ಕಮತಗಿಯಲ್ಲಿ ಬೆಂಬಲಿಗರೊಂದಿಗೆ ಚರಂತಿಮಠ ರೋಡ ಶೋ

0
12
loading...

ಕಮತಗಿ: ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಕಮತಗಿ ಪಟ್ಟಣದಲ್ಲಿ ಬುಧವಾರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠವರ ರೋಡ ಶೋ ಸಹಸ್ರಾರು ಸಂಖ್ಯೆಯ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ನಡೆಯಿತು. ಕಮತಗಿ ಪಟ್ಟಣದ ಬಸ್‌ ನಿಲ್ಧಾಣದ ಹುಚ್ಚೇಶ್ವರ ಮಠದ ಗದ್ದುಗೆಯ ಆವರಣದಿಂದ ಆರಂಭಗೊಂಡ ಚರಂತಿಮಠರ ರೋಡಶೋ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ರೋಡ ಶೋ ಹೋಗುವ ರಸ್ತೆಯ ಇಕ್ಕೆಲುಗಳಲ್ಲಿ ನಿಂತ ಜನರಿಗೆ ಚರಂತಿಮಠರು ಮತಯಾಚಿಸಿದರು. ಈ ಸಂದರ್ಭದಲ್ಲಿ ನೆರೆದ ಜನ ಚರಂತಿಮಠರಿಗೆ ಜೈಕಾರ ಹಾಕಿದರು. ನಂತರ ಗಾಂಧೀ ಚೌಕ ಆವರಣದಲ್ಲಿ ನಡೆದ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೀರಣ್ಣ ಚರಂತಿಮಠ, ಶಾಸಕರಾಗಿದ್ದ ಸಂದರ್ಭದಲ್ಲಿ ಕಮತಗಿ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗಿದೆ.
ಸರ್ಕಾರದ ದುಡ್ಡಿನಲ್ಲಿ ಗುಣಮಟ್ಟದ ಕಾಮಗಾರಿಯನ್ನು ಸಹ ಇವರಿಂದ ಮಾಡಲು ಸಾಧ್ಯವಾಗುವುದಿಲ್ಲ. ಕೆರೆ ತುಂಬಿಸುವಂತಹ ಯೋಜನೆಯನ್ನು ವೈಜ್ಞಾನಿಕವಾಗಿ ಮಾಡದೇ ಕಾಟಾಚಾರಕ್ಕೆ ಮಾಡಿದ್ದಾರೆ. ಶಾಸಕರಾದ ತಕ್ಷಣವೇ ಮೊದಲು ಕ್ಷೇತ್ರದ ಕೆರೆಗಳ ಹೂಳು ತೆಗೆಸುವುದು, ವೈಜ್ಞಾನಿಕವಾಗಿ ಕೆರೆಗಳನ್ನು ತುಂಬಿ ಗ್ರಾಮೀಣ ಜನರ ಜಾನುವಾರುಗಳಿಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡಲು ಆಧ್ಯತೆ ನೀಡುತ್ತೇನೆ ಎಂದರು. ಕ್ಷೇತ್ರದಲ್ಲಿ ನೆಮ್ಮದಿಯಿಂದ ಜನ ಬದುಕುವಂತಹ ವಾತಾವರಣ ನಿರ್ಮಾಣ ಮಾಡಲಾಗುವುದು.ಈಗಾಗಲೇ ಗ್ರಾಮೀಣ ಮತ್ತು ನಗರದ ಜನ ಬದಲಾವಣೆಗೆ ಕಾತುರದಿಂದ ಕಾಯುತ್ತಿದ್ದಾರೆ ಎಂದರು.
ಹುಚ್ಚಪ್ಪ ವಡವಡಗಿ, ಹುಚ್ಚಯ್ಯ ನಿಂಬಲಗುಂದಿ, ಈರಣ್ಣ ನಾಗಠಾಣ, ಗಂಗಾಧರ ಕ್ಯಾದಿಗೇರಿ, ಪ್ರಭು ಎತ್ತಿನಮನಿ, ಎಂ.ಎಚ್‌.ಮಳ್ಳಿ, ಬಸಪ್ಪ ಬೂತಲ, ಮಹೇಶ ಅಚನೂರ, ಪ್ರಕಾಶ ಗುಳೇದಗುಡ್ಡ, ಸಂಗಪ್ಪ ಗಾಣಿಗೇರ, ಶಿವರಾಯಪ್ಪ ಬಿಸನಾಳ, ಬಿ.ಜೆ.ರಾಠೋಡ, ಹರ್ಷವರ್ಧನ ದೇಸಾಯಿ, ಪ್ರಭು ಎತ್ತಿನಮನಿ, ಹುಚ್ಚೇಶ ಜಯ್ಯಾ ಸೇರಿದಂತೆ ಅನೇಕ ಹಿರಿಯರು ಹಾಗೂ ಕಾರ್ಯಕರ್ತರು ಚರಂತಿಮಠರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

loading...