ಕಾಯಕ ಜೀವಿಗಳ ಪರಿಶ್ರಮದಿಂದ ರಾಷ್ಟ್ರದ ಆರ್ಥಿಕ ಏಳ್ಗೆಗೆ ಭದ್ರ

0
1
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಕಾಯಕ ಜೀವಿಗಳ ಪರಿಶ್ರಮದಿಂದ ರಾಷ್ಟ್ರದ ಆರ್ಥಿಕ ಏಳ್ಗೆಗೆ ಭದ್ರಬುನಾದಿ ಎಂದು ಡಾ. ಎಂ.ಎಸ್‌. ಚಾಂದಕವಠೆಯವರು ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕಾಯಕ ದಿನಾಚರಣೆ ಅಂಗವಾಗಿ ಸಾಧಕರಿಗೆ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಕಾಯಕವೆನ್ನುವುದು ಸತ್ಯ ಹಾಗೂ ಶುದ್ಧವಾದ ದುಡಿಮೆ. ದುಡಿಮೆ ಇಲ್ಲದಿದ್ದರೆ ಬದುಕು ಅಸನೀಯವಾಗುತ್ತದೆ. ಕಾಯಕದ ಮಹತ್ವ ಹಾಗೂ ಕಾಯಕ ಜೀವಿಗಳ ಪರಿಶ್ರಮ, ರಾಷ್ಟ್ರದ ಆರ್ಥಿಕ ಏಳ್ಗೆಗೆ ಕಾಯಕವೇ ಭದ್ರಬುನಾದಿ ಎಂದು ಅಭಿಪ್ರಾಯ ವ್ಯಕ್ತಪಡೆಸಿದರು.
ಕಾಯಕ ಜೀವಿಗಳಾದ ಷಣ್ಮುಖಪ್ಪ ಪತ್ತಾರ, ಗುಬ್ಬವ್ವ ಕುಂಬಾರ, ರಾಣಾಬಾಯಿ ಚವ್ಹಾಣ, ಹುಲಗೆಪ್ಪ ಭಜಂತ್ರಿ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಲಿಂ. ಬಸಪ್ಪ ಹಾಗೂ ಲಿಂ. ನಂದವ್ವ ಸಾಲಕ್ಕಿ ಅವರ ಸ್ಮರಣಾರ್ಥವಾಗಿ ನಡೆದ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ಬಸವಲಿಂಗ ಸ್ವಾಮಿಜಿ ವಹಿಸಿದ್ದರು.
ಜಂಬುನಾಥ ಕಂಚ್ಯಾಣಿ ಅಧ್ಯಕ್ಷ ಸ್ಥಾನ ವಹಿಸಿದ್ದರು. ಗಂಗಾಧರ ಸಾಲಕ್ಕಿ ಮತ್ತು ಎಸ್‌.ಡಿ. ಮಾಧನಶೆಟ್ಟಿ, ಮಹಾಂತ ಗುಲಗಂಜಿ, ವಿ.ಸಿ. ನಾಗಠಾಣ, ಎಂ.ಐ. ಕುಮಟಗಿ, ಪ್ರೊ. ಶಿರೂರ, ಪ್ರಭಾವತಿ ದೇಸಾಯಿ, ಹೇಮಲತಾ ವಸ್ತ್ರದ, ಎಲ್‌.ಪಿ. ಬಿರಾದಾರ, ಎಂ.ಎಂ. ಅಂಗಡಿ, ಇಂದುಮತಿ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
ರಾಜಶೇಖರ ಉಮರಾಣಿ ಸ್ವಾಗತಿಸಿದರು. ದೊಡ್ಡಣ್ಣ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮ.ಗು. ಯಾದವಾಡ ವಂದಿಸಿದರು.

loading...