ಉತ್ತಮ ರಾಷ್ಟ್ರ ನಿರ್ಮಿಣಕ್ಕೆ ಯುವಕರ ಪಾತ್ರ ಮಹತ್ವದ್ದು: ಶ್ರೀಗಳು

0
11
loading...

ನರಗುಂದ: ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿ ಸತ್ಪ್ರಜೆಗಳಾಗಿ ಉತ್ತಮ ರಾಷ್ಟ್ರ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ತರವಾದದ್ದು ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಕ ವೇದಿಕೆ ಇವರ ಆಶ್ರಯದಲ್ಲಿ ಇತ್ತಿಚೇಗೆ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಪ್ರಗತಿಯನ್ನು ಉತ್ತಮ ಹಾದಿಯಲ್ಲಿ ಸಾಗಿಸಲು ಮತ್ತು ವ್ಯಕ್ತಿಯ ಸರ್ವತೋಮುಖ ಏಳ್ಗೆಯ ಒಂದು ಪ್ರಮುಖ ಸಾಧನ ಶಿಕ್ಷಣ. ಹೀಗಾಗಿ ವಿದ್ಯಾರ್ಥಿಗಳಾದವರು ಓದು ಕೇವಲ ಅಂಕಗಳಿಗಾಗಿ ಸೀಮಿತವಾಗದೆ ಆ ಮೂಲಕ ಉತ್ತಮ ಜ್ಞಾನ ಸಂಪಾದನೆ ಮಾಡಿ ಸಚ್ಚಾರಿತ್ರ್ಯವಂತ ಸಮಾಜ ನಿರ್ಮಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ಶಿಕ್ಷಕ ಪಿ.ಸಿ.ಕಲಹಾಳ ಮಾತನಾಡಿ, ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು ನಿರಂತರ ಶಿಕ್ಷಣ ಪಡೆಯುವ ಮಕ್ಕಳ ಶೇಯಸ್ಸಿಗಾಗಿ ಶುಭ ಹಾರೈಕೆಮಾಡುತ್ತಿರುವ ಹೆಗ್ಗಳಿಕೆ ಗುಣಹೊಂದಿದ್ದಾರೆ. ಶಿಕ್ಷಣ ಪ್ರೇಮ ಅಪಾರವಾದದ್ದು. ಶ್ರೀಗಳು ಮಾಡಿದ ಸತ್ಕಾರ ನಿಮ್ಮ ಹೆಚ್ಚಿನ ಸಾಧನೆಯ ಪ್ರತೀಕ. ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ವಿದ್ಯಾರ್ಥಿಗಳು ಆಸಕ್ತಿಯಿಂದ ಓದಿ ಜ್ಞಾನಾರ್ಜನೆಗಳಿಸಿಕೊಂಡು ತಂದೆ-ತಾಯಿಗಳ, ಗುರುಹಿರಿಯರಿಗೆ ಗೌರವ ಕೊಡುವುದರ ಮೂಲಕ ಅವರಿಗೆ ಕೀರ್ತಿ ತಂದುಕೊಡಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಗೊಂಡ ಲಯನ್ಸ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿನಿ ಶಾರದಾ ಎಮ್.ಬೆಳಗಾವಿ, ದ್ವಿತಿಯ ಸ್ಥಾನ ಪಡೆದ ಚಿಕ್ಕನರಗುಂದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಪ್ರೀಯಾಂಕ ರಾಂಪೂರ, ತೃತೀಯ ಸ್ಥಾನ ಪಡೆದ ಲಯನ್ಸ ಆಂಗ್ಲ ಮಾದ್ಯಮ ಶಾಲೆಯ ಪಲ್ಲವಿ ಪಟ್ಟಣಶೆಟ್ಟಿ, ನಾಲ್ಕನೆ ಸ್ಥಾನ ಪಡೆದ ಚೆನ್ನಮ್ಮ ಚಿನ್ನಪ್ಪಗೌಡ್ರ ಹಾಗೂ ಭೈರನಹಟ್ಟಿ ಸರಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ವಿಠ್ಠಲ ಬಸವರಾಜ ಸಂಗಳದ ಅವರನ್ನು ಶ್ರೀಮಠದಿಂದ ಪ್ರತಿಭಾಪುರಸ್ಕಾರ ನೀಡಿ ಸತ್ಕರಿಸಲಾಯಿತು.
ದೇವರಶಿಗೆಹಳ್ಳಿಯ ಪೂಜ್ಯಶ್ರೀ ವಿರೇಶ್ವರ ದೇವರು, ಬೆಳವಟಗಿಯ ಆತ್ಮೇಶ್ವರ ಶ್ರೀಗಳು, ಬಸಯ್ಯ ಶಾಸ್ತ್ರೀಗಳು, ಶಿಕ್ಷಕ ಎಸ್.ಜಿ.ಮಣ್ಣೂರಮಠ, ಶಂಕರ ಕಳಿಗಣ್ಣವರ, ವಾಯ್.ಜಿ.ಪಾಟೀಲ, ಮಂಜು ಬೆಳಗಾವಿ ಉಪಸ್ಥಿತರಿದ್ದರು.
ಮಹಾಂತೇಶ ಹಿರೇಮಠ, ಮಹಾಂತೇಶ ನರಿಯಣ್ಣವರ ನಿರ್ವಹಿಸಿದರು.

loading...