ಕಾಂಗ್ರೆಸ್‌ ಪಕ್ಷ ಜನತೆಗೆ ದಾರಿ ತಪ್ಪಿಸುತ್ತಿದೆ: ರಮೇಶ ಜಿಗಜಿಣಗಿ ಆರೋಪ

0
11
loading...

ಕನ್ನಡಮ್ಮ ಸುದ್ದಿ-ಬಸವನಬಾಗೇವಾಡಿ: ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಜನತೆಗೆ ದಾರಿ ತಪ್ಪಿಸಿ ಲಾಭ ಪಡೆಯುವ ಗಿಮಿಕ್‌ ರಾಜಕೀಯ ಕಾಂಗ್ರೆಸ್‌ ಮಾಡುತ್ತಿದ್ದು ಪ್ರಜ್ಞಾವಂತ ದಲಿತರು ಕಾಂಗ್ರೆಸ್‌ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಹೇಳಿಕೆಯನ್ನು ತಿರುಚಿದ ಪರಿಣಾಮ ಗೊಂದಲ ಸೃಷ್ಠಿಯಾಯಿತು ಆದರೇ ಈ ಕುರಿತಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡುವ ಜೊತೆಗೆ ಗೊಂದಲಕ್ಕೆ ಕ್ಷಮೆಯಾಚಿಸಿದ್ದಾರೆ ಅಲ್ಲದೆ ಬೆಳಗಾವಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ತೆರನಾಗಿ ಸಂವಿಧಾನ ಬದಲಿಸುವ ಇಲ್ಲವೆ ದಲಿತ ಸಮುದಾಯದ ಹಕ್ಕನ್ನು ಕಸಿದುಕೊಳ್ಳಲಾರೆ ಎಂದು ಸ್ಪಷ್ಟಪಡಿಸಿದ್ದರು ಕಾಂಗ್ರೆಸ್‌ ದಲಿತರನ್ನು ದಾರಿ ತಪ್ಪಿಸಲು ಹವಣಿಸುತ್ತಿದ್ದು ಕಾಂಗ್ರೆಸ್‌ ಕುತಂತ್ರ ರಾಜಕೀಯಕ್ಕೆ ದಲಿತರು ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಸಂಗರಾಜ ದೇಸಾಯಿ ಮಾತನಾಡಿ ಇಡೀ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು ಬಿಜೆಪಿ ಉದ್ದೇಶದಂತೆ ಜನಪರಶಕ್ತಿ ಎಂಬ ಆಶಯದ ಕ್ಷೇತ್ರದ ಸಮಗ್ರ ಅಭಿವೃದ್ದಿ ಪ್ರಣಾಳಿಕೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ಬದ್ದನಿದ್ದು 28ಸಾವಿರ ಹೊಸ ಮತದಾರರು ನೋಂದಣಿ ಮಾಡಿಕೊಂಡಿದ್ದು ಮೋದಿ ಕಾರ್ಯವೈಖರಿ ಆಧಾರದಲ್ಲಿ ಇವುಗಳು ಬಿಜೆಪಿ ಮತಗಳಾಗಿ ಪರಿವರ್ತನೆಯಾಗಲಿವೆ, ಬಸವಣ್ಣನವರ ವಿಚಾರಧಾರೆಯನ್ನು ಜಾಗತೀಕ ಮಟ್ಟದಲ್ಲಿ ಪಸರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ, ಮತದಾರರು ಒಂದು ಬಾರಿ ಅವಕಾಶ ನೀಡಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಬಿ.ಕೆ.ಕಲ್ಲೂರ, ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಡಾ: ಕರುಣಾಕರ ಚೌಧರಿ, ಅಂಬೋಜಿ ಪವಾರ, ವಿ.ಎಂ.ಪರೆಣ್ಣವರ, ದಾಮು ನಾಯಕ, ಶಂಕರ ಪೂಜಾರಿ, ಟಿ.ಟಿ.ಹಗೇದಾಳ, ಪದ್ಮಾವತಿ ಗುಡಿ ಸೇರಿದಂತೆ ಮುಂತಾದವರು ಇದ್ದರು.

loading...