ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಪ್ರಧಾನಿ ಮೋದಿ

0
15
loading...

ಕನ್ನಡಮ್ಮ ಸುದ್ದಿ -ಕೊಪ್ಪಳ : ಈ ಭಾಗಕ್ಕೆ ಕೃಷ್ಣಾ ಬಿ ಸ್ಕೀಮ್‌ ಯೋಜನೆಯಡಿ ನೀರಾವರಿ ಮಾಡುತ್ತೆವೆಂದು ಹೇಳಿ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದರೂ ರೈತರ ಹೊಲಗಳಿಗೆ ಒಂದು ಹನಿ ನೀರು ಹರಿಸಲು ಸಾಧ್ಯವಾಗಿಲ್ಲವೆಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಕೊಪ್ಪಳ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿಯವರು ನೀರಾವರಿಗಾಗಿ ಯಾವುದೇ ಯೋಜನೆ ಇಲ್ಲ, ರೈತರ ಹೊಲಗಳಿಗೆ ನೀರು ಹರಿಸಿದರು ಬಂಗಾರದ ಬೆಲೆ ಬೆಳೆಯಲು ಸಾಧ್ಯ, ಕಾಂಗ್ರೆಸ್‌ ದೊಡ್ಡ ದೊಡ್ಡ ನೇತಾರರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೃಷ್ಣಾ ಬಿ ಸ್ಕೀಂ ಯೋಜನೆಗೆ 2 ಸಾವಿರ ಕೋಟಿ ನೀಡಿರುವದಾಗಿ ಹೇಳುತ್ತಾರೆ, ಆದರೆ ಯಾವುದೇ ನೀರಾವರಿ ಇಲ್ಲ, ಆಗಾದರೆ ಆ 2ಸಾವಿರ ಕೋಟಿ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ತಮ್ಮ ಭಾಷಣುದ್ದಕ್ಕೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ತಮ್ಮ ಪ್ರಹಾರವನ್ನು ಮುಂದುವರೆಸಿದ ಮೋದಿಯವರು ಸಿದ್ದರಾಮಯ್ಯಗೆ ಅಹಂಕಾರ ಹೆಚ್ಚಾಗಿದೆ, ಅಭಿವೃದ್ಧಿಗಿಂತ ಬೃಷ್ಟಾಚಾರ ಬಹು ಮುಖ್ಯವಾಗಿದ್ದು, ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ, ತುಂಗಭದ್ರ ಹಾಗೂ ಆಲಮಟ್ಟಿ ಜಲಾಶಯಗಳು ಪಕ್ಕದಲ್ಲಿದ್ದರೂ ನೀರಾವರಿಗೆ ಮಹತ್ವವನ್ನು ಕೊಟ್ಟಿಲ್ಲ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಸಂವಿಧಾನದ ಆಶಯದಂತೆ ಕೆಲಸ ಮಾಡುವದಕ್ಕಿಂತ ಹೆಚ್ಚು ತನ್ನ ಕುಟುಂಬ ಪರಿವಾರದ ಸಂತೋಷಕ್ಕಾಗಿ ಆಡಳಿತವನ್ನು ಬಳಸಿಕೊಂಡಿದೆ, ಅಧಿಕಾರಕ್ಕಾಗಿ ದೇಶ, ರಾಜ್ಯ, ಪಂಕ್ತಿ, ಸಂಸ್ಕೃತಿಯನ್ನು ಒಡೆದು, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದೆ, ಅವಶ್ಯವೆನಿಸಿದರೆ ಮನೆತನಗಳನ್ನು ಒಡೆಯುತ್ತಾರೆಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಮೋದಿ ಕಾಂಗ್ರೆಸ್‌ ದೇಶದಲ್ಲಿ ಕುತಂತ್ರ ಬುದ್ಧಿ ಉಪಯೋಗಿಸಿ ಅಧಿಕಾರಕ್ಕೆ ಬರುತ್ತಿತ್ತು ಈಗ ಅದು ನಡೆಯಲ್ಲ ಎಂದರು.
ದೇಶದ, ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳಸಲಿಲ್ಲ, ಪ್ರಸಿದ್ಧ ಸ್ಥಳಗಳನ್ನು ಅಭಿವೃದ್ಧಿ ಪಡಿಸುವದನ್ನು ಬಿಟ್ಟು ಕಾಂಗ್ರೆಸ್‌ ಅದನ್ನು ಹಾಳುಮಾಡಿದೆ. ಕೇಂದ್ರ ಸರ್ಕಾರ ಸುಮಾರು 5 ಸಾವಿರ ಕೋಟಿ ವೆಚ್ಚದಲ್ಲಿ ಈ ಎಲ್ಲಾ ಪ್ರವಾಸಿ ಮತ್ತು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸಲಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಪ್ರಣಾಳಿಕೆ ಮಾದರಿ : ಯಡಿಯೂರಪ್ಪ ಸರ್ಕಾರ ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯಗೊಂಡುವು ಹಾಗೂ ಅದರಿಂದ ರೈತರು, ಮಹಿಳೆಯರು ಸೇರಿದಂತೆ ಎಲ್ಲ ಜನವರ್ಗದವರ ಕಲ್ಯಾಣಕ್ಕೆ ಸಾಧ್ಯವಾಗಿತ್ತು ಎಂದು ಹೇಳಿದ ಮೋದಿಯವರು ಈ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಚುನಾವಣೆ ಪ್ರಣಾಳಿಕೆ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಕೇಂದ್ರ ಸರ್ಕಾರದ ಯೋಜನೆಗಳಿಂದ ದೇಶ ಅಭಿವೃದ್ಧಿಯತ್ತ :ನಾವು ಅಧಿಕಾರಕ್ಕೆ ಬಂದು ನಾಲ್ಕು ವರ್ಷದಲ್ಲಿ ಜಾರಿಗೆ ತಂದಿರುವ ಯೋಜನೆಗಳಿಂದ ದೇಶ ಮುನ್ನೇಡೆದಿದೆ, ರೈತರ, ಮಹಿಳೆ, ಮಕ್ಕಳು, ಕಾರ್ಮಿಕರು, ವಿವಿಧ ವರ್ಗದವರಿಗಾಗಿ ಕ್ರಾಂತಿಕಾರಿ ನಿರ್ಣಯಗಳನ್ನು ಕೈಗೊಂಡಿದೆ, ಕರ್ನಾಟಕದಲ್ಲಿಯೂ ಜನ ಬದಲಾವಣೆಯನ್ನು ಬಯಸಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ.
ಮೋದಿ ಮೋಡಿಗೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು : ನಿಗದಿತ ಸಮಯಕ್ಕೆ ಹೆಲಿಕ್ಯಾಪ್ಟರ್‌ ಮೂಲಕ ಬಂದಳಿದ ಮೋದಿ ಆಗಮಿಸುತ್ತಿದಂತೆ ನೇರದಿದ್ದ ಅಸಂಖ್ಯಾತ ಕಾರ್ಯಕರ್ತರು ಮೋದಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿ ಕುಣಿದು ಕುಪ್ಪಳಿಸಿದರು, ಹೆಲಿಪ್ಯಾಡನಿಂದ ವೇದಿಕೆಗೆ ಆಗಮಿಸಿದ ಮೋದಿ ನೇರವಾಗಿ ಭಾಷಣಕ್ಕೆ ನಿಂತಾಗ ಕಾಂiÀiರ್ಕರ್ತರಲ್ಲಿ ಮತ್ತಷ್ಟು ಹುಮ್ಮಸ್ಸು ಹಿಮ್ಮಡಿಗೊಂಡಿತು.

loading...