ಇಂದ್ರಧನುಷ್ ಲಸಿಕಾ ಕಾರ್ಯಕ್ರಮ

0
39
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಗ್ರಾಮ ಸ್ವರಾಜ್ಯ ಅಭಿಯಾನದಡಿಯಲ್ಲಿ ತೀವ್ರಗೊಂಡ ಮಿಷನ್ ಇಂದ್ರಧನುಷ್ ಕಾರ್ಯಕ್ರಮವನ್ನು ತಾಲೂಕಿನ ಅಗಡಿ, ರಾಮಾಪುರ ಹಾಗೂ ನಾಗನೂರು ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಗರ್ಭಿಣಿಯರಿಗೆ ಟಿ.ಟಿ, ಹಾಗೂ 2 ವರ್ಷದೊಳಗಿನ ಮಕ್ಕಳಿಗೆ ಬಿ.ಸಿ.ಜಿ, ಪೋಲಿಯೋ, ದಡಾರ ಮತ್ತು ರುಬೆಲ್ಲಾ, ಪ್ರತ್ಯೇಕ ಲಸಿಕೆ ಹಾಗೂ ಡಿ.ಪಿ.ಟಿ, ಊeಠಿಚಿಣiಣis-ಃ, Iಟಿಜಿಟueಟಿzಚಿ – ಃ, ಸೇರಿರುವ ಪೆಂಟಾವೆಲೆಂಟ್, 5 ರಿಂದ 6 ವರ್ಷದ ಮಕ್ಕಳಿಗೆ ಡಿ.ಪಿ.ಟಿ ಬೂಸ್ಟರ್ ನೀಡಲಾಗುವುದು. ಯಾವುದೇ ಗರ್ಭಿಣಿ ಹಾಗೂ 0-2 ವರ್ಷದೊಳಗಿನ ಮತ್ತು 5 ರಿಂದ 6 ವರ್ಷದೊಳಗಿನ ಲಸಿಕೆಯಿಂದ ವಂಚಿತರಾದ ಮಕ್ಕಳಿಗೆ ಲಸಿಕೆ ಹಾಕಿಸಿ ಮಕ್ಕಳಿಗೆ 8 ಮಾರಕ ರೋಗಗಳಿಂದ ರಕ್ಷಿಸಲು ಲಸಿಕೆ ಹಾಕುವಂತೆ ತಿಳಿಸಲಾಯಿತು.
ಸಂಪೂರ್ಣ ಲಸಿಕೆ ಪಡೆಯುವುದು ಪತ್ರಿ ಮಗುವಿನ ಜನ್ಮಸಿದ್ದ ಹಕ್ಕು ಹಾಗೂ ಲಸಿಕೆಗಳನ್ನು ಕೊಡಿಸುವುದು ಪೋಷಕರ ಕರ್ತವ್ಯವೆಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ಶಾಂತಲಾ ಕೆ.ಎಸ್. ಹೇಳಿದರು. ತಾ.ಪಂ ಸದಸ್ಯೆ ಸುನಿತಾ ಲಮಾಣಿ, ಗ್ರಾ.ಪಂ ಸದಸ್ಯ ರಾಮು ಲಮಾಣ, ರಾಜ್ಯಮಟ್ಟದ ನೋಡಲ್ ಅಧಿಕಾರಿ ಡಾ. ಸೆಲ್ವರಾಜ್, ಡಾ. ಸಿದ್ದಲಿಂಗಯ್ಯಾ, ಜಿಲ್ಲಾ ಮಟ್ಟದಿಂದ ಡಾ. ಶರದ ನಾಯಕ್, ಎಸ್.ಜಿ ನಾಯ್ಕ. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ತಾಲೂಕಾ ನೋಡಲ್ ಅಧಿಕಾರಿಗಳಾದ ಡಾ. ರಮೇಶ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಹಾಗೂ ಗ್ರಾಮಸ್ಥರು, ಆರೋಗ್ಯ ಕಾರ್ಯಕರ್ತರು, ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತದ್ದರು.

loading...