ಕಾಂಗ್ರೆಸ್, ಜೆಡಿಎಸ್ ಮೈತ್ರಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

0
19
loading...

ಕನ್ನಡಮ್ಮ ಸುದ್ದಿ-ಕುಮಟಾ : ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದ ಬಿಜೆಪಿ ಕಾರ್ಯಕರ್ತರು ಬುಧವಾರ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿಕೊಂಡು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವುದನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಪಟ್ಟಣದಲ್ಲಿ ಗಿಬ್ ಸರ್ಕಲ್‍ನಿಂದ ತಹಸೀಲ್ದಾರ್ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಕಾರ್ಯಕರ್ತರನ್ನು ಉz್ದÉೀಶಿಸಿ ಮಾತನಾಡಿ, ಈಗಾಗಲೇ ಮಂತ್ರಿ ಪದವಿಗಾಗಿ ಎರಡು ಪಕ್ಷಗಳಲ್ಲಿ ಕಿತ್ತಾಟ ಆರಂಭವಾಗಿದೆ. ನಮ್ಮ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಮಂತ್ರಿ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ನೀಡಬಾರದೆಂದು ಮಾಜಿ ಪ್ರಧಾನಿ ದೇವೆ ಗೌಡ ಅವರು ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮತದಾರರು ತಿರಸ್ಕರಿಸಿದರೂ ಸಹ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಜನಾಭಿಪ್ರಾಯವನ್ನು ದಿಕ್ಕರಿಸಿ, ಅಧಿಕಾರದ ದುರಾಸೆಗೆ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ. ಈ ಎಲ್ಲ ಘಟನಾಕ್ರಮಗಳನ್ನು ಗಮನಿಸಿದರೆ, ಕೆಲ ತಿಂಗಳಲಲ್ಲೆ ಮೈತ್ರಿ ಸರ್ಕಾರ ಉರುಳುವ ಸಾಧ್ಯತೆಯಿದ್ದು, ಮತ್ತೆ ಪುನಃ ಬಿಜೆಪಿ ರಾಜ್ಯದಲ್ಲಿ ಸರ್ಕಾರವನ್ನು ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಕುಮಟಾ ತಾಲೂಕು ಅಧ್ಯಕ್ಷ ಕುಮಾರ ಮಾರ್ಕಾಂಡೆ, ಹೊನ್ನಾವರ ಮಂಡಲಾಧ್ಯಕ್ಷ ಸುಬ್ರಾಯ ನಾಯ್ಕ, ಜಿಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಪ್ರಮುಖರಾದ ವಿನೋದ ಪ್ರಭು, ಡಾ ಜಿ ಜಿ ಹೆಗಡೆ, ಅಶೋಕ ಪ್ರಭು, ಎಂ ಜಿ ಭಟ್, ಕಿಶನ ವಾಳ್ಕೆ, ನಾಗವೇಣಿ ಹೆಗಡೆ, ಸುಮನಾ ಪಟಗಾರ, ಸುಧಾ ಗೌಡ, ಸಂತೋಷ ನಾಯ್ಕ, ಎಂ ಜಿ ನಾಯ್ಕ, ಹೇಮಂತಕುಮಾರ ಗಾಂವ್ಕರ್, ಜಿ ಐ ಹೆಗಡೆ, ಸೀತಾರಾಮ ಗುನಗಾ, ಉಮೇಶ ನಾಯ್ಕ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...