ಕಲೆಯಿಂದ ಗ್ರಹಿಕೆ ಸಾಮಥ್ರ್ಯ ವೃದ್ದಿ: ಚಿರಂಜೀವಿ

0
14
loading...

ರಾಣೇಬೆನ್ನೂರು: ಕಲೆಯಿಂದ ಗ್ರಹಿಕೆಯ ಸಾಮಥ್ರ್ಯ ಹೆಚ್ಚಾಗುವದರ ಜೊತೆಗೆ ಮಕ್ಕಳು ಭೌತಿಕ ಪ್ರಪಂಚದ ಕ್ರಿಯಾತ್ಮಕ ಮತ್ತು ರಚನಾತ್ಮಕ ಅನುಭವಗಳನ್ನು ಪಡೆಯುತ್ತಾರೆ ಎಂದು ಪತ್ರಕರ್ತ ಎಂ. ಚಿರಂಜೀವಿ ಹೇಳಿದರು.

ಇತ್ತೀಚಿಗೆ ಮಹಾರಾಷ್ಟ್ರದ ಔರಂಗಬಾದ್‍ನ ಕಲಾಭಾರತಿ ಮಕ್ಕಳ ಕಲಾ ಸಂಸ್ಥೆಯು ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲ್ಲಿ ರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿ ಪಡೆದ ಸ್ಥಳೀಯ ಶಿವಗಂಗಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಮಾತನಾಡಿದರು. ಮಕ್ಕಳು ಓದು-ಬರೆಯುವುದರ ಜೊತೆಗೆ ಸೃಜನಾತ್ಮಕ ಕಲೆಯಲ್ಲಿ ತೊಡಗಿಕೊಂಡಾಗ ಲವಲವಿಕೆ ಹೆಚ್ಚುತ್ತದೆ ಜೊತೆಗೆ ಸದಾ ಕುತೂಹಲಕಾರಿ ಅನ್ವೇಷಣೆಗೆ ಪ್ರೇರಣೆ ನೀಡುತ್ತದೆ. ಮಕ್ಕಳಲ್ಲಿನ ಭಾವನೆಗಳು ಜಾಗೃತಗೊಂಡು ಚಿತ್ರ ಪಟಲಗಳ ಮೂಲಕ ಅಭಿವ್ಯಕ್ತಿಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿಗೆ ಶಶಿಧರ ಎಂ.ಎಚ್, ತೇಜಶ್ವಿನಿ.ಸಿ.ಮಡಿವಾಳರ, ಐಶ್ವರ್ಯ.ಹೆಚ್.ಡಿ, ಹಾಗೂ ರಾಜ್ಯ ಚಿತ್ರಕಲಾ ಪ್ರಶಸ್ತಿಗೆ ಆಯ್ಕೆಯಾದ ನಿವೇದಿತಾ.ಎಸ್.ಕೋಟಿಹಾಳ, ಅಭಿಷೇಕ್.ಎಸ್ ವಿದ್ಯಾರ್ಥಿಗಳಿಗೆ ಶಾಲೆಯ ಎಲ್ಲ ಶಿಕ್ಷಕ ವರ್ಗದವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹೇಶ ಪಾಟೀಲ್, ಗುರುಮಾತೆ ಚೈತ್ರಾ ಪಾಟೀಲ್, ಕಲಾವಿದ ಸಚ್ಚಿದಾನಂದಕುಮಾರ, ಮಲ್ಲಿಕಾರ್ಜುನ ಮಠದ ಹಾಗೂ ಶಿಕ್ಷಕವರ್ಗ ಉಪಸ್ಥಿತರಿದ್ದರು. ಪ್ರಶಸ್ತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಕಲಾವಿದ ನಾಮದೇವ ಕಾಗದಗಾರ ಮಾರ್ಗದರ್ಶನ ನೀಡಿದ್ದರು.

loading...