`ಕರುನಾಡು ಪದ್ಯಶ್ರೀ ಪ್ರಶಸ್ತಿ’ ಗೆ ಆಯ್ಕೆ

0
41
loading...

ಕನ್ನಡಮ್ಮ ಸುದ್ದಿ- ಕೋಹಳ್ಳಿ : ಸಮೀಪದ ಸವದಿ ಗ್ರಾಮದ ಹಣಮಂತ ಈರಪ್ಪ ಶಿರಗುಪ್ಪಿ ಇವರು ಬೆಳಗಾವಿಯ ರೈಜ್ ವಲ್ರ್ಡ ಗ್ರೂಪ್ ಆಪ್ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ಧೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಉದ್ಯಮ ಹಾಗೂ ಸಮಾಜ ಸೇವೆಯನ್ನು ಗುರ್ತಿಸಿ ಗೋವಾ ಕನ್ನಡಿಗರ ಸಂಘದಿಂದ `ಕರುನಾಡು ಪದ್ಯಶ್ರೀ ಪ್ರಶಸ್ತಿ’ ಗೆ ಇವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನವನ್ನು ದಿ: 27ರಂದು ಗೋವಾದಲ್ಲಿ ಜ್ಞಾನಪೀಠ ಪುರಸ್ಕøತ ಚಂದ್ರಶೇಖರ ಕಂಬಾರ, ಗೋವಾ ವಿಧಾನಸಭೆ ಸಭಾಪತಿ ಪ್ರಮೋದ ಸಾವಂತ, ವಿಶ್ರಾಂತಿ ನ್ಯಾಯಮೂರ್ತಿ ಅರಳಿ ನಾಗರಾಜ ಸೇರಿದಂತೆ ಅನೇಕ ಗಣ್ಯಮಾನ್ಯರಿಂದ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಹಣಮಂತ ಶಿರಗುಪ್ಪಿ ತಿಳಿಸಿದ್ದಾರೆ.

loading...