ಕಾಂಗ್ರೇಸ್-ಜೆಡಿಎಸ್ ಅನೈತೀಕ ಮೈತ್ರಿ: ಶಾಸಕ ಹಾಲಪ್ಪ ಆಚಾರ

0
15
loading...

ಯಲಬುರ್ಗಾ: ಒಬ್ಬರಿಗೊಬ್ಬರು ವಿರೋಧವಾಗಿ ಟೀಕಿಸಿ ಮಾತನಾಡುವ ಮೂಲಕ ಬದ್ದ ವೈರಿಯಂತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಈಗ ಮೈತ್ರಿ ಮಾಡಿಕೊಳ್ಳುವ ಮೂಲಕ ಸರಕಾರ ರಚನೆಗೆ ಮುಂದಾಗುತ್ತಿರುವುದು ನಿಜಕ್ಕೂ ಇದೊಂದು ಅನೈತಿಕ ಸಂಬಂಧ ಅಪಮೈತ್ರಿಯಾಗಿದೆ ಎಂದು ಬಿಜೆಪಿ ಪಕ್ಷ ನೂತನ ಶಾಸಕ ಹಾಲಪ್ಪ ಆಚಾರ ಟೀಕಿಸಿದರು.

ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದನ್ನು ಖಂಡಿಸಿ ರಾಜ್ಯ ಬಿಜೆಪಿ ಘಟಕ ಕರೆ ನೀಡಿದ್ದ ಕರಾಳ ದಿನಾಚರಣೆಯಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ರಾಜ್ಯದ ಜನತೆ ತೀರ್ಪು ವಿರುದ್ದ ನಡೆದುಕೊಳ್ಳುತ್ತಿರುವವರು ಯಾವ ರೀತಿ ಜನಪರ ಸರ್ಕಾರ ನಿಡುತ್ತಾರೆ ಎಂದು ಅಸಮಾದಾನ ವ್ಯಕ್ತಪಡಿಸಿದ ಅವರು,ಇತಿಹಾಸದಿಂದಲೂ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದವರು ಟೀಕಿ ಟಿಪ್ಪಣೆ ಮಾಡುತ್ತಾ ಅವರಪ್ಪಣ್ಣೆಗೂ ಮುಖ್ಯಮಂತ್ರಿಯಾಗಲ ಎಂದವರು ಈಗ ಅದೇ ಪಕ್ಷದ ಜೋತೆ ಕೈಜೋಡಿಸಿದ್ದು ನೋಡಿದರೆ ಇದೊಂದು ಅಪಮೈತ್ರಿ ಸರಕಾರವಾಗಿದೆ.ಈ ಹಿಂದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ನುಡಿದಂತೆ ನಡೆಯಲಿಲ್ಲ.ಜನರಿಗೆ ಜನಪರ ಯೋಜನೆಗಳನ್ನು ಜಾರಿಗೆ ತರಲಿಲ್ಲ. ಅಲ್ಲದೇ ಈ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ರಾಯರೆಡ್ಡಿ ಕೂಡಾ ಏನು ಅಭಿವೃದ್ದಿಪರ ಕೆಲಸಗಳನ್ನು ಮಾಡಲಿಲ್ಲ.ತಾಲೂಕಿನ ಶಿಡ್ಲಭಾವಿ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಸುಮಾರು ನೂರು ವಿಧ್ಯಾರ್ಥಿಗಳಿದ್ದರು ಕೂಡಾ ಅಲ್ಲಿ ಶಿಕ್ಷಕರು ಇಲ್ಲಾ.ಅದನ್ನು ನೋಡಿದರೆ ಹಿಂದಿನ ಶಾಸಕರು ಏನು ಕೆಲಸ ಮಾಡಿದ್ದಾರೆ ಅಂತಾ ಗೋತ್ತಾಗುತ್ತೆ.ರಾಯರೆಡ್ಡಿಯವರು ಗೌರವದಿಂದ ಮಾತನಾಡಬೇಕು. ಅಗೌರವದಿಂದ ಮಾತನಾಡಿದರೆ ಮುಂದಿನ ದಿನಮಾನಗಳಲ್ಲಿ ಅವರಿಗೆ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಸಿ.ಎಚ್.ಪೋಲೀಸ್ ಪಾಟೀಲ್,ಶಿವನಗೌಡ ಬನ್ನಪ್ಪಗೌಡ, ಕೊಟ್ರಪ್ಪ ತೋಟದ, ಅರವಿಂದಗೌಡ ಪಾಟೀಲ್, ಶಿವಶಂಕರ ದೇಸಾಯಿ, ವೀರಣ್ಣ ಹುಬ್ಬಳ್ಳಿ ಸೇರಿದಂತೆ ಮತ್ತಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ಸುರೇಶಗೌಡ ಶಿವನಗೌಡ,ರುದ್ರಪ್ಪ ನಡುಲಮನಿ,ಸಿದ್ರಾಮೇಶ ಬೇಲೇರಿ, ಷಣ್ಮುಖಪ್ಪ ರಾಂಪೂರು,ಶಿವಕುಮಾರ ನಾಗಲಾಪೂರಮಠ,ನೀಲನಗೌಡ ತಳುವಗೇರಿ, ಶರಣಪ್ಪ ಬಣ್ಣದಭಾವಿ, ಶಿವಾನಂದ ಬಣಕಾರ, ವಸಂತ ಭಾವಿಮನಿ,ಈರಪ್ಪ ಬಣಕಾರ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು.

loading...