ಕಾರ್ಯಕರ್ತರಿಂದ ಮತದಾನದ ಮಾಹಿತಿ ಪಡೆದ ಜೊಲ್ಲೆ ದಂಪತಿ

0
35
loading...

ಚಿಕ್ಕೋಡಿ 13: ರಾಜ್ಯಾದ್ಯಂತ ಪೂರ್ಣಗೊಂಡ 2018 ರ ವಿಧಾನಸಭಾಚುನಾವಣೆ ಪೂರ್ಣಗೊಂಡಿದ್ದು, ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶಶಿಕಲಾ ಜೊಲ್ಲೆಯವರುಹಾಗೂ ಚಿಕ್ಕೋಡಿ-ಸದಲಗಾ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವಅಣ್ಣಾಸಾಹೇಬ ಜೊಲ್ಲೆರವರುಇಂದು ಭಿವಶಿಯ ತಮ್ಮ ಫಾರ್ಮಹೌಸನಲ್ಲಿ ಚುನಾವಣೆಯ ಕುರಿತು ಕಾರ್ಯಕರ್ತರೊಟ್ಟಿಗೆ ಚರ್ಚೆ ನಡೆಸಿದರು.
ನಿಪ್ಪಾಣಿ ಹಾಗೂ ಚಿಕ್ಕೋಡಿ-ಸದಲಗಾ ವಿಧಾನಸಭಾಕ್ಷೇತ್ರದ ಮತದಾನ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಮತಗಟ್ಟೆಗಳ ಶೇಕಡಾವಾರು ಮತದಾನದ ಕುರಿತು ಚರ್ಚೆ ನಡೆಸಿದರು.
ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗರುವ ಶಶಿಕಲಾ ಜೊಲ್ಲೆಯವರು ಮಾತನಾಡಿ, ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳ ತಾಂತ್ರಿಕದೋಷದಿಂದ ಮತದಾನ ವಿಳಂಬವಾಗಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಮ್ಮ ಗೆಲುವು ನಿಶ್ಚಿತವಾಗಲಿದ್ದು, ನಿಪ್ಪಾಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ, ಮಾದರಿಕ್ಷೇತ್ರವನ್ನಾಗಿಸಲು ಶ್ರಮವಹಿಸಲಾಗುವುದುಎಂದು ಹೇಳಿದರು.
ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕ್ಷೇತ್ರದಲ್ಲಿಜನ ಪರಿವರ್ತನೆ ಬಯಸಿ ನನ್ನನ್ನು ಚುನಾವಣೆಗೆ ಸ್ಪರ್ಧಿಸಲು ಪ್ರೇರೆಪಿಸಿ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ಮಾಡಿ ನಮ್ಮ ಗೆಲುವಿಗೆ ಸಾಥ್ ನೀಡಿದ್ದಾರೆ. ಚಿಕ್ಕೋಡಿ-ಸದಲಗಾ ಮತಕ್ಷೇತ್ರದಲ್ಲಿ ಈ ಬಾರಿ ನಮ್ಮ ಪ್ರಚಂಡ ಗೆಲುವಿನೊಂದಿಗೆ ಕಮಲ ಅರಳುವುದು ನಿಶ್ಚಿತವಾಗಿದ್ದು, ಜನಾಶೀರ್ವಾದದಿಂದ ಆಯ್ಕೆಯಾದ ನಾನು ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳಾದ ಕುಡಿಯುವ ನೀರು, ರೈತರಆರ್ಥಿಕ ಪ್ರಗತಿಗೆ ಪೂರಕವಾಗುವಂತಹ ಕೃಷಿ ಅಭಿವೃದ್ಧಿಗೆ ಮಹತ್ವ ನೀಡಿಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ರಾಜ್ಯದಲ್ಲಿಯೇ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಸಂಕಲ್ಪ ಹೊಂದಿದ್ದು, ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಜನಸಮುದಾಯಗಳ ಕಲ್ಯಾಣಕ್ಕಾಗಿ ಶ್ರಮಿಸಲು ಸದಾಕಟಿಬದ್ಧವಿರುವುದಾಗಿಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಶಿಂತ್ರೆ, ನಗರಸೇವಕರಾದರಾಜ ಪಠಾಣ, ಎಪಿಎಂಸಿ ಸದಸ್ಯ ಸಂಜಯ ಶಿಂತ್ರೆ, ಮಲಗೌಡ ಪಾಟೀಲ, ದಾದಾಜಾಧವ, ಶ್ರೀಕಾಂತ ಕಣಗಲೆ, ರಾವಸಾಬ ಫರಾಳೆ, ತಾತ್ಯಾಸಾಬ ನಾಯಿಕ, ಸುನೀಲ ತಾವದಾರೆ, ರಾಮಚಂದ್ರ ಕೋಳಿನಿಪ್ಪಾಣಿ ಹಾಗೂ ಗ್ರಾಮೀಣ ಭಾಗದ ಮುಖಂಡರು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

loading...