ಕೇಂದ್ರ ಸಚಿವ ಅನಂತಕುಮಾರ ರೋಡ್ ಶೋ

0
15
loading...

ಬಾಗಲಕೋಟೆ: ಬಿಜೆಪಿ,ಜೆಡಿಎಸ್ ಒಳ ಒಪ್ಪಂದ ಎನ್ನುವ ಸಿಎಂ ಸಿದ್ದರಾಮಯ್ಯನವರ ಆರೋಪ ಸುಳ್ಳು. ಒಳ ಒಪ್ಪಂದ ಹೊರ ಒಪ್ಪಂದ ಎಲ್ಲವೂ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಿಟ್ಟಿದ್ದು.ಜೆಡಿಎಸ್ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷ ಒಳ ಒಪ್ಪಂದ ಇಲ್ಲ ಅಂದ್ರೆ ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಹೊರ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇಂದ್ರ ಸಚಿವ ಅನಂತಕುಮಾರ ಸವಾಲ್ ಹಾಕಿದ್ದಾರೆ.
ಅವರು ಬಾಗಲಕೋಟೆ ನಗರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಕೇಂದ್ರ ಸಚಿವ ಅನಂತಕುಮಾರ ಮಾಧ್ಯಮದೊಂದಿಗೆ ಮಾತನಾಡುತ್ತಾ,ಅಮಿತ್ ಶಾ,ಕುಮಾರಸ್ವಾಮಿ ವಿಮಾನದಲ್ಲಿ ಪ್ರಯಾಣ ಮಾಡಿರುವ ದಾಖಲೆಯನ್ನು 24 ಗಂಟೆಯಲ್ಲಿ ಎಲ್ಲ ಮಾಧ್ಯಮಗಳ ಎದುರು ಬಿಡುಗಡೆ ಮಾಡಲಿ,ಇಲ್ಲವೇ ಜನರಿಗೆ ಸುಳ್ಳು ಹೇಳಿದ್ದೇನೆ ಎಂದು ಕ್ಷೆಮೆ ಕೋರಿ ಬಾದಾಮಿ,ಚಾಮುಂಡೇಶ್ವರಿ ಕ್ಷೇತ್ರದಿಂದ ನಿವೃತ್ತಿ ಹೊಂದಲಿ ಎಂದು ಸವಾಲ್ ಹಾಕಿದರು.

ಈ ಸಂಧರ್ಭದಲ್ಲಿ ಅಭ್ಯರ್ಥಿಗಳಾದ ವೀರಣ್ಣ ಚರಂತಿಮಠ,ಮುಖಂಡರಾದ ಪಿ ಎಚ್ ಪೂಜಾರ,ಪ್ರಕಾಶ ತಪಶೆಟ್ಟಿ,ಅಶೋಕ ಲಿಂಬಾವಳಿ ಸೇರಿದಂತೆ ಇತರ ಮುಖಂಡರು ಉಪಸ್ಥಿತಿರಿದ್ದರು.

loading...