ಆರ್.ಆರ್. ನಗರ ಚುನಾವಣಾ ಮತಎಣಿಕೆ ಆರಂಭ, ಕಾಂಗ್ರೆಸ್ ಮುನಿರತ್ನ ಮುನ್ನಡೆ

0
16
loading...

ಬೆಂಗಳೂರು- (ಹ ರಾಜ್ಯ ವಿಧಾನಸಭಾ ಚುನಾವಣೆ ನಂತರ ಮಿನಿ ಸಮರ ಎಂದೇ ಬಿಂಬಿತವಾಗಿರುವ ರಾಜರಾಜೇಶ್ವರಿ ನಗರ ಕ್ಷತ್ರದ ಫ‌ಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಮೈಸೂರು ರಸ್ತೆ ಹಲಗೆವಡೇರಹಳ್ಳಿಯ ಶ್ರೀ ಜ್ಞಾನಶಕ್ತಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರು ಆರಂಭದಲ್ಲೇ ಭಾರಿ ಮುನ್ನಡೆ ಸಾಧಿಸಿದ್ದಾರೆ. 7 ಸುತ್ತಿನ ಮತ ಎಣಿಕೆಯ ಬಳಿಕ ಮುನಿರತ್ನ ಅವರು 61,517 ಮತಗಳು, ಮುನಿರಾಜು ಗೌಡ ಅವರು 25,225 ಮತಗಳು ಮತ್ತು ಜೆಡಿಎಸ್‌ನ ರಾಮಚಂದ್ರ ಅವರು 11,626 ಮತಗಳನ್ನು ಪಡೆದಿದ್ದಾರೆ. ಮುನಿರತ್ನ 36,292 ಮತಗಳ ಅಂತರದ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಹುಚ್ಚ ವೆಂಕಟ್‌ಗೆ 193 ಮತಗಳು ನೋಟಾಗೆ 799 ಮತಗಳು ಚಲಾವಣೆಯಾಗಿವೆ. ಮೊದಲ ಸುತ್ತಿನಲ್ಲಿ ಮುನಿರತ್ನ ಅವರು 9,342 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಮುನಿರಾಜುಗೌಡ 5,520 ಹಾಗು ಜೆಡಿಎಸ್‌ನ ರಾಮಚಂದ್ರ ಅವರು 1,539 ಮತಗಳನ್ನು ಪಡೆದಿದ್ದಾರೆ.
ಒಟ್ಟು 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಪಕ್ಷೇತರ ಹುಚ್ಚ ವೆಂಕಟ್‌ ಸೇರಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿ ಅಗತ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಮತ ಎಣಿಕೆ ಸುತ್ತ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

loading...