ಕಾಂಗ್ರೆಸ ಪರ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಪ್ರಚಾರ

0
12
loading...

ಕನ್ನಡಮ್ಮ ಸುದ್ದಿ-ಮುದ್ದೇಬಿಹಾಳ: ಮುದ್ದೇಬಿಹಾಳ ಮತಕ್ಷೇತ್ರದಿಂದ ಈ ಭಾರಿ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ವಿಧಾನಸಭಾ ಚುನಾವಣೆಗೆ ಸತತ ಆರನೇ ಬಾರಿಗೆ ಗೆಲುವು ಸಾಧಿಸುವ ಕನಸಿನೊಂದಿಗೆ ಹಾಲಿ ಶಾಸಕ, ಕಾಂಗ್ರೇಸ್‌ ಅಭ್ಯರ್ಥಿ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಪರ ಮಂಗಳವಾರ ರಂದು ಮುದ್ದೇಬಿಹಾಳ ತಾಲ್ಲೂಕಿನ ವಿವಿಧ ತಾಂಡಾಗಳಾದ ಹುಲ್ಲೂರ ತಾಂಡಾ ಹಾಗೂ ಜಟ್ಟಗಿ ತಾಂಡಾ ಚಲಮಿ ತಾಂಡಾದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಮತಯಾಚಿಸಿ ಹಿಂದಿನ ಕಾಂಗ್ರೇಸ ಸರಕಾರದಿಂದ ನಡೆದ ವಿವಿಧ ಕಾರ್ಯಕ್ರಮದ ವಿಷಯಗಳ ಬಗ್ಗೆ ಅರಿವು ಮೂಡಿಸಿ ಮತಯಾಚಿಸಿದರು.
ಮಾಜಿ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಮತಯಾಚಿಸಿ ಮಾತನಾಡಿದರು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ ಪಕ್ಷ ಮತ್ತೆ ಅಧಿಕಾರಕ್ಕೆ ಬರುವದು ಖಚೀತ ಮಾಹಿತಿ ನಮಗೆ ಸಮೀಕ್ಷೆ ಮೂಲಕ ತಲುಪಿದೆ.
ಈ ಸಮಯದಲ್ಲಿ ಕಾಂಗ್ರೇಸ ಹಿರಿಯ ಮುಖಂಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎಮ್‌ ಎಸ್‌ ನಾಯಕ ಮಾತನಾಡಿ ಬಿಜೆಪಿ ಸರಕಾರ ಭ್ರಷ್ಠ ಸರಕಾರವಾಗಿದ್ದು, ಈ ಸರಕಾರದಲ್ಲಿ ನಮ್ಮ ಸಮುದಾಯವನ್ನು ತುಳಿತಕ್ಕೆ ಒಳಪಡಿಸಿ ಅನ್ನ ಇಲ್ಲದಂತೆ ಮಾಡುತ್ತದೆ ಆದ್ದರಿಂದ ಕಾಂಗ್ರೇಸನ್ನು ಬೆಂಬಲಿಸಿ ಎಂದು ಮನವಲಿಸಿದರು. ಅದರಂತೆ ರಾಷ್ಟ್ರೀಯ ಬಂಜಾರ ಕ್ರಾಂತಿ ದಳ ರಾಜ್ಯಾಧ್ಯಕ್ಷ ಅಶೋಕಕುಮಾರ ರಾಠೋಡ ಮಾತನಾಡಿ, ನಮ್ಮ ದೇಶದಲ್ಲಿ ಭ್ರಷ್ಠ ರಾಜಕೀಯ ಒತ್ತಡ ಹೇಚ್ಚಾಗಿದ್ದು ಆಮಿಶಕ್ಕೆ ಒಳಗಾಗದೇ ತಮ್ಮ ಮತವನ್ನು ಮಾರಿಕೊಳ್ಳದೆ ನಿಷ್ಠಾವಂತ ಅಭ್ಯರ್ಥಿಯಾದ ಸಿ.ಎಸ್‌.ನಾಡಗೌಡ(ಅಪ್ಪಾಜೀ) ಯವರನ್ನು ಬೆಂಬಲಿಸಿ ಅವರನ್ನು ಮುಂದಿನ ವಿಧಾನ ಸಭೆ ಶಾಸಕರನ್ನಾಗಿ ಮಾಡುವದು ನಮ್ಮ ಸಮುದಾಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ರಾಹುಲ(ಚಿನ್ನುಧನಿ) ನಾಡಗೌಡ, ಕಾಂಗ್ರೇಸ ಯುವ ಮುಖಂಡ ಸಂತೋಷ ಚವ್ಹಾಣ, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಿ.ಕೆ.ಬಿರಾದಾರ, ಭೂ ನ್ಯಾಯ ಮಂಡಳಿ ನಾಮ ನಿರ್ದೇಶಕ ಸದಸ್ಯ ಎಮ್‌ ಎನ್‌ ಚವ್ಹಾಣ, ಗ್ರಾ.ಪಂ ಸದಸ್ಯ ತಾವರಪ್ಪ ಜಾಧವ, ಕಾಂಗ್ರೇಸ ಮುಖಂಡ ಮುತ್ತಣ ರಾಠೋಡ, ಸೋಮಸಿಂಗ ಚವ್ಹಾಣ, ಅನೀಲ ನಾಯಕ, ಪ್ರಶಾಂತ ರಾಠೋಡ, ಸೇರಿದಂತೆ ಊರಿನ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.

loading...