ಕಂಪನಿಯ ಮಾಹಿತಿ ಕದ್ದಾಲಿಕೆ: ಕ್ರಮಕ್ಕೆ ಆಗ್ರಹ

0
33
loading...

ಕನ್ನಡಮ್ಮ ಸುದ್ದಿ- ಬೆಳಗಾವಿ: ಆಟೋನಗರದಲ್ಲಿರುವ ಏರೋ ಹೈಡ್ರಾಲಿಕ್ಸ್ ಕಂಪನಿಯ ಚಲನ ವಲನಗಳನ್ನು ಗಮನಿಸಲು ಸರ್ವೋ ಕಂಟ್ರೋಲ್‌ ಕಂಪನಿಯ ಮಾಲಿಕ ದೀಪಕ ವಿದ್ಯಾದರ ಧಡೋತಿ ಕಂಪನಿ ಮುಂದಿನ ಮರದಲ್ಲಿ ನಮ್ಮ ವ್ಯವಹಾರ ಹಾಗೂ ಮೊಸ ಮಾಡುವ ಉದ್ದೇಶದಿಂದ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದಾನೆ ಎಂದು ಪಾಲುದಾರ ನಿಂಗಪ್ಪಾ ದುರ್ಗಪ್ಪಾ ನಾಯಿಕ ಅವರು ಆರೋಪಿಸಿದ್ದಾರೆ.

ಅವರು ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏರೋ ಹೈಡ್ರೋಲಿಕ್ಸ್ ಕಂಪನಿಯ ಎದುರು ಇರುವ ಮರದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.ಕ್ಯಾಮರಾ ವಾಯರ್ ನೊಡುತ್ತಾ ಹೊದಾಗ ಅದು ಹನ್ಸಿಕಾ ಟ್ರೇಡರ್ಸನ ಕಚೇರಿಯಲ್ಲಿ ಇರುವುದು ಕಂಡು ಬಂದಿತ್ತು.
ಹನ್ಸಿಕಾ ಕಚೇರಿ ಮಾಲಿಕ ಕಾಂತಿ ಎಲ್ ಪಟೇಲ ಕೇಳಿದಾಗ ಅವರು ಉಮೇಶ ಅಷ್ಟೇ ಕರ ವೆಂಬ ವ್ಯಕ್ತಿಯಿಂದ ಉದ್ಯಮಬಾದಲ್ಲಿರುವ ಸರ್ವೋ ಕಂಟ್ರೋಲ್ ಕಂಪನಿಯ ಮಾಲಿಕ ,ನಮ್ಮ ಕಂಪನಿ ಪ್ರತಿಸ್ಪರ್ಧಿ ದೀಪಕ ವಿದ್ಯಾಧರ ದಡೋತಿ ಸಿಸಿ ಕ್ಯಾಮರಾ ಅಳವಡಿಸಲು ಹೇಳಿದ್ದಾರೆ ಎಂಬ ಸತ್ಯಾಂಶ ಗೊತ್ತಾಗಿದೆ ಎಂದರು.
ನಮ್ಮ ಏಳಿಗೆ ಸಹಿಸಲಾರದೆ ಈ ಹಿಂದೆ ನನಗೆ ಕಿರುಕುಳ ನೀಡುತ್ತಾ ಬಂದಿದ್ದಾನೆ. ಅದೇ ರೀತಿ ಈಗಲೂ ಸಹ ಕಂಪನಿಯ ಎದುರಿಗೆ ಸಿಸಿ ಕ್ಯಾಮರಾ ಅಳವಡಿಸಿ ವ್ಯಯಕ್ತಿಕ ಹಾಗೂ ವ್ಯವಹಾರದ ತಕ್ಕೆ ತರುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಆದ್ದರಿಂದ ಸರ್ವೋ ಕಂಟ್ರೋಲ್‌ ಕಂಪನಿಯ ಮಾಲಿಕ ದೀಪಕ ವಿದ್ಯಾದರ ಧಡೋತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಜೀವ ಭಯವಿದ್ದು ಪೊಲೀಸ್ ರಕ್ಷಣೆ
ನೀಡಬೇಕೆಂದು ತಿಳಿಸಿದ್ದಾನೆ.

ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಕೀಲ ರಾಮ ಗೋರಪಡೆ ಸೇರಿದಂತೆ ಇತರರು ಇದ್ದರು.

loading...