ಈ ಬಾರಿ ಶಾಸಕನಾಗಲು ನನ್ನ ಹಣೆ ಬರಹದಲ್ಲಿ ಬರೆದಿಲ್ಲ: ಜಗದೀಶಗೌಡ

0
13
loading...

ಕನ್ನಡಮ್ಮ ಸುದ್ದಿ-ಬೀಳಗಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಗಲಿರಳು ಶ್ರಮಿಸಿದ ಪ್ರತಿಫಲವಾಗಿ 80 ಸಾವಿರ ಮತದಾರರು ನನಗೆ ಮತ ನೀಡುವ ಮೂಲಕ ಜನ ಪರ ಕೆಲಸಗಳಿಗೆ ಬೆಂಬಲಿಸಿದ್ದು, ಈ ಸಲ ನನಗೆ ಶಾಸಕನಾಗಲು ನನ್ನ ಹಣೆ ಬರಹದಲ್ಲಿ ಬರೆದಿಲ್ಲ ಅದಕ್ಕಾಗಿ ನಾನು ಪರಾಭವಗೊಂಡಿದ್ದು ಯಾವದೇ ಕಾರ್ಯಕರ್ತರನಾಗಲಿ ಮುಖಂಡರನ್ನಾಗಲಿ ದೋಷಿಸುವದಿಲ್ಲ ಎಂದು ಮಾಜಿ ಶಾಸಕ ಜಗದೀಶಗೌಡ ಪಾಟೀಲ ನೊಂದು ನುಡಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ವಿಧಾನ ಸಭೆಯ ಚುಣಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಗಲಗಲಿ ಜಿ.ಪಂ. ಸದಸ್ಯತ್ವದ ಉಪಚುಣಾವಣೆಯ ಬಗ್ಗೆ ಚರ್ಚಿಸಲು ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಾಡಿಗೆ ನೀಡಿರುವ ಜನ ಪರ ಕಾರ್ಯಕ್ರಮಗಳಿಗೆ ಮನ್ನಣೆ ಸಿಗದಿರುವದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿ ಮತಕ್ಷೇತ್ರದ ಅಭಿವೃದ್ಧಿಗಾಗಿ 18 ನೂರು ಕೋಟಿ ಅನುಧಾನದ ತಂದಿದ್ದು ನಾವು ಮಾಡಿರುವ ಜನ ಪರ ಕೆಲಸದ ಮೇಲೆ ಆಯ್ಕೆಯಾಗುವದು ಕಷ್ಟ ಎಂದರು. ಮೀತಿಯಲ್ಲಿ ತಲುಪಿಸಬೇಕಾದ ಸರಕಾರದ ಯೋಜನೆಗಳು ಕೆಲವರಿಗೆ ಸಿಗದೆ ಅಸಮಾದಾನವು ನನ್ನ ಸೋಲಿಗೆ ಕಾರಣವಾಗಿರಬಹುದು ಎಂದರು. ನನ್ನ ಸೋಲಿನಿಂದ ಯಾರು ದೃತಿಗೆಡದೆ ಯಾವುದೇ ಕೆಲಸಗಳು ಇದ್ದರೆ ಅವುಗಳನ್ನು ನಮ್ಮ ಶಾಸಕ ಸಚಿವರಿಂದ ಮಾಡಿಸೋಣ ನಮ್ಮ ಕಾರ್ಯಕರ್ತರಿಗೆ ವಿರುದ್ಧ ಪಕ್ಷದವರಿಂದ ತೊಂದರೆ ಆದರೆ ನಾವು ಸಹಿಸುವದಿಲ್ಲ ಎಂದು ಎಚ್ಚರಿಸಿದರು. ಗಲಗಲಿ ಜಿ.ಪಂ. ಸದಸ್ಯ ಉಪ ಚುಣಾವಣೆಯಲ್ಲಿ ಸೂಕ್ತ ಅಭ್ಯಥಿಯನ್ನು ಪ್ರತಿಯಬ್ಬರ ವಿಶ್ವಾಸ ತೆಗೆದುಕೊಂಡು ಆಯ್ಕೆ ಮಾಡಿ ಎಂದು ಪಕ್ಷದ ಪಧಾಧಿಕಾರಿಗಳಿಗೆ ಸೂಚಿಸಿದರು.

ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ, ತಾ.ಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಪಕ್ಷದ ಮುಖಂಡರಾದ ಸತ್ಯಪ್ಪ ಮೇಲನಾಡ ಮಲ್ಲಿಕಾರ್ಜುನ ಅಂಗಡಿ, ಎಂ.ಬಿ.ಕಂಬಿ, ಶಿವಾನಂದ ನಿಂಗನೂರ, ಭೀಮಣ್ಣ ಮೊಕಾಶಿ, ಶ್ರೀಶೈಲ ಅಂಟಿನ, ಚಂದ್ರು ಕಾಖಂಡಕಿ, ಮಹಾದೇವಪ್ಪ ಸೂಳಿಕೇರಿ, ಗೋವಿಂದಪ್ಪಗೌಡ ಪಾಟೀಲ, ಎಂ.ಎಲ್. ಕೆಂಪಲಿಂಗನ್ನವರ, ಎಸ್.ಟಿ.ಪಾಟೀಲ, ಮಲ್ಲಪ್ಪ ಕಾಳಗಿ ಯಮನಪ್ಪ ರೊಳ್ಳಿ ಇದ್ದರು. ಕೋಟ ಜೆ.ಡಿ.ಎಸ್ ಹಾಗೂ ಕಾಂಗ್ರೇಸ್ ಪಕ್ಷದ ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದ್ದು ನಮ್ಮ ಶಾಸಕರಾದ ಜೆ.ಟಿ. ಪಾಟೀಲರು ಅವರು ಮಾಜಿ ಅಲ್ಲ ಹಾಲಿ ಶಾಸಕರು ಎಂದು ಭಾವಿಸೋಣ, ಕಾರ್ಯಕರ್ತರ ಯಾವುದೇ ಕೆಲಸಗಳಿದ್ದರು ಅವುಗಳನ್ನು ಮಾಡಿಸುತ್ತಾರೆ ಯಾವುದೇ ಕಾರ್ಯಕರ್ತರು ಚಿಂತಿಸುವ ಅಗತ್ಯವಿಲ್ಲ ಎಂದರು. ಶಿವಾನಂದ ನಿಂಗನೂರ ಕಾಂಗ್ರೇಸ್ ಮುಖಂಡರು.

loading...