ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ವಿರೋಧಿಸಿ ಬಿಜೆಪಿ ಪ್ರತಿಭಟನೆ

0
15
loading...

ಹಿರೇಕೆರೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವುದನ್ನು ವಿರೋಧಿಸಿ ತಾಲೂಕ ಬಿಜೆಪಿ ಘಟಕದ ವತಿಯಿಂದ ಕರಾಳ ದಿನಾಚರಣೆಯನ್ನು ಆಚರಿಸಲಾಯಿತು.

ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಮಾಜಿ ಶಾಸಕ ಯು.ಬಿ ಬಣಕಾರ ಹಾಗೂ ತಾಲೂಕ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಅರ್ ಅಂಗಡಿ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಸೋನಿಯಾ,ರಾಹುಲ್, ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.
ನಂತರ ಮಾತನಾಡಿದ ಮಾಜಿ ಶಾಸಕ ಯು.ಬಿ.ಬಣಕಾರ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಕರಾಳ ದಿನಾವದ ಇಂದು ರಾಜ್ಯದ ಜನತೆಗೆ ಮಂಕುಬೂದಿ ಎರಚಲು ಮುಂದಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ನಂತರದಲ್ಲಿ ಅಪವಿತ್ರ ಮೈತ್ರಿಕೊಂಡಿವೆ. ಇದು ರಾಜ್ಯದ ಜನತೆಗೆ ಮಾಡಿದ ಮೋಸವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ಆಶೀರ್ವದಿಸಿದ್ದರೂ ಸಹ ಈ ಎರಡು ಪಕ್ಷದ ನಾಯಕರ ಕುತಂತ್ರದಿಂದಾಗಿ ಬಿಜೆಪಿ ಅಧಿಕಾರದಿಂದ ಹಿನ್ನಡೆ ಅನುಭವಿಸುವಂತಾಯಿತು.ಈ ಎರಡು ಪಕ್ಷಗಳು ಈಗ ಮಾಡಿಕೊಂಡಿರುವ ಅಪವಿತ್ರ ಮೈತ್ರಿ ಹೆಚ್ಚು ದಿನ ಇರುವುದಿಲ್ಲ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ಕ್ಷತ್ರಗಳಲ್ಲಿ ಟೆವಣಿ ಕಳೆದುಕೊಳ್ಳಲಿದೆ ಎಂದರು.

ಮಾಜಿ ಮುಖ್ಯ ಸಚೇತಕ ಡಿ.ಎಂ ಸಾಲಿ ಮಾತನಾಡಿ, ಬಿಜೆಪಿ ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ಗೌರವ ಹಿಂದಿದೆ.ಜನ ಆಶೀರ್ವಾದ ಮಾಡಿದ್ದು ಬಿಜೆಪಿಗೆ, ಆದರೆ ಈಗ ಅಧಿಕಾರದ ದಾಹದಿಂದ ಕಾಂಗ್ರೆಸ್, ಜೆಡಿಎಸ್ ಒಂದಾಗಿವೆ ಎಂದರು.
ತಾಲೂಕ ಘಟಕದ ಅಧ್ಯಕ್ಷ ಎಸ್.ಆರ್. ಅಂಗಡಿ ಮಾತನಾಡಿ,ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬುಡಮೇಲು ಮಾಡುವ ತಂತ್ರವನ್ನು ರಾಜ್ಯದ ಜನ ಎಂದಿಗೂ ಕ್ಷಮಿಸುವುದಿಲ್ಲ ಈ ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಮಹೇಶ ಗುಬ್ಬಿ, ಎನ್.ಎಂ.ಈಟೇರ,ಲಿಂರಾಜ ಚಪ್ಪರದಹಳ್ಳಿ, ನಾರಾಯಣಪ್ಪ ಗೌರಕ್ಕನವರ, ಮಹೇಂದ್ರ ಬಡಳ್ಳಿ, ಶಿವಕುಮಾರ ತಿಪ್ಪಶಟ್ಟಿ, ಹಾಗೂ ಬಿಜೆಪಿ ಜಿಪಂ, ತಾಪಂ, ಪಪಂ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.

loading...