ಅಭ್ಯರ್ಥಿಗಳ ಹಣೆಬರಹ ಮತ ಪೆಟ್ಟಿಗೆಯಲ್ಲಿ ಭದ್ರ : ಭವಿಷ್ಯದ ಚಿಂತನೆ-ಮಂಥನ

0
9
loading...

ನರಗುಂದ: ಚುನಾವಣೆ ಮತದಾನ ದಿನ ಮೇ. 12 ರಂದರ ಸಮಯ ಕಳೆದುಹೋಯಿತು. ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಭವಿಷ್ಯದ ಚಿಂತನೆ ಚುನಾವಣೆ ಫಲಿಂತಾಶದ ಮೇಲಿಟ್ಟಿದ್ದಾರೆ. ಮೇ. 15 ರಾಜಕೀಯ ಏಳು,ಬೀಳುಗಳನ್ನು ತಿಳಿಸುವ ಫಲಿಂತಾಶದ ದಿನ. ಮತದಾರರು ತಮ್ಮ ಮತಗಳನ್ನು ಮೇ. 12 ರಂದೇ ಮತದಾನ ಪೆಟ್ಟಿಗೆಯಲ್ಲಿ ಹಾಕಿ ಭದ್ರಪಡಿಸಿಕೊಂಡಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆಂಬುದು ಮೇ. 15 ರಂದು ನಡೆಯುವ ಮತಎಣಿಕೆ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಚುನಾವಣೆ ರಂಗದಲ್ಲಿ ಇದ್ದ ಅಭ್ಯರ್ಥಿಗಳು ಮತ ಎಣಿಕೆ ದಿನವನ್ನು ಕಾಯುವಂತಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಾತ್ರಿ ಹಗಲೆನ್ನದೇ ಸಂಚರಿಸಿದ ಅಭ್ಯಥಿಗಳು ಮತದಾನ ದಿನ ಮುಕ್ತಾಯಗೊಂಡಿದ್ದರೂ ಮನದಲ್ಲಿ ಏನೋ ತಳಮಳ. ಮನಶಾಂತಿಗಾಗಿ ತಡಕಾಡುವಂತಾಗಿದೆ. ಮೇ. 15 ರಂದು ಮತಎಣಿಕೆ ದಿನ ಇದಕ್ಕೆಲ್ಲ ತಕ್ಕ ಉತ್ತರ ದೊರೆಯಲಿದೆ.
ನರಗುಂದ ತಾಲೂಕ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಬಿ.ಆರ್. ಯಾವಗಲ್ ಕಳೆದ ಐದು ಬಾರಿ ಶಾಸಕರಾಗಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠ ಅವರದ್ದಾಗಿದೆ. ಮತದಾನ ದಿನ ಮೇ. 12 ಮುಕ್ತಾಯಗೊಂಡಿದೆ. ಮೇ. 13 ರಂದು ಯಾವಗಲ್ ತಮ್ಮ ಬೆಳಗಿನ ದಿನಚರಿ ಆರಂಭಿಸಿ ವಾಯುವಿಹಾರಕ್ಕೆ ತೆರಳಿ ನಂತರ ಬೆಳಿಗ್ಗೆ ಸ್ನಾನಮುಗಿಸಿ ಉಪಹಾರದ ನಂತರ ಬೆಳಿಗ್ಗೆ 9 ಗಂಟೆಗೆ ಕಾರ್ಯಾಲಯಕ್ಕೆ ಅಗಮಿಸಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಕ್ರಿಯೆ ಕುರಿತಂತೆ ಕಳೆದ ಒಂದು ತಿಂಗಳಿನಿಂದ ನಡೆದ ರಾಜಕೀಯ ವಿಧ್ಯಮಾನಗಳ ಕುರಿತು ಚರ್ಚಿಸಿದರು. ನಂತರ ಕೆಲ ಕಾರ್ಯಕರ್ತರೊಂದಿಗೆ ಯಾವಗಲ್ ಗ್ರಾಮಕ್ಕೆ ಭೇಟಿ ನೀಡಿದರು. ಮೇ. 12 ರಂದು ಮತದಾನ ಸಂದರ್ಭದಲ್ಲಿ ಬಿಜೆಪಿಯವರು ಹಲ್ಲೆ ಮಾಡಿದ್ದರಿಂದ ಸುಮಾರು 8 ಜನ ದಲಿತರು ಗಾಯಗೊಂಡು ಗದಗ ಆಸ್ಪತ್ರೆ ಸೇರುವಂತಾಗಿತ್ತು. ಈ ಘಟಣೆ ಕುರಿತು ಯಾವಗಲ್ ಗ್ರಾಮದಲ್ಲಿ ಶಾಸಕ ಯಾವಗಲ್ ಕಾರ್ಯಕರ್ತರೊಂದಿಗೆ ಚರ್ಚಿಸಿ ನಂತರ ಈ ಘಟಣೆಗಳಲ್ಲಿ ಗಾಯಗೊಂಡ ದಲಿತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು. ಮಾತೆತ್ತಿದರೆ ಸಂಸ್ಕøತಿಯ ಬಗ್ಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮಾತನಾಡುತ್ತಾರೆ. ಆದರೆ ಇಂತಹ ಗುಂಡಾಗಿರಿಯೇ ಬಿಜೆಪಿ ಸಂಸ್ಕøತಿ ಎಂದು ಅಭಿಪ್ರಾಯವ್ಯಕ್ತಗೊಳಿಸಿದ್ದಾರೆ. ಯಾವಗಲ್‍ದಲ್ಲಿ ನಡೆದ ಘಟಣೆಯಲ್ಲಿ ಗಾಯಗೊಂಡು ಗದಗ ಆಸ್ಪತ್ರೆ ಸೇರಿದ್ದ ಗಾಯಾಳುಗಳ ಬೇಟಿ ಮಾಡಿ ಅವರಿಗೆ ಶಾಸಕ ಯಾವಗಲ್ ಸಾಂತ್ವನ ತಿಳಿಸಿದರೆಂದು ಕಾಂಗ್ರೆಸ್ ಕಾರ್ಯಕರ್ತರೋರ್ವರು ಮಾಹಿತಿ ನೀಡಿದ್ದಾರೆ.

ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಮೇ. 13 ರಂದು ಬೆಳಿಗ್ಗೆ ತಮ್ಮ ದಿನಚರಿ ಮುಗಿಸಿ ತಮ್ಮ ನಿವಾಸದಲ್ಲಿಯ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರೊಂದಿಗೆ ಚುನಾವಣೆಯಲ್ಲಿ ಅಗಿದ್ದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿ ನಡೆಸಿದರು. ಹುಯಿಲಗೋಳ ಮತ್ತು ಕೆಲ ಗ್ರಾಮಗಳಲ್ಲಿ ಬಿಜೆಪಿ ಜೊತಗೆ ಕಾಂಗ್ರೆಸ್ಸಿನ ಕೆಲ ಕಾರ್ಯಕರ್ತರಿಂದ ಮೇ. 12 ರಂದು ಅಹಿತಕರ ವಾತಾವರಣ ಉಂಟಾಗಿದ್ದರ ಕುರಿತು ದೂರವಾಣಿ ಮೂಲಕ ಮಾಹಿತಿ ಅರಿತುಕೊಂಡರು. ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಮತದಾನ ಪೂರ್ವದಲ್ಲಿ ಕಳೆದ 15 ದಿನಗಳಿಂದ ನಡೆದ ರಾಜಕೀಯ ಚಟುವಟಿಕೆಗಳ ಕುರಿತು ವಿವಿಧ ಗ್ರಾಮದ ಬಿಜೆಪಿ ಕಾರ್ಯಕರ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಸಂಗ್ರಹಿಸಿದರು. ಮತಕ್ಷೇತ್ರ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಮಾಡಿದ ದಬ್ಬಾಳಿಕೆ ಘಟಣೆಗಳ ಸಮಗ್ರ ಮಾಹಿತಿ ಸಂಗ್ರಹಿಸಿದರು.
ಜೆಡಿಎಸ್ ಅಭ್ಯರ್ಥಿ ಗಿರಿಮಲ್ಲನಗೌಡ ಪಾಟೀಲ, ಮೇ. 13 ರಂದು ತಮ್ಮ ಕಾರ್ಯಾಲಯಕ್ಕೆ ಮಧ್ಯಾಹ್ನ 2 ಗಂಟೆಗೆ ಆಗಮಿಸಿ ಚುನಾವಣೆ ಪೂರ್ವ ಜೆಡಿಎಸ ಪಕ್ಷದಿಂದ ನಡೆಸಿದ ಚುನಾವಣೆ ಪ್ರಚಾರ ಮತ್ತು ಕೆಲ ಗ್ರಾಮಗಳಲ್ಲಿ ಇತರ ಪಕ್ಷಗಳಿಂದ ಜೆಡಿಎಸ್‍ಗೆ ಸೇರಿದ ಕಾರ್ಯಕರ್ತರ ಕುರಿತು ಜೆಡಿಎಸ್ ತಾಲೂಕ ಪ್ರಮುಖರ ಜೊತೆ ಚರ್ಚೆನಡೆಸಿದರು. ಜೆಡಿಎಸ್ ಪಕ್ಷವನ್ನು ಮುಂದಿನ ದಿನಗಳಲ್ಲಿಯೂ ಹೆಚ್ಚು ಬಲಿಷ್ಟಗೊಳಿಸಲು ಶ್ರಮಿಸುವ ಕುರಿತು ಕಾರ್ಯಕರ್ತರೊಂದಿಗೆ ಪಾಟೀಲ ಚರ್ಚೆ ನಡೆಸಿ, ಈಗಿನಂತೆ ಪಕ್ಷಕ್ಕೆ ನೀಡಿದ ಸಹಕಾರ ಮುಂದೆಯೂ ಕಾರ್ಯಕರ್ತರು ನೀಡಬೇಕೆಂದು ಕಾರ್ಯಕರ್ತರಲ್ಲಿ ಕೋರಿದರೆಂದು ಜೆಡಿಎಸ್ ಮುಖಂಡರೋರ್ವರು ವಿವರಿಸಿದರು.

loading...