ಕಲಾವಿದರ ಕಲೆಗೆ ಬೆಲೆಕಟ್ಟಲಾಗದು: ರಾಘವೇಂದ್ರ

0
22
loading...

ಬಾಗಲಕೋಟೆ(ಇಳಕಲ): ಯಾವುದೇ ಕಲೆಗಳು ಉಳಿದಿರುವುದು ಸಣ್ಣ ಪುಟ್ಟ ಊರುಗಳಲ್ಲಿ ಮಾತ್ರ. ದೊಡ್ಡ ನಗರಗಳಿಗೆ ಹೋಗುತ್ತಿದ್ದಂತೆ ಅದು ಕಮರ್ಷಿಯಲ ಆಗಿಬಿಡುತ್ತದೆ ಎಂದು ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.
ಅವರು ಇಲ್ಲಿನ ಕಾಶೀಂ ಆರ್ಟ ಗ್ಯಾಲರಿಯಲ್ಲಿ ಶಿರೂರಿನ ಕಲಾವಿದ ಲಕ್ಷ್ಮಣ ಬದಾಮಿಯವರ ದೃಶ್ಯ ಧ್ಯಾನ ಚಿತ್ರಕಲಾ ಕೃತಿಗಳ ಪ್ರದರ್ಶನವನ್ನು ಉಧ್ಘಾಟಿಸಿ ಮಾತನಾಡಿದರು. ಇತ್ತಿಚಿಗೆ ನಮ್ಮನ್ನಗಲಿದ ನಾಡಿನ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ರೇಖಾಚಿತ್ರವನ್ನ ಅನಾವರಣ ಮಾಡುವ ಮೂಲಕ ಚಿತ್ರ ಪ್ರದರ್ಶನಮಾಡಿ ಪ್ರದರ್ಶನಕ್ಕೆ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೋಂಡಿದ್ದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ಎಫ.ವಿ.ಚಿಕ್ಕಮಠ ಮಾತನಾಡಿ ಕಲಾವಿದರು ತಮ್ಮ ಕೌಶಲ್ಯ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಹೆಚ್ಚು ಜನರನ್ನ ತಲುಪಲು ಸಾಧ್ಯವಾಗುತ್ತದೆ ಎಂದರು. ಇದೇ ಕಾರ್ಯಕ್ರಮದಲ್ಲಿ ಕಾವ್ಯ ಸಂವಾದ ನಡೆಯಿತು. ಕವಿ ಆರೀಫ ರಾಜಾ ಅವರು ಈ ಹೊತ್ತಿನ ಕಾವ್ಯ ವರ್ತಮಾನಕ್ಕೆ ತೀವೃವಾಗಿ ಸ್ಪಂದಿಸುತ್ತದೆ. ಹೊಸ ಕವಿಗಳು ಹೊಚ್ಚ ಹೊಸದೆನಿಸುವ ಭಾಷೆಯಲ್ಲಿ ಕಾವ್ಯ ಕಟ್ಟುತ್ತಿದ್ದಾರೆ ಎಂದರು. ಚಿತ್ರಕಲಾವಿದ ಲಕ್ಷ್ಮಣ ಬದಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೋ ಸಿದ್ದಲಿಂಗಪ್ಪ ಬೀಳಗಿ ವೇದಿಕೆಯಮೇಲಿದ್ದರು. ಟಿ.ಎಸ.ಗೊರವರ, ಕೃಷ್ಣ ದೇವಾಂಗಮಠ, ಸೋಮನಾಥ ಗೀತಯೋಗಿ, ಸುರೇಶ ರಾಜಮಾನೆ, ಸೊಗುರೇಶ ಹಿರೇಮಠ, ನಾಗರಾಜ ಕೋರಿ, ಅರುಣಾ ನರೇಂದ್ರ, ಮುರ್ತುಜಾಬೇಗಂ ಕೊಡಗಲಿ ಇದ್ದರು. ಸಿದ್ದು ಹಳೆಮನಿ ನಿರೂಪಿಸಿದರು ಶಂಕರ ಹೂಗರ ವಂದಿಸಿದರು.

loading...