ಕೃಷಿ ಕಾರ್ಮಿಕರ ಸಮುದಾಯಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತದೆ: ಆಲಗೂರ

0
14
loading...

ಬಸವನಬಾಗೇವಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರವೂ ದಲಿತ, ಕೃಷಿ ಕಾರ್ಮಿಕ ಹಾಗೂ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಶ್ರಮಿಸುವ ಜೊತೆಗೆ ಹಸಿವುಮುಕ್ತ ರಾಜ್ಯವನ್ನಾಗಿಸಿದ್ದು ಎಂದು ನಾಗಠಾಣ ಶಾಸಕ ರಾಜು ಆಲಗೂರ ಹೇಳಿದರು.
ಪಟ್ಟಣ ಖಾಸಗೀ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೃಷಿ ಯೋಜನೆ ಜೊತೆಗೆ ಅನೇಕ ಭಾಗ್ಯಗಳನ್ನು ಜಾರಿಗೊಳಿಸಿ ಮುಖ್ಯಮಂತ್ರಿಗಳು ಅಭಿವೃದ್ದಿ ಪರ ದಾಖಲೆ ಬರೆದಿದ್ದಾರೆ ಹೀಗಾಗಿ ಬಿಜೆಪಿ ದಕ್ಷಿಣ ಭಾರತದಲ್ಲಿ ಸರಕಾರ ರಚಿಸುವ ಕನಸು ಭಗ್ನವಾಗುವ ಜೊತೆಗೆ ಬಿಜೆಪಿ ಅವನತಿ ರಾಜ್ಯದಿಂದ ಆರಂಭವಾಗುತ್ತದೆ ಎಂದು ಹೇಳಿದರು.
ಪ್ರಧಾನಮಂತ್ರಿ ಮೋದಿ ಅವರು ಡಾ: ಅಂಬೇಡ್ಕರ ಅವರ ಜನ್ಮಸ್ಥಳ, ಅಧ್ಯಯನ ಸ್ಥಳ ಸೇರಿದಂತೆ 5ಧಾಮಗಳನ್ನು ನಿರ್ಮಾಣ ಮಾಡಿದ್ದೇನೆ ಎಂದು ಹೇಳಿ ದಲಿತರ ಮತಗಳನ್ನು ಪಡೆಯಲು ಮುಂದಾಗಿದ್ದಾರೆ, ಆದರೇ ಬಿಜೆಪಿ ಅಧಿಕಾರದಲ್ಲಿದ್ದ ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತೀ ಹೆಚ್ಚು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂವಿಧಾನಕ್ಕೆ ಅಗೌರವ ತೋರುತ್ತಾರೆ, ರೈತರು ಸಂಕಷ್ಟದಲ್ಲಿದ್ದಾಗ ರಾಜ್ಯ ಸರಕಾರ ಸಾಲ ಮನ್ನಾ ಪರಿಹಾರ ನೀಡಿ ರೈತರಿಗೆ ಧೈರ್ಯ ತುಂಬಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಶಿವಾನಂದ ಪಾಟೀಲ ಅವರು ಈ ಹಿಂದಿನ ಅವಧಿಯಲ್ಲಿ ನೀರಾವರಿ, ಕಾಲುವೆಗಳ ನಿರ್ಮಾಣ, ಸಮುದಾಯ ಭವನ, ಸಿಸಿ ರಸ್ತೆ, ಡಾಂಬರೀಕರಣ ಸೇರಿದಂತೆ ಸಾಕಷ್ಟೂ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು ಎಲ್ಲ ಸಮುದಾಯದೊಂದಿಗೆ ಉತ್ತಮ ಒಡನಾಟ ಹೊಂದಿದ್ದು ದಾಖಲೆ ಮತಗಳ ಅಂತರದಿಂದ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ, ರಾಜ್ಯ ಸರಕಾರ ಅಂಬಿಗರ ಚೌಡಯ್ಯ, ಸೇವಾಲಾಲ ಜಯಂತಿ ಆರಂಭಿಸಿದ್ದು ಸರಕಾರದ ಜನಪರ ಕಾಳಜಿ ಪ್ರತೀಕವಾಗಿದೆ ಎಂದು ಹೇಳಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಚರ್ಚೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಶೇ 10ರಷ್ಟು ಜನತೆ ಪ್ರತ್ಯೇಕ ಧರ್ಮದ ಕುರಿತಾಗಿ ಚರ್ಚೆಯಲ್ಲಿ ತೊಡಗಿದ್ದಾರೆ ಆದರೇ ಶೇ 90ರಷ್ಟು ಜನತೆ ಎಂ.ಬಿ.ಪಾಟೀಲರ ಅಭಿವೃದ್ದಿ ಕಾಮಗಾರಿ ನೋಡಿ ಬೆಂಬಲಿಸಲು ನಿಶ್ಚಯಿಸಿಸದ್ದಾರೆ, ಸದಾಶಿವ ಆಯೋಗ ವರದಿಯನ್ನು ಈಗಾಗಲೇ ಕಾನೂನು ಸಲಹೆ ರವಾನಿಸಿದ್ದು ಸರಕಾರ ಅಧಿಕಾರವಹಿಸಿಕೊಂಡ ಪ್ರಥಮ ತಿಂಗಳಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುರೇಶ ಮಣ್ಣೂರ, ಪುರಸಭೆ ಸದಸ್ಯ ಸಂಜೀವ ಕಲ್ಯಾಣಿ, ಚಂದ್ರಶೇಖರ ಕೊಡಬಾಗಿ, ಆರ್‌.ಕೆ.ಜವನರ, ಪ್ರೊ: ಎಂ.ಜಿ.ಯಂಕಂಚಿ, ರಾಜು ಫಿರಂಗಿ, ಸುರೇಂದ್ರ ಭಾವಿಮನಿ, ಬಸವರಾಜ ಬ್ಯಾಳಿ, ರವಿ ರಾಠೋಡ ಸೇರಿದಂತೆ ಮುಂತಾದವರು ಇದ್ದರು.

loading...