ಕರ್ಮ,ಜ್ಞಾನಗಳ ತತ್ವಾಚರಣೆಯೇ ಯೋಗ: ಡಾ.ಕುಂಬಾರ

0
14
loading...

ಗದಗ : ಯೋಗದ ಪರಮ ಗುರಿ ಮೋಕ್ಷ ಆನಂದ ಪ್ರಾಪ್ತಿಯಾದರೆ ಕರ್ಮ, ಜ್ಞಾನಗಳ ತತ್ವಾಚರಣೆ ಯೋಗವಾಗಿದೆ ಈ ಯೋಗವನ್ನು ನಾವೆಲ್ಲ ಸಾಧಿಸಬೇಕೆಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಐ.ಎಸ್. ಕುಂಬಾರ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್. ಯೋಗ ಪಾಠಶಾಲೆಯ ಬಸವಯೋಗ ಕೇಂದ್ರ ಸಿದ್ಧಲಿಂಗ ನಗರದಲ್ಲಿನ ಬಸವಯೋಗ ಮಂದಿರದಲ್ಲಿ ನಡೆದ ಸರ್ಟಿಫಿಕೇಟ್ ಕೋರ್ಸ್ ಇನ್ ಯೋಗ ಸ್ಟಡೀಜ್-2017-18 ನೇ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಯಾವುದೇ ಕರ್ಮವನ್ನು ನಾವು ಅದರ ಮೂಲ ಜ್ಞಾನ ತಿಳಿದುಕೊಂಡು ಜೀವನದಲ್ಲಿ ಅನುಸರಿಸಿದ್ದಾದರೆ ನಮ್ಮದು ಸುಖಿ ಜೀವನವಾಗುವದೆಂದರು.
ಕರ್ಮ ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ-ಪುಣ್ಯಗಳ ಫಲ ಅಥವಾ ಪ್ರಸ್ತುತ ಜನ್ಮದಲ್ಲಿ ಮಾಡುತ್ತಿರುವ ಕರ್ಮ (ಕೆಲಸ) ಗಳು ಎಂದು ಅರ್ಥೈಸಬಹುದು. ಇಂದಿನ ದಿನಮಾನದಲ್ಲಿ ಹಣ ಗಳಿಕೆಯು ಅನೇಕ ಪ್ರಮುಖ ಕರ್ಮವಾಗಿದೆ. ಈ ಕರ್ಮವನ್ನು ನಾವು ಮೋಸ, ವಂಚನೆ, ಕೊಲೆ, ಸುಲಿಗೆಗಳಿಂದ ಮಾಡಿದರೆ ಪಾಪ, ಸಾತ್ವಿಕತೆಯಿಂದ ಮಾಡಿದರೆ ಪುಣ್ಯ ಫಲಗಳು ದೊರೆಯುವವು. ನಾವು ಪಾಪದ ಫಲದಿಂದ ದುಃಖಿಗಳಾಗಿರುವೆವು, ಪುಣ್ಯ ಫಲದಿಂದ ಸುಖವಾಗಿರುವೆವು ಎಂದರು.
ಇನ್ನೋರ್ವ ಅತಿಥಿ ಧಾರವಾಡ ಕ.ವಿ.ವಿಯ ಸ್ನಾತಕೋತ್ತರ ಯೋಗ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಎಸ್.ಆರೇರ ಮಾತನಾಡಿ ಯೋಗ ಜ್ಞಾನ ಪಡೆಯಲು ಸರ್ಟಿಫಿಕೇಟ್ ಕೋರ್ಸ್ ಒಂದೆ ಇರದೆ ಯೋಗದಲ್ಲಿ ಡಿಪ್ಲೋಮಾ, ಸ್ನಾತಕೋತ್ತರ ಪದವಿ ಕೋರ್ಸ್‍ಗಳೂ ಇವೆ. ಇವುಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಯೋಗ ಜ್ಞಾನ ಪಡೆದು ಸಮಾಜಕ್ಕೆ ತಿಳಿಸಲು ಮುಂದಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ ಕೆ.ಎಚ್.ಬೇಲೂರ ಮಾತನಾಡಿ ಯೋಗ ಅಧ್ಯಯನ ಮಾಡಲು ಯಾವುದೇ ಜಾತಿ, ಮತ, ಪಂಥಗಳು ಅಡ್ಡಿಯಾಗುವದಿಲ್ಲ, ಲಿಂಗ ವಯೋಬೇಧವಿಲ್ಲದೇ ಯೋಗ ಅರಿತು ಆಚರಿಸಿz್ದÁದರೆ ಎಲ್ಲರೂ ನಿರೋಗಿಗಳಾಗಿ ಸ್ವಸ್ಥ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಾಗುವದು ಎಂದರು.
ವೇದಿಕೆಯಲ್ಲಿ ಬಸವಯೋಗ ಕೇಂದ್ರದ ಪ್ರಾಚಾರ್ಯರಾದ ಶ್ರೀಮತಿ ವೀಣಾ ಹಿರೇಮಠ, ಸಂಯೋಜಕರಾದ ಯೋಗಾಚಾರ್ಯ ಕೆ.ಎಸ್.ಪಲ್ಲೇದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪರವಾಗಿ ಕೆ.ಎಚ್.ಬಂಡಿವಡ್ಡರ, ದಾವಲಬಿ ನದಾಫ ಅನಿಸಿಕೆ ತಿಳಿಸಿದರು.
ಪ್ರಾರಂಭದಲ್ಲಿ ಅಕ್ಷತಾ ತೋಟಿಗೇರ ಪ್ರಾರ್ಥಿಸಿದರು ಎಸ್.ಬಿ.ಮೆಣಸಗಿ ಸ್ವಾಗತಿಸಿ ವರದಿ ವಾಚನ ಮಾಡಿದರು. ಪ್ರಧಾನ ಕಾರ್ಯದರ್ಶಿ ಡಾ. ಐ.ಬಿ.ಕೊಟ್ಟೂರಶೆಟ್ಟಿ ವಂದಿಸಿದರು.

loading...