ಕಾಂಗ್ರೆಸ್ ಪ್ರಣಾಳಿಕೆ ಲೇವಡಿ ಪುಸ್ತಕ : ಸಚಿವ ಅನಂತಕುಮಾರ

0
18
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರು ಇಲ್ಲಿನ ಖಾಸಗೀ ಹೋಟೇಲ್‍ನಲ್ಲಿ ಉತ್ತರ ಕನ್ನಡ ಜಿಲ್ಲಾ ಬಿ.ಜೆ.ಪಿ. ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಕರ್ನಾಟಕದಲ್ಲಿ ಈ ಬಾರಿ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬರಲಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದೊಂದಿಗೆ ಪ್ರಣಾಳಿಕೆಯಲ್ಲಿನ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಲಾಗುವುದು ಎಂದ ಅವರು ಕೇಂದ್ರ ಸರಕಾರದಲ್ಲಿ ತೋಟಗಾರಿಕಾ ಮಿಷನ್ ಉತ್ತಮ ಕೆಲಸ ಮಾಡಿದ್ದು ಶೇ.28 ರಿಂದ ಶೇ.52ರಷ್ಟಾಗಿದೆ. ವಿವಿಧ ತೋಟಗಾರಿಕಾ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಗೋಕರ್ಣದ ತರಕಾರಿ ಅತ್ಯಂತ ಉತ್ತಮವಾಗಿದ್ದು ಇದಕ್ಕೆ ಮಾರುಕಟ್ಟೆ ವದಗಿಸಲು ಕ್ರಮ ಜರುಗಿಸಲಾಗಿದೆ ಎಂದರು.
ಸಮುದ್ರ ಕೊರೆತ ತಡೆಗಟ್ಟಲು ವಿಶೇಷ ಯೋಜನೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಅತಿಕ್ರಮಣ ಸಕ್ರಮಗೊಳಿಸಲು ಕೇಂದ್ರ ಸರ್ಕಾರದ ಮೇಲೆ ವಿಶೇಷ ಇತ್ತಡ. ರೈತರಿಗೆ ಸೊಪ್ಪಿನ ಬೆಟ್ಟ ಬಳಕೆಯಲ್ಲಿ ಹೆಚ್ಚಿನ ಸೌಲಭ್ಯ ನೀಡಿ ರೈತರಿಗೆ ಆರ್ಥಿಕ ಅನುಕೂಲವಾಗುವ ಯೋಜನೆ ಹಾಗೂ ಕಾನೂನು ರೂಪಿಸುವುದು. ವನವಾಸಿಗಳ ಹಾಗೂ ಅಭಯಾರಣ್ಯ ವಾಸಿಗಳ ಹಕ್ಕುಗಳ ರಕ್ಷಣೆ ಹಾಗೂ ಸೌಕರ್ಯಗಳ ಅಭ್ವೃದ್ಧಿಗೆ ಕ್ರಮ. ಜೀವವೈವಿಧ್ಯತೆ ರಕ್ಷಣೆಗೆ ವಿಶ್‍ಏಷ ಆದ್ಯತೆ. ಈಗಾಗಲೇ ಜಿಲ್ಲೆಯ ಪ್ರವಾಸಿಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸಿದ್ದು, ಇದನ್ನು (ಯಾತ್ರಿ ನಿವಾಸ, ಸಂಪರ್ಕ ವೀಕ್ಷಣಾಲಯ, ಪ್ರವಾಸಿಗರಿಗೆ ಮೂಲಕ ಸೌಕರ್ಯ) ಅಭಿವೃದ್ಧಿ ಪಡಿಸಲು ಆದ್ಯತೆ. ಗ್ರಾಮೀಣ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ ಸ್ಥಳಿಯ ತಿಂಡಿ, ವೈವಿಧ್ಯತೆ ಸಂಸ್ಕೃತಿ, ಕಲೆಗಳ ಪರಿಚಯ ಮಾಡಿಸುವುದು. ಕೇಂದ್ರ ರಾಜ್ಯ ಹಾಗೂ ಖಾಸಗಿ ಸಹಭಾಗಿತ್ವದಲ್ಲಿನಮ್ಮಜಿಲ್ಲೆಯನ್ನು ಪ್ರವಾಸಿ ಜಿಲ್ಲೆಯನ್ನಾಗಿ ಮಾದಲು ವಿಶೇಷ ಗಮನ.
ತರಕಾರಿ ಹಾಗೂ ಮೀನು ಮಾರುಕಟ್ಟೆ ಅಭಿವೃದ್ಧಿ ಗಾಮೀಣಾಭಿವೃದ್ಧಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸಂಪರ್ಕಕ್ಕೆ ಸರ್ವಋತು ರಸ್ತೆ ನಿರ್ಮಾಣಕ್ಕೆ ವಿಶೇಷ ಆದ್ಯತೆ ದೊಡ್ಡ ಸೇತುವೆ, ಕಾಲುಸಂಕ, ನಿರ್ಮಾಣಕ್ಕೆ ಕ್ರಮ ಕುಡಿಯುವ ನೀರಿನ ಯೋಜನೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು. ಪ್ರತಿ ಗ್ರಾಮದಲ್ಲಿ ಅಭಾಭವನ ನಿರ್ಮಾಣ ಇ-ಸ್ವತ್ತು ನಿಯಮಗಳನ್ನು ಸರಳಗೊಳಿಸುವುದು.  ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಟ್ಟಡ ನವೀಕರಣ, ಅಂಗನವಾಡಿಗಳಿಗೆ ಸಕಲ ಮೂಲಭೂತ ಸೌಕರ್ಯ. ಮೂಲಭೂತ ಸೌಕರ್ಯ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆರಿಸಿ ಅದನ್ನು ಉತ್ತಮ ರೀತಿಯಲ್ಲಿಅಭಿವೃದ್ಧಿ ಪಡಿಸಲಾಗುವುದು. ಜಿಲ್ಲೆಯ ಸೀಬರ್ಡ್ ನೌಕಾನೆಲೆಯ ವಿಮಾನ ನಿಲ್ದಾಣವನ್ನು ನಾಗರಿಕ ಸೇವೆಗೆ ಒಅದಗಿಸಲು ಕ್ರಮ. ಜಿಲ್ಲೆಯ ಘಟ್ಟದ ಮೇಲಿನ ಹಾಗೂ ಕೆಳಗಿನ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸುವುದು. ಇತರೆ ಪ್ರತಿ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಳ ನಿರ್ಮಾಣ, ಅಭಿವೃದ್ಧಿ ಸೇರಿದಂತೆ ಹಲವಾರು ವಿಷಯಗಳು ಸೇರಿದೆ.

loading...