ಕಸಾಪ ಕಾರ್ಯಗಳಿಗೆ ಸಂಪೂರ್ಣ ಸಹಕಾರ: ಮುನವಳ್ಳಿ

0
22
loading...

ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಭಿಮಾನದ ಮಾತೃಸಂಸ್ಥೆ. 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಭೂತಪೂರ್ವವಾಗಿ ಗಂಗಾವತಿಯಲ್ಲಿ ಸಂಘಟಿಸುವ ಮೂಲಕ ನಾಡಿನ ಗಮನ ಸೆಳೆದಿದೆ.

ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕಾರ್ಯಚಟುವಟಿಕೆಗಳಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ ಎಂದು ನೂತನ ಶಾಸಕರಾದ ಪರಣ್ಣ ಮುನವಳ್ಳಿ ಹೇಳಿದರು. ಅವರು ಮಂಗಳವಾರ ಸಂಜೆ ಕಸಾಪ ಪದಾಧಿಕಾರಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣ ಸಹಾಯ, ಸಹಕಾರ, ಮಾರ್ಗದರ್ಶನ ನೀಡಬೇಕಾಗಿ ತಾಲೂಕು ಅಧ್ಯಕ್ಷ ಎಸ್.ಬಿ ಗೊಂಡಬಾಳ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಸಾಂಸ್ಕøತಿಕ ಪ್ರತಿನಿಧಿ ಶರಣೇಗೌಡ ಪೊಲೀಸ್ ಪಾಟೀಲ್, ಕೋಶಾಧ್ಯಕ್ಷ ಮಹೇಶ ಸಿಂಗನಾಳ, ಗೌರವ ಕಾರ್ಯದರ್ಶಿ ಶ್ರೀನಿವಾಸ ಅಂಗಡಿ, ಆರ್.ಟಿ ನಾಯಕ, ವಿಜಯಕುಮಾರ ರಾಯ್ಕರ್, ಶಿವಕಾಂತ ತಳವಾರ, ಪತ್ರೆಪ್ಪ, ವಿರುಪಾಕ್ಷಪ್ಪ ಶಿರವಾರ, ಭೀಮಣ್ಣ ಕರಡಿ ಮಹಿಳಾ ಪದಾಧಿಕಾರಿಗಳಾದ ವೀರಮಹೇಶ್ವರಿ, ಮಹಾಲಕ್ಷ್ಮೀ ಹಾಗೂ ಇತರರು ಉಪಸ್ಥಿತರಿದ್ದರು.

loading...