ಕಸಾಪ 103 ನೇ ಸಂಸ್ಥಾಪನಾ ದಿನ ಆಚರಣೆ

0
2
loading...

ನರಗುಂದ: ಕನ್ನಡದ ನಾಡು, ನುಡಿ ಸಾರುತ್ತ ಕನ್ನಡ ಸಾರಸ್ವತ ಲೋಕವನ್ನ್ನು ಶ್ರೀಮಂತಗೊಳಿಸುತ್ತ ನಾಡ ಭವಿತ್ಯನ್ನು ಉಜ್ವಲವಾಗಿ ಕಟ್ಟುವ ಸಂಕಲ್ಪದೊಂದಿಗೆ ಆದಿಕವಿ ಪಂಪನ ವಾಣಿಯಂತೆ “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಘೊಷವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್‌ ಎಂದೆಂದಿಗೂ ಅನುಸರಿಸುತ್ತ ಬಂದಿದೆ. ಕಸಾಪ ಸಾಧನೆಗಳನ್ನು ನಾಡಿನ ಜನತೆ ಎಂದಿಗೂ ಗೌರವಿಸುವಂತಾಗಬೇಕೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮಿಗಳು ಹೇಳಿದರು.
ತಾಲೂಕಿನ ಭೈರನಹಟ್ಟಿಯ ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಮೇ. 10 ರಂದು ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್‌ದ 103 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಶ್ರೀಗಳು, ಕನ್ನಡ ಸಾಹಿತ್ಯ ಪರಿಷತ್ತನ್ನು 1915-ಮೇ 15ರಂದು ಮೈಸೂರಿನ ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ದಿವಾನರಾದ ಸರ್‌ ಎಂ ವಿಶ್ವೇಶ್ವರಯ್ಯನವರ ದೂರದೃಷ್ಠಿಯಿಂದ ಅಸ್ತಿತ್ವಕ್ಕೆ ತರಲಾಯಿತು. ಅಂದಿನಿಂದ ಇಂದಿನವರೆಗೂ ನೆಲ,ಜಲ,ಭಾಷೆಗಾಗಿ ಧ್ವನಿ ಎತ್ತುತ್ತಾ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಆರೂವರೆ ಕೋಟಿ ಕನ್ನಡಿಗ ಆಶಾಜ್ಯೋತಿಯಾಗಿ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ದ ಸದಸ್ಯ ವಾಸು ಬೊಸ್ಲೆ ಮಾತನಾಡಿ, ಕಸಾಪ ಸಾಹಿತ್ಯ,ಸಂಸ್ಕೃತಿ. ಪುಸ್ತಕಮುದ್ರಣ ಪ್ರತಿವರ್ಷ ಸಮ್ಮೇಳನ,ದತ್ತಿ ಕಾರ್ಯಕ್ರಮಗಳನ್ನು ಮಾಡುತ್ತ ಸಾಹಿತ್ಯದ-ಸಂಸ್ಕೃತಿಯ ರಾಯಭಾರಿಯಾಗಿದೆ ಎಂದರು.
ಚನ್ನಪ್ಪ ಕಟಗಿ, ಶ್ರೀನಿವಾಸ ಇನಾಂದಾರ, ಪ್ರೊ:ಸಿ ಎಫ್‌ ಜಾದವ, ಎಫ್‌ ಆರ್‌ ಪಾಟೀಲ, ಸಿ.ಜಿ.ಕಂಠಿ, ಸಿದ್ದಲಿಂಗಪ್ಪ ಬುಳ್ಳಾ, ಜಿ. ವಿ. ಹೊಂಗಲ, ಮುರಗೇಶ ಪುರಾಣಿ, ಚಂದ್ರಕಾಂತ.ಇನಾಂದಾರ, ಮುರಗೇಪ್ಪ ದಂಡಿನ ಉಪಸ್ಥಿತರಿದ್ದರು. ಪರಶುರಾಮ ದಂಡಿನ, ಮಹಂತೇಶ ಹಿರೇಮಠ, ಉಮೇಶ ಹಾದಿಮನಿ ಕಾರ್ಯಕ್ರಮ ನಿರ್ವಹಿಸಿದರು.

loading...