ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ಬಿಜೆಪಿ ಸರ್ಕಾರ ಸಿದ್ದ: ಪಾಟೀಲ

0
19
loading...

ನರಗುಂದ: ಕಳಸಾ ಬಂಡೂರಿ ಯೋಜನೆ ಕಾರ್ಯಾನುಷ್ಟಾನಗೊಳಿಸಲು ಬಿಜೆಪಿ ಸರ್ಕಾರ ಸಿದ್ದವಿದೆ. ಈ ಕುರಿತು ಕೇಂದ್ರದ ನೀರಾವರಿ ಸಚಿವರನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳೊಡನೆ ಚರ್ಚಿಸಿ ಈ ಯೋಜನೆ ಕೈಗೊಳ್ಳುವುದಾಗಿ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ನರಗುಂದ ಪುರಸಭೆ ಹಾಗೂ ನಾಗರೀಕರ ವತಿಯಿಂದ ಮೇ. 30 ರಂದು ತಮಗೆ ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು. ಅನೇಕ ಬಡವರು ಮನೆಗಳಿಲ್ಲದೇ ತೊಂದರೆಗೆ ಸಿಲುಕಿದ್ದಾರೆ. ಮನೆ ಇರದ ಬಡ ಪಲಾನುಭವಿ 2000 ಕುಟುಂಬಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ 118 ಕೋಟಿ ರೂ ವೆಚ್ಚಮಾಡಿ ಗ್ರುಪ್‍ಮಟ್ಟದ ಹೌಸಿಂಗ್ ಸ್ಕೀಮ್‍ನಲ್ಲಿ ನರಗುಂದ ಹೊರವಲಯದಲ್ಲಿ ಮನೆ ನಿರ್ಮಿಸಿ ನೀಡುವ ಗುರಿಹೊಂದಿದೆ. ಹಿಂದುಳಿದ ಜನಾಂಗದ ಬಹುದಿನಗಳ ಬೇಡಿಕೆಯಲ್ಲಿರುವ ಮನೆಗಳ ನಿರ್ಮಾಣಕ್ಕಾಗಿ ಅನುದಾನ ಸರ್ಕಾರದಿಂದ ಒದಗಬೇಕಾಗಿದೆ. ಸರ್ಕಾರದ ಜೊತೆ ಮಾತನಾಡಿ ಅನುದಾನ ತಂದು ಮನೆ ಒದಗಿಸುವ ಕಾರ್ಯ ನಡೆಸಲಾಗುವುದೆಂದು ತಿಳಿಸಿದರು. ಪಟ್ಟಣದಲ್ಲಿರುವ ಬಾಂಗಿ ಕುಟುಂಬದವರು ಮನೆ ನೀಡಿ ಎಂದು ಅನೇಕ ದಿನಗಳಿಂದ ಬೇಡಿಕೆ ಇಟ್ಟಿದ್ದರ ಹಿನ್ನಲೆಯಲ್ಲಿ ಆ ಜನಾಂಗಕ್ಕೆ ಮನೆ ಒಸಗಿಸುವ ಗುರಿ ಹೊಂದಲಾಗಿದೆ.
ರಾಜಕೀಯದಲ್ಲಿ ಒಬ್ಬರಿಗೊಬ್ಬರು ತೆಗೆಳುವುದು ಹೊಗಳುವುದು ಸರ್ವೆ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಚುನಾವಣೆ ನಂತರ ಈ ಕ್ಷೇತ್ರದಲ್ಲಿ ಆಡಳಿತ ಹೊಂದಿದ ಪಕ್ಷ ಬೇರೆಯದ್ದಾಗಿದೆ. ಈ ಕ್ಷೇತ್ರದಲ್ಲಿ ಅನೇಕ ಅಭಿವೃದಿ ಕಾಮಾಗಾರಿಗಳು ಬಾಖಿ ಇವೆ. ಕಳೆದ 9 ವಷರ್óದ ಅವಧಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಅನೇಕ ಮಹತ್ತರ ಕಾರ್ಯ ಮಾಡಿದ್ದೇನೆ. ಬಾಬಾಸಾಹೇಬರ ಸ್ಮರಣೀಯ ಕೆಂಪಗಸಿ ಹೆಬ್ಬಾಗಿಲು ಅಭಿವೃದ್ದಿ ಮಾಡಲಾಗಿದೆ. ರಾಣಿ ಚೆನ್ನಮ್ಮ ಸಮುದಾಯ ಭವನ ನಿರ್ಮಾಣದ ಬಹುದಿನಗಳ ಬೇಡಿಕೆ ಇದ್ದು ನನ್ನ ಹಾಗೂ ಸಂಸದರ ನಿಧಿ ಮತ್ತು ವಿಧಾನಪರಿಷತ್ ಅವರ ಅನುದಾನ ಹಾಗೂ ಸಾರ್ವಜನಿಕರಿಂದ ಸುಮಾರು 1.5 ಕೋಟಿ ರೂ ಹಣ ಸಂಗ್ರಹಿಸಿ ಚೆನ್ನಮ್ಮ ಸಮುದಾಯ ಭವನ ನಿರ್ಮಿಸಲಾಗುವುದೆಂದು ತಿಳಿಸಿದರು.

