಾರಿಕೆಗಳು ಬಂದಿಲ್ಲ. ಉದ್ಯೋಗವಿಲ್ಲದೆ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇವಕ್ಕೆಲ್ಲ ಒಂದೆ ಪರಿಹಾರ ಬಿಜೆಪಿ. ಹೀಗಾಗಿ ಕ್ಷೇತ್ರದ ಜನರು ಬಿಜೆಪಿಗೆ ಮತ ನಿಡುವ ಮೂಲಕ ಆರಿಸಿ ತರಬೇಕು ಎಂದು ಕೋರಿದರು.

loading...