ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿಯಾಗಿವೆ: ಫಕೀರೇಶ್ವರ ಶ್ರೀ

0
45
loading...

ಕನ್ನಡಮ್ಮ ಸುದ್ದಿ-ಬೆಟಗೇರಿ: ಜಗತ್ತಿನ ಎಲ್ಲ ಧರ್ಮದ ತತ್ವ ಸಿದ್ಧಾಂತಗಳು ಸಕ್ಕರೆಯಂತೆ ಸವಿ ಸವಿಯಾಗಿವೆ. ಒಳ್ಳೆಯ ಮಾರ್ಗದರ್ಶನ ನೀಡುವ ತತ್ವ ಸಿದ್ಧಾಂತಗಳಾಗಿವೆ. ಆದರೆ ಮನುಷ್ಯನಿಗೆ ಸಕ್ಕರೆ ಕಾಯಿಲೆಯಾದರೆ ಸಕ್ಕರೆ ದ್ವೇಷಿಸುವುದು ಬೇಡ. ಹೀಗಾಗಿ ನರಜೀವಿಯ ಭಾವನೆಗಳಿಗೆ ತಕ್ಕಂತೆ ಹಲವು ತತ್ವ ಸಿದ್ದಾಂತಗಳು ತನಗೆ ಬೇಡವಾಗಿವೆ ಎಂದು ಶಿರಹಟ್ಟಿಯ ಜಗದ್ಗುರು ಫಕೀರಸಿದ್ದರಾಮ ಮಹಾಸ್ವಾಮಿಜಿ ಹೇಳಿದರು.

ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಸೋಮವಾರ ಆಯೋಜಿಸಿರುವ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾಜುನ ಮಹಾ ಶಿವಯೋಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಪ್ಪರಗಿಯ ಶಿವರುದ್ರ ಶರಣರು ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ಶಿರಗುಪ್ಪಿಯ ಅಪ್ಪಸಾಹೇಬ ಬಡಿಗೇರ ತಬಲಾ ಸಾಥದೊಂದಿಗೆ ಹಿರೇಕೊಪ್ಪದ ಸಂಕಪ್ಪ ಗುರುಗಳಿಂದ ಸಂಗಿತ ಕಾರ್ಯಕ್ರಮ ಜರುಗಿತು. ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಜಿ, ಚುಳಕಿ ಗವಿಮಠದ ವೀರಸಂಗಯ್ಯ ಮಹಾಸ್ವಾಮಿಜಿ, ಬೆಂಗಳೂರಿನ ಅಶ್ವತಪ್ಪ ಅಜ್ಜನವರು ಸೇರಿದಂತೆ ಜನ ಸಂತ-ಶರಣರು, ಆಧ್ಯಾತ್ಮ ಆಸಕ್ತರು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀ ಮಠದ ಭಕ್ತರು, ಇತರರು ಇದ್ದರು.

ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಶರಣರು ಕೊನೆಗೆ ವಂದಿಸಿದರು.
ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ :ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ಒಂದು ತಿಂಗಳು ಕಾಲ ವಿರುಪಾಕ್ಷ ಪಂಡಿತಾರಾಧ್ಯ ವಿರಚಿತ ಶ್ರೀ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ 8 ಗಂಟೆ ತನಕ ಯೋಗ ಮತ್ತು ಪರಿಸರ ಪ್ರವಚನ ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕøತ ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಜಿ ಅವರಿಂದ ನಡೆಯಲಿದೆ. ಪ್ರತಿದಿನ ಸಂಜೆ 7.30 ರಿಂದ 9 ಗಂಟೆ ತನಕ ಹಿಪ್ಪರಗಿಯ ಶಿವರುದ್ರ ಶರಣರು ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಚೆನ್ನಬಸವ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

loading...