ಅರ್ಬನ್‌ ಬ್ಯಾಂಕಿಗೆ 40 ಲಕ್ಷ ರೂ. ಲಾಭಾಂಶ: ಗಿರಡ್ಡಿ

0
16
loading...

ಇಳಕಲ್‌s: ನಗರದ ಪ್ರತಿಷ್ಟಿತ ಹಣಕಾಸು ಸಂಸ್ಥೆಯಾಗಿರುವ ಅರ್ಬನ ಕೋ ಆಪ್‌ ಬ್ಯಾಂಕಿಗೆ 2017-18 ನೇ ಸಾಲಿನಲ್ಲಿ 40 ಲಕ್ಷ ರೂಪಾಯಿ ಲಾಭಾಂಧವಾಗಿದೆ ಎಂದು ಬ್ಯಾಂಕ ಅಧ್ಯಕ್ಷ ವಿಜಯ ಗಿರಡ್ಡಿ ಹೇಳಿದರು. ಅವರು ಬ್ಯಾಂಕಿನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಉತ್ತಮವಾದ ಬ್ಯಾಂಕಿಗೆ ಸೇವೆಗಳನ್ನು ಗ್ರಾಹಕರಿಗೆ ಮತ್ತು ಸದಸ್ಯರಿಗೆ ನೀಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಬ್ಯಾಂಕಿಗೆ 20986 ಸದಸ್ಯರಿದ್ದು ಶೇರು ಬಂಡವಾಳ 735.69 ಲಕ್ಷರೂ ನಿಧಿಗಳಯ 2949.49 ಲಕ್ಷ ಠೇವುಗಳ 25546.8 ಲಕ್ಷ ರೂಗಳಾಗಿವೆ. ಸಾಲ ಬರತಕ್ಕ ಕೂ 150 73 ಕೋಟಿ ಒಟ್ಟು ದುಡಿಯುವ ಬಂಡವಾಳ 297.03 ಕೋಟಿಗಳೆ ಎಂದು ಕೊನೆಗೊಂಡ ಹಣಕಾಸು ವರ್ಷದ ಅಂಕಿ-ಅಂಶಗಳನ್ನು ವಿವರಿಸಿದರು ಬ್ಯಾಂಕ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲ ಸಿಬ್ಬಂದಿ ಹಾಗೂ ಬ್ಯಾಂಕಿನ ವಸೂಲಾತಿ ಸಿಬ್ಬಂದಿಗಳನ್ನು ಅಧಿನಂದಿಸಿದರು. ಬ್ಯಾಂಕಿನ ಎಟಿಎಂ ಕುರಿತು ಮಾತನಾಡಿದ ಅವರು ಸದರಿ ವಿಷಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಬ್ಯಾಂಕಿನ ನಿರ್ದೆಶಕ ನಾಗಪ್ಪ ಕನ್ನೂರ, ಲಕ್ಷ್ಮಣ ಗುರುಂ, ಪಂಪಣ್ಣ ಕಾಳಗಿ, ಲಲೀತಾ ಸಪ್ಪರದ, ಬಸವರಾಜ ತಾಳಿಕೋಟಿ, ಅರವಿಂದ ಮುಂಗಳೂರ, ಡಾ. ಅರುಣಾ ಅಕ್ಕಿ, ಕಾನೂನು-ತಜ್ಞ ನಿದೇಶಕ ಸಿದ್ರರಾಮಪ್ಪ ಮನ್ನಾಪೂರ, ಕೆ.ಎಸ್‌ ಕಂದಿಕೊಂಡ ಹಾಗೂ ಹಿರಿಯ ವ್ಯವಸ್ಥಾಪಕ ಸಿ.ಎಂ ಸಜ್ಜನ, ಸಿ.ಟಿ ವಂದಕುದರಿ ಬ್ಯಾಂಕಿನ ಸಿಇಓ ಸಿಎಂ ಶಾಸ್ತ್ರಿ ಸ್ವಾಗತಿಸಿದರು ಸಲಹೆಗಾರರಾದ ಸಿ.ಎಸ್‌ ದಟ್ಟ ವಂದಿಸಿದರು.

loading...