ಕರ್ನಾಟಕದಲ್ಲಿ ಅಲೆ ಅಲ್ಲ, ಬಿರುಗಾಳಿಯೆ ಎದ್ದಿದೆ : ಮೋದಿ

0
39
loading...

ಚಾಮರಾಜನಗರ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಾಗುತ್ತಿದೆ ಹೀಗಿರುವಾಗ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚಾಮರಾಜ ನಗರಕ್ಕೆ ಭೇಟಿ ನೀಡಿದರು.
ಕರ್ನಾಟಕದಲ್ಲಿ ಅಲೆ ಅಲ್ಲ ಬಿರುಗಾಳಿಯೇ ಎದ್ದಿದೆ ಎಂದು ಹೇಳಿದರು.
ಮೇ ೧ ಎಲ್ಲರಿಗೂ ಕಾರ್ಮಿಕ ದಿನದ ಶುಭಾಶಯಗಳು ಎಂದು ಹೇಳಿದರು. ಮೇ.೧ ರಂದು ಗುಜರಾತ ಸ್ಥಾಪನೆಯಾದ ದಿನ. ಕಳೆದ ಮೂರು ವರ್ಷಗಳ ಹಿಂದೆ ಹೇಳಿದ್ದಂತೆ ಪ್ರತಿ ಗ್ರಾಮ ಗ್ರಾಮಗಳಿಗೂ ವಿದ್ಯುತ್ ಕಲ್ಪಿಸಿದ್ದೇನೆ.ಆಸ್ಸಾಂ ರಾಜ್ಯದ ಕೊನೆಯ ಹಳ್ಳಿಯವರೆಗೂ ವಿದ್ಯುತ್ ಪೂರೈಸಿದ್ದೇವೆ ಎಂದರು.
ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಮೋದಿ ಕಾಂಗ್ರೆಸ್ ನಲ್ಲಿ ಕನಿಷ್ಠ ಸಂಸ್ಕೃತಿಯೂ ಇಲ್ಲ ಎಂದರು. ೨೦೦೫ ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ನೀಡುವದಾಗಿ ಹೇಳಿದ್ದರು ಆದರೆ ಅವರು ಮಾಡಲಿಲ್ಲ. ನಾವು ಅದನು ಮಾಡಿ ತೋರಿಸಿದ್ದೇವೆ ಎಂದು ಹೇಳಿದರು.

loading...