ಓದುವ ಸಂಸ್ಕøತಿ ರೂಡಿಸಿಕೊಳ್ಳಿ: ನಾಯ್ಕ

0
26
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಹಾಗೂ ಸ್ಪೂರ್ತಿರಂಗ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹೊನ್ನಾವರ ಪ್ರಭಾತನಗರದ ಕರ್ನಾಟಕ ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನೇರವೇರಿತು.
ಡಾ ಭಾಸ್ಕರ ಮಯ್ಯವರು ಬರೆದ ನಿಕಷಕ್ಕೆ ಒಡ್ಡದ ನಿರ್ಣಯಗಳು, ಜಾಗತೀಕರಣದ ನಾಗಪಾಶ, ಋಗ್ವೇದ ಪುಸ್ತಕವನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿಗಳು ಹಾಗೂ ಜನಪದ ವಿದ್ವಾಂಸ ಡಾ ಎನ್.ಆರ್. ನಾಯ್ಕ ಮಾತನಾಡಿ ಇಂದು ಬಿಡುಗಡೆಯಾದ 4 ಪುಸ್ತಕಗಳು ವಿಭಿನ್ನತೆಯಿಂದ ಕೂಡಿದೆ. ಭಾಸ್ಕರ ಮಯ್ಯರವರ ಪುಸ್ತಕವನ್ನು ಓದುವುದು ಅಂದರೆ ತುಂಬಾ ಸಂತೋಷವಾಗುತ್ತದೆ. ಆದರೆ ಇಂದಿನ ದಿನದಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ತೀರಾ ಕಡಿಮೆಯಾಗುತ್ತಿರುವುದು ವಿಷಾಧನೀಯ. ನಾವು ಒದುವ ಸಂಸ್ಕøತಿ ರೂಡಿಸಿಕೊಳ್ಳಬೇಕು. ಅದರಿಂದ ಸಾಹಿತಿಗಳು ಅನೂಕೂಲದ ಜೊತೆಗೆ ಇನ್ನು ಹೆಚ್ಚಿನ ಪುಸ್ತಕ ಬರೆಯಲು ಪ್ರೇರಣೆ ದೊರೆಯುತ್ತದೆ. ಮುಂದಿನ ದಿನದಲ್ಲಿ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಓದುವ ಕಲೆಯನ್ನು ಅನುಸರಿಸಿಕೊಳ್ಳೊಣ ಎಂದರು.

ವೆಂಭ ವಂದೂರು ಇವರಿಂದ ರಚಿತವಾದ ಗೀತಭಾಮಿನಿ ಸೌಂದರ್ಯ ಲಹರಿ ಭಾಮನಿ ಮತ್ತು ಸೂಕ್ತಿಗಳು ಮತ್ತು ಸ್ತುತಿ ನಿಂದೆಗಳು ಪುಸ್ತಕ ಬಿಡುಗಡೆ ಮಾಡಿದ ಹಿರಿಯ ಸಾಹಿತಿಗಳಾದ ಜಿ.ಎಸ್.ಭಟ್ಟ ಮಾತನಾಡಿ ಇದೊಂದು ಅಪರೂಪದ ಸಮಾರಂಭ ಸಾಹಿತ್ಯಕ್ಕೆ ಮೀಸಲಾದ ಒಂದು ಕಾರ್ಯಕ್ರಮವಾಗಿದೆ. ಕರ್ನಾಟಕ ಏಕಿಕರಣಗೊಂಡು 62 ವರ್ಷ ಕಳೆದರೂ ಇನ್ನೂ ಸರಿಯಾದ ಸ್ಥಾನಮಾನ ದೊರೆತಿಲ್ಲ. ಆ ಸ್ಥಾನಮಾನ ದೊರೆಕಿಸಿ ಕೊಡಲು ಹೋರಾಟ ನಡೆಸಲು ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ ಅಂತಹ ಸಂಘಟನೆಯಲ್ಲಿ ಕ್ರಾಂತಿರಂಗವು ಒಂದು. ಕನ್ನಡ ಅನ್ನದ ಭಾಷೆಯಾಗಬೇಕು ಆಗ ಮಾತ್ರ ಅದರ ಮೌಲ್ಯ ಜಗತ್ತಿಗೆ ತಿಳಿಯುವುದು. ಕನ್ನಡ ಭಾಷೆ ಕಲಿತವರಿಗೆ ಹೆಚ್ಚಿನ ಉದ್ಯೂಗ ಸಿಗುವಂತಾಗಬೇಕು. ನಾವೆಲ್ಲ ಒಂದು ಎನ್ನುತ್ತೇವೆ ಆದರೆ ಭಾವನಾತ್ಮಕವಾಗಿ ಇನ್ನೂ ಒಂದಾಗಿಲ್ಲ ಎಂದರು. ಇಂತಹ ಅಪರೂಪದ ಕಾರ್ಯಕ್ರಮ ಸಂಘಟಿಸಿದ ಕರ್ನಾಟಕ ಕ್ರಾಂತಿರಂಗ ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ.ಎಸ್ ಡಿ ಹೆಗಡೆಯವರ ರಾಮಾಯಣ ಪ್ರಸಂಗಗಳ ಪರಂಪರೆ ಮತ್ತು ಪ್ರದರ್ಶನ ಮತ್ತು ವೈಚಾರಿಕತೆ ವಿಜ್ಞಾನಕ್ಕೆ ಸಂಭದಿಸಿದ ಲೇಖನವಾದ ಇದು ಸುಳ್ಳಲ್ಲ ಅಲ್ಲವೇ ಪುಸ್ತಕ ಬಿಡುಗಡೆ ಮಾಡಿದ ಡಾ ಎಸ್ ಎನ್ ಹೆಗಡೆ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಸಾಹಿತಿಗಳು ಹಾಗೂ ನಿಕಟಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರೋಹಿದಾಸ ನಾಯ್ಕ ಸಭಾ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕ್ರಾಂತಿರಂಗದ ರಾಜ್ಯಾಧ್ಯಕ್ಷರಾದ ಮಂಚೇಗೌಡ, ಪರ್ತಕರ್ತರಾದ ಬಿ.ಎನ್ ವಾಸರೆ, ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಕ್ರಾಂತಿರಂಗದ ರಾಜ್ಯಕಾರ್ಯದರ್ಶಿ ಎಚ್.ಸಿ ಪ್ರಭುಲಿಂಗ, ಡಾ ಭಾಸ್ಕರ ಮಯ್ಯ, ತಾಲೂಕ ಅಧ್ಯಕ್ಷರಾದ ಎಸ್.ಡಿ ಹೆಗಡೆ ಸೇರಿದಂತೆ ಪ್ರಮುಖರು ಉಪಸ್ದಿತರಿದ್ದರು. ಸಬಾ ಕಾರ್ಯಕ್ರಮದ ನಂತರ ಪುಸ್ತಕಗ:ಳ ಕುರಿತು ಪರಿಚಯ ಹಾಗು ಸಂವಾದ ಕಾರ್ಯಕ್ರಮ ನಡೆಯಿತು.

loading...