ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ: ಶಾಸಕಿ ರೂಪಾಲಿ

0
16
loading...

ಕಾರವಾರ: ಸುತ್ತಲೂ ಕಾಳಿ, ಗಂಗಾವಳಿಯಂಥ ನದಿಗಳಿದ್ದರೂ ಸಹ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿದೆ. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗಾಗಿ ಮಹಿಳೆಯರು ಕೀಲೋ ಮೀಟರ್ ದೂರ ಸಾಗಿ ನೀರು ತರಬೇಕಾದಂಥ ದುಸ್ಥಿತಿ ಇದೆ. ಹೀಗಾಗಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಈ ಬಗ್ಗೆ ಯೋಜನೆ ರೂಪಿಸುತ್ತೇನೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಇಂದು ರವಿವಾರ ಇಲ್ಲಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಸಕಿ, ಕ್ಷೇತ್ರದಲ್ಲಿ ಉದ್ಯೋಗವಕಾಶದ ಕೊರತೆ ಇದೆ. ಹೀಗಾಗಿ ಯುವಕರು ಉದ್ಯೋಗ ಅರಸಿ ಪಕ್ಕದ ಗೋವಾಕ್ಕೆ ತೆರಳುತ್ತಿದ್ದಾರೆ. ಕ್ಷೇತ್ರದಲ್ಲಿ ಪರಿಸರ ಪೂರಕ ಉದ್ಯಮ ಸ್ಥಾಪನೆಗೆ ಒತ್ತು ನೀಡಲಾಗುವುದು.
ಈ ಕುರಿತಂತೆ ಕೇಂದ್ರದ ಸಚಿವರೊಂದಿಗೆ ಸಹ ಮಾತುಕತೆ ನಡೆಸಿ ಉದ್ಯಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕೈಗಾ ಮತ್ತು ಸೀಬರ್ಡ್ ಎರಡು ಬೃಹತ್ ಯೋಜನೆಗಳು ಇಲ್ಲಿದೆ. ಇಲ್ಲಿನ ಯುವಕರಿಗೆ ಈ ಎರಡು ಯೋಜನೆಗಳಿಗೆ ಬೇಕಾದಂಥ ಕೌಶಲ್ಯದ ತರಬೇತಿಯನ್ನು ನೀಡಿ ನಂತರ ಅವರಿಗೆ ಈ ಯೋಜನೆಗಳಲ್ಲಿ ಉದ್ಯೋಗವಕಾಶ ನೀಡಲಾಗುವುದು. ಕೇಂದ್ರದ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆಯವರ ಗಮನಕ್ಕೆ ತಂದು ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಿಲಾಗುವುದು ಎಂದು ಶಾಸಕಿ ಹೇಳಿದರು. ಕೈಗಾ ಮತ್ತು ಸೀಬರ್ಡ್ ಯೋಜನೆಗಳಿಗೆ ಪೂರಕವಾಗಿ ಬೇಕಾದಂಥ ಉದ್ಯಮಿಗಳ ಸ್ಥಾಪನೆಗೆ ಸಹ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಶಾಸಕಿ ಹೇಳಿದರು. ಕೋಣೆನಾಲಾ ಅಭಿವೃದ್ದಿ: ನಗರದ ಎಲ್ಲಾ ಕೊಳಚೆಗಳನ್ನು ತುಂಬಿಕೊಂಡು ಹರಿಯುತ್ತಾ ಲಂಡನ್ ಬ್ರಿಡ್ಜ್ ಬಳಿ ನಿಂತಿರುವ ಕೋಣೆನಾಲಾ ನಗರದ ಸೌಂದÀರ್ಯಕ್ಕೊಂದು ಕಪ್ಪುಚುಕ್ಕೆ ಇದ್ದಂಥೆ. ಈ ಕೋಣೆ ನಾಲಾ ಅನೇಕ ರೋಗ ರುಜಿನಗಳ ಕೇಂದ್ರವಾಗಿದೆ. ಕೋಣೆನಾಲಾ ಅಭಿವೃದ್ಧಿಗೆ ಈ ಹಿಂದೆ ಕೋಟ್ಯಾಂತರ ರೂ. ವ್ಯಯಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಕೋಣೆನಾಲಾ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಸಚಿವರೊಂದಿಗೆ ಮಾತುಕತೆ ನಡೆಸಿ ಕೋಣೆನಾಲಾ ಸ್ವಚ್ಚತೆಗೆ ಕ್ರಮಕೈಗೊಂಡು ಶಾಶ್ವತ ಅಭಿವೃದ್ಧಿಗೆ ಯೋಜನೆ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕಿ ರೂಪಾಲಿ ನಾಯಿಕ ಸೋಮವಾರ ಬಂದ್: ಜೆಡಿಎಸ್‍ಗೆ ಬಹುಮತವಿಲ್ಲದಿದ್ದರೂ ಸಹ ಕೇವಲ 38 ಸ್ಥಾನಗಳಿಸಿ ಕಾಂಗ್ರೇಸ್‍ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಜೆಡಿಎಸ್ ಅವಕಾಶವಾದಿಗಳ ಕೂಟ ಎಂದು ಶಾಸಕಿ ರೂಪಾಲಿ ನಾಯ್ಕ ಟೀಕಿಸಿದರು. ತಾವು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಕುಮಾರ ಸ್ವಾಮಿ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ವಾರ ಕಳೆದರೂ ತಮ್ಮ ಹೇಳಿಕೆಯ ಬಗ್ಗೆ ಯೂ ಟರ್ನ ತೆಗೆದುಕೊಂಡು ತಾವು ವಚನಭ್ರಷ್ಟವೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಇವರ ವರ್ತನೆ ಖಂಡಿಸಿ ಸೋಮವಾರ ಸ್ವಯಂ ಪ್ರೇರಿತ ಬಂದ್ ಆಚರಿಸಲಾಗುವುದು ಎಂದು ಶಾಸಕಿ ಹೇಳಿದರು. ಕುಮಾರಸ್ವಾಮಿಯವರು ವಚನಭ್ರಷ್ಟತೆಯನ್ನು ಖಂಡಿಸಿ ರಾಜ್ಯ ಬಿಜೆಪಿ ನಾಯಕತ್ವವು ಸಹ ಸೋಮವಾರ ರಾಜ್ಯ ವ್ಯಾಪಿ ಸ್ವಯಂ ಪ್ರೇರಿತ ಬಂದ್‍ಗೆ ಕರೆನೀಡಿದೆ. ಅದರಂತೆ ಕಾರವಾರದಲ್ಲೂ ಸಹ ಸ್ವಯಂ ಪ್ರೇರಿತ ಬಂದ್‍ಗೆ ಕರೆ ನೀಡಲಾಗಿದೆ. ಈ ಬಗ್ಗೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸಹ ಮಾತುಕತೆ ನಡೆಸಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ, ಜಿಲ್ಲಾ ಉಪಾಧ್ಯಕ್ಷ ಗಣಪತಿ ಉಳ್ವೇಕರ್, ತಾಲೂಕಾ ಅಧ್ಯಕ್ಷ ಮನೋಜ ಭಟ್ ಇನ್ನಿತರರು ಇದ್ದರು.

loading...