ಗದಗ ಮತಕ್ಷೇತ್ರದ ದೂರು ರಾಜ್ಯ ಚುನಾವಣಾಧಿಕಾರಿಗಳಿಗೆ ರವಾನೆ

0
18
loading...

ಗದಗ: ಗದಗ ವಿಧಾನಸಭಾ ಮತಕ್ಷೇತ್ರದ ಚುನಾವಣೆಯ ಬಗ್ಗೆ ದೂರು ಸಲ್ಲಿಸಿದ್ದ ಪರಾಜಿತ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ಅವರ ದೂರನ್ನು ಗದಗ ಜಿಲ್ಲಾಧಿಕಾರಿಗಳು ರಾಜ್ಯ ಚುನಾವಣಾಧಿಕಾರಿಗಳಿಗೆ ಅವಗಾಹನೆಗೆ ಹಾಗೂ ಕಳುಹಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಸಲ್ಲಿಸಿದ್ದಾರೆ.

ಗದಗ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ನಡೆಯಿತೆನ್ನಲಾದ ಖೊಟ್ಟಿ ಮತದಾನ, ಸತ್ತವರ ಹೆಸರಿನಲ್ಲಿ ಮತಚಲಾವಣೆ ಹಾಗೂ ಎರಡೆರಡು ಕಡೆ ಮತಪಟ್ಟಿಯಲ್ಲಿ ಹೆಸರುಳ್ಳವರು ಎರಡೆರಡು ಸಲ ಮತದಾನ ಮಾಡಿದ್ದರಿಂದಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಗೆಲುವು ಆಗಿದ್ದು ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅಗತ್ಯ ಸಾಕ್ಷಿ ಪುರಾವೆಗಳೊಂದಿಗೆ, ದಾಖಲಾತಿಗಳೊಂದಿಗೆ ಮೆಣಸಿನಕಾಯಿ ಅವರು ಸಲ್ಲಿಸಿದ್ದ ದೂರನ್ನು ಪರಾಮರ್ಶಿಸುವ ಅಂತಿಮ ತೀರ್ಮಾನ ಕೈಗೊಳ್ಳುವದು ಇದೀಗ ರಾಜ್ಯ ಚುನಾವಣಾಧಿಕಾರಿಗಳ ಮೇಲೆ ಅವಲಂಭಿಸಿದೆ. ರಾಜ್ಯ ಚುನಾವಣಾಧಿಕಾರಿಗಳು ಈ ಪ್ರಕರಣವನ್ನು ಹೇಗೆ ಸರಿಪಡಿಸುವರು ಏನು ಕ್ರಮ ಕೈಗೊಳ್ಳುವರು ಎಂಬುದು ಗದಗ ಜಿಲ್ಲೆಯ ಹಾಗೂ ರಾಜ್ಯದ ರಾಜಕೀಯ ವಲಯದ ಅತ್ಯಂತ ಕುತೂಹಲ ಕೆರಳಿಸಿರುವ ಸಂಗತಿಯಾಗಿದೆ.
ಬೋಗಸ್ ಓಟುಗಳಿಂದ ನನ್ನ ಸೋಲು : ಕೇವಲ 1800 ಮತಗಳ ಅಂತರದಲ್ಲಿ ನನ್ನ ಸೋಲಾಗಲು ಈ ಬೋಗಸ್ ಮತಗಳೇ ಪ್ರಮುಖ ಕಾರಣವಾಗಿವೆ. ಸತ್ತವರ ಹೆಸರಿನಲ್ಲಿ ಮತದಾನವಾಗಿವೆ. ಕಾಂಗ್ರೆಸ್ ಕಾಯಕರ್ತರು ಮತದಾರರಿಗೆ ಜೀವದ ಜೀವದ ಬೆದರಿಕೆ ಹಾಕಿ ಒತ್ತಾಯಪೂರ್ವಕ ಮತ ಚಲಾಯಿಸಿಕೊಂಡಿದ್ದಾರೆ. ಅತಿ ಸೂಕ್ಷ್ಮ ಮತಗಟ್ಟೆಯಾದ ಹುಲಕೋಟಿಯಲ್ಲಿ ಸಿಸಿ ಟಿವಿ ಅಳಡಿಕೆಗೆ ಒತ್ತಾಯಿಸಿದ್ದರೂ, ಅಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಪಲಗೊಂಡಿದೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಅನೀಲ ಮೆಣಸಿನಕಾಯಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗದಗ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಅವರು ಬೋಗಸ್ ಮತಗಳಿಂದ ಆಯ್ಕೆಯಾಗಿದ್ದಾರೆ, ಚುನಾವಣೆಯಲ್ಲಿ ನೈಜವಾಗಿ ನಾನು ಗೆಲುವು ಸಾಧಿಸಿದ್ದೇನೆ. ನನ್ನನ್ನು ಚುನಾಯಿತ ಪ್ರತಿನಿಧಿಯೆಂದು ಘೋಷಣೆ ಮಾಡಿ ಎಂಬ ಮನವಿಯನ್ನು ದಾಖಲಾತಿ ಸಮೇತ ಗದಗ ಬಿಜೆಪಿ ಘಟಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ನೀಡಿದ ಹಿನ್ನಲೆಯಲ್ಲಿ ಅವರು ಪರಿಶೀಲನೆ ನಡೆಸಲು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.
ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಸುವ ಪ್ರಜಾತಾಂತ್ರಿಕ ಮಾದರಿಯಲ್ಲಿ ಇಂತಹ ಪ್ರಜಾ ವಿರೋದಿ ಕಾರ್ಯ ನಡೆದಿರುವದು ನಾಚಿಗೇಡಿತನ ಸಂಗತಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರಿದ ಶಾಸಕ ಎಚ್.ಕೆ.ಪಾಟೀಲ್ ಅವರ ಸದಸ್ಯತ್ವವನ್ನು ರದ್ದುಗೊಳಿಸಿರಿ. ಚುನಾಯಿತ ಪ್ರತಿನಿಧಿ ಎಂದು ನನ್ನನ್ನು ಘೋಷಿಸಿರಿ. ಇಲ್ಲದಿದ್ದರೇ ಗದಗ ಮತಕ್ಷೇತ್ರದಲ್ಲಿ ಮತ್ತೊಮ್ಮೆ ಪಾರದರ್ಶಕ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಲಿ ಎಂದು ಅನೀಲ ಮೆಣಸಿನಕಾಯಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

loading...