ಆರ್ಸಿಬಿಗೆ ೧೦ ವಿಕೆಟ್ ಗಳ ಗೆಲುವು, ಪ್ಲೇ ಆಪ್ ಕನಸು ಜೀವಂತ

0
35
loading...

ಇಂದೊರ್ : ಇಲ್ಲಿನ ಹೋಳ್ಕರ್ ಮೈದಾನದಲ್ಲಿ ವಿರಾಟ್ ಪಡೆ ಪಂಜಾಬ್ ವಿರುದ್ದ ೧೦ ವಿಕೆಟ್ಗಳ ಭರ್ಜರಿ ಗೆಲುವು ಬಾರಿಸಿದೆ. ಈ ಮೂಲಕ ವಿರಾಟ್ ಪಡೆ ಪ್ಲೇ ಆಪ್ ಕನಸು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಬೌಲಿಂಗ್ ಮಾಡಿದ ಆರ್ಸಿಬಿ ಆರಂಭದಿಂದಲೇ ಪಂಜಾಬ್ ತಂಡದ‌ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಆರ್ಸಿಬಿ ಮಾರಕ ದಾಳಿಗೆ ಪಂಜಾಬ್ ತಂಡ ಕೇವಲ ೮೮ ರನ್ಗಳಿವೆ ಸರ್ವಪತನ ಕಂಡಿತು.
ಇದಕ್ಕೂತವಾಗಿ ಬ್ಯಾಟ್ ಮಾಡಿದ ಬೆಂಗಳೂರ ರಾಯಲ್ ಚಾಲೆಂಜರ್ಸ್ ೧೦ ವಿಕೆಟ್ ಗಳ ಭರ್ಜರಿ ಗೆಲುವು ಬಾರಿಸಿದೆ.೮.೧ ಓವರಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಈ ಹೊಸ ದಾಖಲೆ ಬರೆದಿದೆ. ಪಾರ್ಥಿವ ೪೦ ಹಾಗೂ ನಾಯಕ ವಿರಾಟ್ ೪೮ ರನ್ ಮಾಡಿದರು. ಇದಕ್ಕು ಮೊದಲು ಟಾಸ್ ಸೋತು ಬ್ಯಾಟಿಂಗ ಮಾಡಿದ ಪಂಜಾಬ್ ತಂಡ ಕಳಪೆ ಪ್ರದರ್ಶನ ನೀಡಿತು.
ಟೂರ್ನಿಯೂದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ 3 ಸಿಕ್ಸರ್ ಗಳ ನೆರವಿನಿಂದ ೨೧ ರನ್ ಮಾಡಿ ಉಮೇಶ್ ಗೆ ವಿಕೆಟ್ ನೀಡಿ ಹೊರ ನಡೆದರು.
ಬಳಿಕ ಬಂದ ನಾಯರ್ ಬಂದ ಹಾದಿಯಲ್ಲೆ ಮರಳಿದರು. ಗೇಲ್ ಕೆಲ ದೊಡ್ಡ ಹೊಡೆತಗಳ ಮೂಲಕ ರಂಜಿಸಿದರು. ಸಿಕ್ಸ್ ಹೊಡೆಯುವ ತವಕದಲ್ಲಿ ಸಿರಾಜ್ ಗೆ ಕ್ಯಾಚ್ ನೀಡಿ ಉಮೇಶ್ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಯಾವುದೇ ಆಟಗಾರ ಪಂಜಾಬ್‌ ತಂಡದ ಪರ ರನ್ ಮಾಡುವ ಗೋಜಿಗೆ ಹೋಗಲಿಲ್ಲ. ಫಿಂಚ್ ಗಳಿಸಿ ೨೬ ರನ್ ವೈಯಕ್ತಿಕ ಗರಿಷ್ಠ ಸ್ಕೋರ ಆಗಿತ್ತು ಈ ಮೂಲಕ ೧೫.೧ ಓವರ್ ನಲ್ಲಿ ೮೮ ರನಗಳಿಗೆ ಪಂಜಾಬ್ ತಂಡ ಸರ್ವ ಪತನ ಕಂಡಿತು.
ಆರ್ಸಿಬಿ ಪರ ಉಮೇಶ್ ಯಾಧವ್ ೨೩ ರನ್ ನೀಡಿ. ಪ್ರಮುಖ ೩ ವಿಕೆಟ್ ಪಡೆದರು. ಅಲಿ, ಸಿರಾಜ್, ಚಹಲ್ ಗ್ರ್ಯಾಂಡ್ ಹೋಂ ತಲಾ ಒಂದೊಂದು ವಿಕೆಟ್ ಪಡೆದರು.
ಈ ಐಪಿಎಲ್ ನಲ್ಲಿ ಪಂಜಾಬ್ ೮೮ ರನ್ ಎರಡನೇ ಕಡಿಮೆ ಸ್ಕೋರ್ ಆಗಿದೆ.

loading...