ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ಮೊದಲ ಗುರಿ: ಚಂದ್ರಶೇಖರ

0
17
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ರೈತರ ಉನ್ನತಿಯನ್ನು ಬಯಸಿ, ರೈತರ ಕಲ್ಯಾಣದ ಜೊತೆಗೆ ಬಡವರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಸಂಕ್ಲವನ್ನು ತೊಟ್ಟು ಈ ಬಾರಿ ಸಕ್ರೀಯ ಚುನಾವಣಾ ಅಖಾಡಕ್ಕಿಳಿದಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ನನ್ನ ಮೊದಲ ಗುರಿಯಾಗಿದೆ ಎಂದು ಹಳಿಯಾಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಟಿ.ಆರ್. ಚಂದ್ರಶೇಖರ ತಿಳಿಸಿದರು.
ಅವರು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗೊಡೆಗೊಳಿಸಿದ ನಂತರ ಮಾದ್ಯಮದವರ ಜೊತೆ ಮಾತನಾಡುತ್ತಿದ್ದ ಅವರು ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಯಾವೆಲ್ಲ ಭರವಸೆಗಳಿವೆಯೋ ಅವೆಲ್ಲವನ್ನೂ ನಾನೂ ಶಾಸಕನಾಗಿ ಆಯ್ಕೆಯಾದರೆ ಅತ್ಯಂತ ಪ್ರಾಮಾಣಿಕತೆಯಿಂದ ಈಡೇರಿಸುತ್ತೇನೆ. ನನ್ನ ಚುನಾವಣಾ ಚಿಹ್ನೆ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ. ಕ್ಷೇತ್ರದ ಯಾವ ರೈತರಿಗೂ ವ್ಯವಸಾಯದಲ್ಲಿ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ನೋಡಿಕೊಳ್ಳುತ್ತೇನೆ. ಅವರ ಉಳುಮೆಗಾಗಿ ಅವಶ್ಯವಿರುವ ಟ್ರ್ಯಾಕ್ಟರ್ ಸೌಕರ್ಯವನ್ನು ಕ್ಷೇತ್ರದಲ್ಲಿ ಒದಗಿಸುತ್ತೇನೆ. ಜೊತೆಗೆ ರೈತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಜೊತೆಗೆ ವಯಕ್ತಿಕವಾಗಿ ನನ್ನಿಂದೇನಾಗಬೇಕು ಅದೆಲ್ಲವನ್ನೂ ಪೂರೈಸುತ್ತೇನೆ.

ರೈತರ ಸಾಲಮನ್ನಾ, ಕ್ಷೇತ್ರದ ನೀರಾವರಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ದಿ, ಬುಡಕಟ್ಟು ಕುಣಬಿ, ಗೌಳಿಗಳನ್ನು ಪ.ಪಂಗಡಕ್ಕೆ ಸೇರಿಸುವುದು, ಮರಾಠಾ ಸಮುದಾಯವನ್ನು 3 ಬಿ ದಿಂದ 2 ಎ ಗೆ ಸೇರಿಸುವುದು. ಕ್ಷೇತ್ರದ ಇಲಾಖೆಯಲ್ಲಿ ಬೃಷ್ಠಾಚಾರ ಇಲ್ಲದಂತೆ ನೋಡಿಕೊಳ್ಳುವುದು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವುದು, ಬಾಂದಾರ ಪುನಶ್ಚೇತನಗೊಳಿಸುವುದು, ಉದ್ಯೋಗ ಸೃಷ್ಠಿಯ ತರುವುದು, ಸೇರಿದಂತೆ ಪ್ರಣಾಳಿಕೆಯಲ್ಲಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದೆಂದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಗೋವಿಂದ ಮೇಲಗಿರಿ, ಮಾಜಿ ಸದಸ್ಯ ಉದಯ ನಾಯರ, ಮುಖಂಡರಾದ ಎಸ್.ಜಿ. ಬಿರಾದರ, ಪ್ರಭಾಕರ ಶೆಟ್ಟಿ, ಶಿವದಾಸನ್ ನಾಯರ್, ಬಸಪ್ಪ ಶಾಬದಿ, ಸುಭಾಶ ಬೋವಿವಡ್ಡರ್, ರಾಮಗೋಪಾಲ ಕಾಕರಾ ಮುಂತಾದವರಿದ್ದರು.

loading...