ಪುರಸಭೆ ಸದಸ್ಯ ಎಸ್.ಆರ್. ಪಾಟೀಲ ಮಾತನಾಡಿ, ರಾಜಕೀಯ ರಂಗದಲ್ಲಿ ಯಾವುದೂ ಶಾಸ್ವತವಲ್ಲ. ಅದೇ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಆಡಳಿತ ಪಕ್ಷ ಬದಲಾಗಿದೆ. ಅವರು ಈ ಕ್ಷೇತ್ರಕ್ಕೆ ಉತ್ತಮ ಕಾಮಗಾರಿ ನಡೆಸುವ ಮೂಲಕ ಪ್ರಗತಿ ಸಾಧನೆ ಮಾಡಲಿದ್ದಾರೆಂಬುದು ಸತ್ಯವಾಗಿದೆ. ಕುಡಿಯುವ ನೀರಿನ ಸಮಸ್ಯೆ ಮತ್ತು ವಿವಿಧೆಡೆಗಳಲ್ಲಿ ಪ್ರಯಾಣಿಕರಿಗೆ ತಂಗುದಾನ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಕಾರ್ಯ ನಡೆಯಬೇಕಾಗಿದೆ. ಶಾಸಕರು ಮುಂದಿನ ದಿನಗಳಲ್ಲಿ ಇವುಗಳನ್ನು ಪರಿಹರಿಸುವಲ್ಲಿ ಕಾರ್ಯತತ್ಪರತೆ ಹೊಂದಬೇಕೆಂದು ತಿಳಿಸಿದರು.
ಎಸ್.ಆರ್. ಹಿರೇಮಠ, ಪುರಸಭೆ ಸದಸ್ಯ ವಸಂತ ಜೋಗಣ್ಣವರ, ಪುರಸಭೆ ಅದ್ಯಕ್ಷ ಶಿವಾನಂದ ಮುತವಾಡ ಮಾತನಾಡಿದರು. ವೇದಿಕೆ ಮೇಲೆ. ಶಿವನಗೌಡ ಹೆಬ್ಬಳ್ಳಿ. ಪುರಸಭೆ ಮುಖ್ಯಾಧಿಕಾರಿ ಎನ್.ಎಸ್. ಪೆಂಡಸೆ, ಉಮೇಶ ಕುಡೇನವರ, ಎಂ.ಐ. ಮೇಟಿ, ಪ್ರಕಾಶ ಪಟ್ಟಣಶೆಟ್ಟಿ, ಜ್ಯೋತಿ ಪತ್ರಿ, ಸಾವಿತ್ರಿ ಹಟ್ಟಿ, ಬಸವಣ್ಣವ್ವ ಪಿಡ್ನಾಯ್ಕರ್, ಮಮ್ತಾಜ ಸವಟಗಿ, ನಾಗಪ್ಪ ನವಲಗುಂದ, ಎ.ಎಂ. ಹುಡೇದ, ಎಂ.ಎಸ್. ಪಾಟೀಲ, ಬಿ.ಎ. ನದಾಫ್, ನೇತ್ರಾ ಪೂಜಾರ, ಚಂದ್ರಶೇಖರ ಕೋಟಿ, ದೇವರಡ್ಡಿ ವೆಂಕರಡ್ಡಿಯವರ, ಸುರೇಶ ಸವದತ್ತಿ, ಚಂದ್ರು ದಂಡಿನ ರೇಣುಕಾ ಕೋರಿ, ಅನೀಲ ಧರೆಯಣ್ಣವರ, ಕಿರಣ ಮುಧೋಳೆ ಉಪಸ್ಥಿತರಿದ್ದರು. ವಿಠಲ ಹಡಗಲಿ ನಿರ್ವಹಿಸಿದರು.

loading...