ಕಾಲುವೆಯಿಂದ ಬೀಕಾಬಿಟ್ಟೆ ಕಾಮಗಾರಿ- ನಾಮಕೆವಾಸ್ತೆ ಪರಸಿ ಜೋಡನೆ

0
11
loading...

ಇಂಡಿ: ಗುತ್ತಿಬಸವಣ್ಣ ಏತ ನೀರಾವರಿ ಕಾಮಗಾರಿಗಳು ಬಲು ಜೋರಾಗಿ ತಾಲೂಕಿನಾದ್ಯಂತ ಉಪಕಾಲುವೆಗಳ ಕಾಮಗಾರಿಗಳು ನಡೆಯುತ್ತಿದ್ದು. ಆದರೆ ಅವು ಕಾಲುವೆಗಳು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮಿಲಾಗಿ ಸಂಪೂರ್ಣವಾಗಿ ಕೆಳಪೆಯಾಗಿದೆ. ಆದರೆ ಉಪಕಾಲುವೆಗಳು ನಿರ್ಮಾಣವಾಗಿದ್ದು. ಅವುಗಳಿಗೆ ಪರಸಿ ಬಳಕೆ ಮಾಡಿದ್ದು. ಆದರೆ ಇನ್ನೂ ನೀರು ಬರದೇ ಪರಸಿ ಒಡೆದುಹೋಗಿರುವ ತಾಜಾ ಉದಾಹರಣೆ ಇಲ್ಲಿದೆ.
ತಾಲೂಕಿನ ತಾಂಬಾ, ಹಿರೇರೂಗಿ, ತೆನ್ನಳ್ಳಿ, ಬೆನಕನಳ್ಳಿ, ಗೋರನಾಳ, ಚಿಕ್ಕರೂಗಿ, ಜೋಡಗುಡಿ, ತಡವಲಗಾ, ಚವಡಿಹಾಳ, ನಿಂಬಾಳ, ಬೋಳೇಗಾಂವ, ಹಂಜಗಿ, ಹೀಗೆ ಹಲವಾರು ಗ್ರಾಮಗಳಲ್ಲಿ ಈಗಾಗಲೇ ತೀವ್ರಗತಿಯಲ್ಲಿ ನಿರ್ಮಾಣವಾಗುತ್ತಿದ್ದು. ಆದರೆ ಕಾಲುವೆಗಳನ್ನು ಗುತ್ತಿಗೆದಾರರು ತಮಗೆ ಮನಸ್ಸಿಗೆ ಬಂದಂತೆ ಕಾಮಗಾರಿ ನಿರ್ಮಾಣ ಮಾಡುತ್ತಿದ್ದು. ಈ ಕಾಮಗಾರಿಗಳನ್ನು ಯುಕೆಪಿಯ ಯಾವುದೇ ಅಭಿಯಂತರರು ಪರಿಶೀಲನೆ ಮಾಡದೇ ತಮಗೆ ಬೇಕಾದ ಕಡೆಗಳಲ್ಲಿ ಗುತ್ತಿಗೆದಾರರನ್ನು ಕರೆದು ಡೀಲ್‌ ಮುಗಿಸಿ ಅಲ್ಲಿಯೇ ಅವರ ಬಿಲ್‌ಗೆ ರುಜು ಹಾಕುತ್ತಿದ್ದಾರೆ. ಇದರಿಂದ ಈ ಭಾಗದ ನೂರಾರು ರೈತರ ಜಮೀನುಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಲ್ಯಾಟರಲ್‌ಗಳು ಸಂಪೂರ್ಣವಾಗಿ ಕೆಳಪೆಮಟ್ಟದಾಗಿವೆ ಇದರಿಂದ ನಿರ್ಮಾಣವಾದ ಒಂದೇ ತಿಂಗಳಲ್ಲಿ ಒಡೆದು ಹೋಗಿದೆ ಎಂದು ರೈತರ ದೂರಾಗಿದೆ.
ಯುಕೆಪಿಯ ಅಧಿಕಾರಿಗಳ ಬೆಜವಾಬ್ದಾರಿಯಿಂದ ಈ ಉಪಕಾಲುವೆ ಕೆಳಪೆ ಕಾಮಗಾರಿಯಾಗಿದ್ದರಿಂದ ಮಾತ್ರ ರೈತರ ಜಮೀನಲ್ಲಿ ನಿರ್ಮಾಣ ಮಾಡಿರುವ ಪರಸಿ ಹಚ್ಚಿ ಉಪಕಾಲುವೆಗಳು ನಿರ್ಮಾಣ ಮಾಡಿದ್ದು. ಅವುಗಳಿಗೆ ಇನ್ನು ನೀರು ಬರದೇ ಹಾಳಾಗಿವೆ.ಸಂಪೂರ್ಣವಾಗಿ ಕೂಡಲೇ ಈ ಕಾಲುವೆಗಳಿಗೆ ರೀಪೇರಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತರ ಮನವಿಯಾಗಿದೆ.
ರೈತ ಪ್ರಕಾಶ ಡಿ: ಗುತ್ತಿ ಬಸವಣ್ಣ ಕಾಲುವೆ ನಿರ್ಮಾಣ ಮಾಡುತ್ತಿರುವವುದು ಸಂತೋಷದ ವಿಷಯವಾಗಿದೆ. ಆದರೆ ಈಗ ನಿರ್ಮಾಣವಾಗುತ್ತಿರುವ ಕಾಲುವೆಗಳು ಸಂಪೂರ್ಣವಾಗಿ ಕೆಳಪೆದ ಮಟ್ಟದ್ದಾಗಿದೆ. ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮಕೈಕೊಳ್ಳುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ತಾಲೂಕು ಕಚೇರಿಯ ಮುಂದೆ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

loading...