ಒಂದು ಲಕ್ಷದವರಗೆ ರೈತರ ಸಾಲ ಮನ್ನಾ: ಹಾಲಪ್ಪ

0
14
loading...

ಕುಕನೂರ : ನಾಡಿನಲ್ಲಿ ಈ ಸಾರಿ ನಮ್ಮ ಬಿ ಜೆ ಪಿ ಸರಕಾರ ಅದಿಕಾರಕ್ಕೆ ಬರುವುದು ಶತಸಿದ್ದ ಬಂದ ತಕ್ಷಣ ಒಂದು ಲಕ್ಷದವರಗೆ ಎಲ್ಲಾ ನಮ್ಮ ರತೈರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು.ನೀರಾವರಿಗೆ ನನ್ನ ಮೂದಲ ಆದ್ಯೆತೆ ಎಂದು ಯಲಬುರ್ಗ ತಾಲೂಕಿನ ಭಾಜಪಾ ಅಭ್ಯಾರ್ಥಿ ಹಾಲ್ಲಪ್ಪ ಆಚಾರ ಹೇಳಿದರು.
ಪಟ್ಟಣದ ಮಹಾಮಾಯ ತೇರಿನ ಗಡ್ಡಿಯಲಿ ಚುನಾವಣೆ ಪ್ರಚಾರದ ಸಭೆಯಲ್ಲಿ ಮಾತಯಾಚನೆ ಮಾಡಿ ಮಾತನಾಡಿದ ಅವರು .ನಮ್ಮ ಈ ಹಿಂದೆ ರಾಜ್ಯದಲ್ಲಿ ಬಿ ಜೆ ಪಿ ಸರ್ಕಾರದಲ್ಲಿ ಆಡಳಿತದಲ್ಲಿದ್ದಾಗ ರೈತರಿಗೆ ಮಹೀಳಿಯರಿಗೆ ಶಾಲಾ ಮಕ್ಕಳ ಶಿಕ್ಷಣಕ್ಕೆ ಪೊರಕವಾದಂತ ಅನಕೋಲಗಳು ಮಾಡಲಾಗಿತ್ತು ವೃದ್ದಾಪ್ಯ ಸಂಧ್ಯಾ ಸುರಾಕ್ಷಾ ಯೋಜನೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌, ಕೃಷಿ ಬಜೆಟ್‌, ಬಡ್ಡಿ ಇಲ್ಲದೇ ರೈತರಿಗೆ ಸಾಲ, ಹಾಲಿಗೆ ಪ್ರೋತ್ಸಾಹ ಧನ, ಮಹಿಳಾ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಎಸ್‌ಸಿ ಎಸ್‌ಟಿ, ಶೇ.70ರಷ್ಟು ಅಂಕ ಪಡೆದರೇ ಅವರಿಗೆ 10ಸಾವಿರ, ಶೇ.70ಕ್ಕಿಂತ ಕಡಿಮೆ ಮಾಡಿದ್ದರೇ 5ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದೇವು.
ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದೇವೆ, ಕಾಂಗ್ರೆಸ್‌ ಸರಕಾರ ಈ ಐದು ವರ್ಷಗಳ ಕಾಲ ಆಡಳಿತ ನಡೆಸುತ್ತಿದೆ ಆದರೆ ಇವರ ಅಧಿಕಾರಾವಧಿಯಲ್ಲಿ ನೂರಾರು ರೈತರು ಸಾಲದ ಸೂಲದಿಂದ ತಪ್ಪಿಸಿಕೊಳ್ಳಲು ಸಾಲು ಸಾಲು ಆತ್ಮ ಹತ್ಯ ಪ್ರಕರಣಗಳು ನಡೆದರು ಕಂಣ್ಮುಚ್ಚಿ ಕುಳಿತಿತ್ತು, ಆದರೆ ಚುನಾವಣಾ ಸಮಯವನ್ನೆ ನೆಪ ಮಾಡಿಕೊಂಡು ರೈತರ ಕಣ್ಣಿರು ಒರೆಸುವ ನಾಟಕವಾಡುತ್ತಿರುವದು ಮತದಾರರಿಗೆ ತಿಳಿದಿದೆ ಎಂದರು. ಪಟ್ಟಣದ ಅಂಬೇಡ್ಕರ್‌ ವೃತ್ತ ದಿಂದ ಮಹಾಮಾಯಿ ತೆರಿನ ಗಡ್ಡಿಯ ವರೆಗೆ ಹಮ್ಮಿಕೊಂಡಿದ್ದ ಚುಣಾವನೆ ಪ್ರಚಾರದ ಅಂಗವಾಗಿ ರೋಡ್‌ ಶೊ ಸಾವಿರಾರು ಮಹೀಳೆಯರು ಸಾರ್ವಜನಿಕರು ಕಾರ್ಯಕರ್ತರೋಡನೆ ವಿಜೃಂಭನೆಯಿಂದ ನೆರೆವೆರಿತು.
ಈ ಸಂದರ್ಭದಲ್ಲಿ,ನವೀನ ಗುಳಗಣ್ಣನವರ್‌,ಈರಪ್ಪ ಕುಡಗುಂಟಿ ತಾ ಪಂ, ಮಾಜಿ ಅಧ್ಯಕ್ಷ ಶಿವುಕುಮಾರ್‌ ನಾಗಲಾಪೂರಮಠ. ಜಿ ಪಂ, ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಸಿದ್ಲಿಂಗಯ್ಯ ಉಳಾಗಡ್ಡಿ,ಅರವಿಂದಗೌಡ ಪೋಲಿಸ್‌,ಸಿ.ಎಚ್‌.ಪಾಟೀಲ್‌, ಮಂಜುನಾಥ ನಾಡಗೌಡ್ರು,ಶರಣಪ್ಪ ಬಣ್ಣದಬಾವಿ,ಶಂಭು ಜೊಳದ್‌,ಕರಿಬಸಯ್ಯ,ರಮೇಶ ಶಾಸ್ತ್ರಿ,ಮಹೇಶ ಕೌಲೂರ,ಮುತ್ಯುಜಯ ಕಂಪ್ಲಿ,ಬಸುರಾಜ ಅಡವಿ, ಕನಕಪ್ಪ ಬೇಡರ ಪ್ರಕಾಶ ಬೋರನೆವರ್‌ ವೀರಶೆ ಸಬರದ್‌ ನಾಗರಾಜ ಭಜಂತ್ರಿ ಹಾಗೂ ಬಿಜೆಪಿಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

loading...