ಕಡಿಮೆ ಬೆಲೆಯ ಎಲ್‍ಇಡಿ ಬಲ್ಬ್ ಸದುಪಯೋಗ ಮಾಡಿಕೊಳ್ಳಿ: ದಾಸರ

0
48
loading...

ಕನ್ನಡಮ್ಮ ಸುದ್ದಿ- ರಾಮದುರ್ಗ: ಎಲ್.ಇ.ಡಿ ಬಲ್ಬ್ನ್ಅಂಚೆ ಇಲಾಖೆಯಲ್ಲಿ ಕಡಿಮೆ ಬೆಲೆಗೆ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ ಆದ್ದರಿಂದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಸ್ಥಳೀಯ ಪ್ರಧಾನ ಅಂಚೆ ಕಚೇರಿಯ ನಿರೀಕ್ಷಕ ಎಸ್.ಬಿ.ದಾಸರ ತಿಳಿಸಿದರು.

ಪಟ್ಟಣದ ಅಂಚೆ ಕಚೇರಿಯಲ್ಲಿ ರಿಯಾಯತಿ ದರದಲ್ಲಿ ಎಲ್.ಇ.ಡಿ ಬಲ್ಬ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, 9 ವ್ಯಾಟ್‍ಗಳ ಬಲ್ಬ್ ಕೇವಲ 70 ರೂ. ನೀಡಲಾಗುತ್ತಿದೆ ಎಂದು ಹೇಳಿದರು,
ಕೆಲವೊಂದು ದಶಕದಿಂದಲೂ ಜನತೆಗೆ ಹತ್ತಿರವಾಗುತ್ತಿರುವ ಅಂಚೆ ಇಲಾಖೆ ಇತ್ತೀಚಿಗಷ್ಟೆ ಆಧಾರ ಕೇಂದ್ರಗಳನ್ನು ಸ್ಢಾಪನೆ ಮಾಡಿದ್ದು, ಇನ್ನಷ್ಟು ಜನಸ್ನೇಹಿ ಆಗಲು ಮತ್ತೊಂದು ಹೊಸ ಹೆಜ್ಜೆ ಹಾಕಿದೆ. ಆಂಚೆ ಗ್ರಾಹಕರಿಗೆ ಸುಲಭ ಹಾಗೂ ರಿಯಾಯಿತಿ ದರದಲ್ಲಿ ಉಜಾಲಾ ಎಲ್.ಇ.ಡಿ ಬಲ್ಬ್‍ಗಳು ಸಿಗಬೇಕು ಎನ್ನುವ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯ ಪ್ರಮುಖ ಅಂಚೆ ಕಚೇರಿಗಳು ಸೇರಿದಂತೆ ರಾಜ್ಯದಲ್ಲಿರುವ ಇತರೆ ಅಂಚೆ ಕಚೇರಿಗಳಲ್ಲಿ ಉಜಾಲಾ ಎಲ್.ಇ.ಡಿ ಬಲ್ಬ ಮಾರಾಟ ಕೌಂಟರ್ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ವಿದ್ಯುತ್ ಉಳಿಕೆ ಸಹಾಯಕ ಎನ್ನಲಾಗುತ್ತಿರುವ ಪರಿಸರ ಸ್ನೇಹಿ ಎಲ್.ಇ.ಡಿ ಬಲ್ಬ್‍ಗಳು ಜನತೆಗೆ ಸುಲಭವಾಗಿ, ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಬೇಕು ಎನ್ನುವುದು ಕೇಂದ್ರ ಸರಕಾರದ ಉದ್ದೇಶ. ಇದನ್ನು ಸಾಕಾರಗೊಳಿಸುವ ಹಿನ್ನೆಲೆಯಲ್ಲಿ ಕಂಪನಿಗಳಿಂದ ನೇರವಾಗಿ ಒಪ್ಪಂದ ಮಾಡಿಕೊಂಡು ಅಂಚೆ ಇಲಾಖೆ ಮೂಲಕ ಅವುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಅಂಚೆ ಕಚೇರಿಯಲ್ಲಿ ಲಭ್ಯವಾಗುಮ ಎಲ್. ಇ. ಡಿ ಬಲ್ಬ್‍ಗಳ ಬೆಲೆಗೂ ಮಾರುಕಟ್ಟೆ ಸಿಗುವ ಬಲ್ಬ್‍ಗಳ ಬೆಲೆಗೂ ಸಾಕಷ್ಡು ವ್ಯತ್ಯಾಸ ಇದೆ. ಮಾರುಕಟ್ಟೆಯಲ್ಲಿ 9 ವ್ಯಾಟ್‍ನ ಎಲ್‍ಇಡಿ ಬಲ್ಬ್ ಬೆಲೆ ಅಂದಾಜು 150 ಇದೆ. ಆದರೆ ಅಂಚೆ ಕಚೇರಿಯಲ್ಲಿ 9 ವ್ಯಾಟ್‍ನ ಎಲ್‍ಇಡಿ ಬಲ್ಬ್ ಬೆಲೆ ಕೇವಲ 70 ರೂ.ಗೆ ಲಭ್ಯವಿದೆ ಎಂದರು.
ಅಂಚೆ ಇಲಾಖೆಯಲ್ಲಿ ಖರೀದಿಸುವ ಎಲ್‍ಇಡಿ ಬಲ್ಬ್‍ಗಳನ್ನು ರೀಸೇಲ್ ಮಾರಾಟ ಮಾಡಲು ಅವಕಾಶವಿಲ್ಲ. ಒಂದು ವೇಳೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಎಚ್ಚರಿಕೆ ಕೂಡಾ ನೀಡಿದರು.

ಅಂಚೆ ಇಲಾಖೆಯಲ್ಲಿ ಖರೀದಿಸಿದ ಬಲ್ಬಗೆ 3 ವರ್ಷ ಗ್ಯಾರಂಟಿ ಇದೆ. ಗ್ಯಾರಂಟಿ ಅವಧಿಯಲ್ಲಿ ದೋಷ ಕಂಡು ಬಂದರೆ ಹೊಸದನ್ನು ಪಡೆದುಕೊಳ್ಳಲು ಅವಕಾಶವಿದೆ, ಅಂಚೆ ಇಲಾಖೆಯಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ಖರೀದಿಸಲು ಯಾವುದಾದರೂ ಒಂದು ಗುರುತಿನ ಚೀಟಿ ಇರಲೇಬೇಕರು. ಬಲ್ಬ್ ಖರೀದಿ ವೇಳೆ ಅಂಚೆ ಇಲಾಖೆ ನೀಡುವ ರಶೀದಿಯನ್ನು ಕಾಯ್ದಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಪೋಸ್ಟ್ ಮಾಸ್ತರ ಪಿ.ಬಿ.ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...