ಗಲ್ಲಿ-ಗಲ್ಲಿಗಳಲ್ಲಿ ಸುನೀಲ ಹೆಗಡೆ ಪಾದಯಾತ್ರೆ, ಮತಯಾಚನೆ

0
13
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಭಾಜಪ ಅಭ್ಯರ್ಥಿ ಸುನೀಲ ಹೆಗಡೆ ರವರ ಪ್ರಚಾರಾರ್ಥ ಪಾದಯಾತ್ರೆಯು ಗುರುವಾರ ಹಳಿಯಾಳ ಪಟ್ಟಣದಲ್ಲಿ ಜರುಗಿತು.
ಸುನೀಲ ಹೆಗಡೆ, ಪತ್ನಿ ಸುವರ್ಣಾ ಹಾಗೂ ಪಕ್ಷದ ಮುಖಂಡರು ಮುಂದಾಳತ್ವ ವಹಿಸಿದ್ದ ಈ ಪಾದಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಟ್ಟಣದ ಗಲ್ಲಿ-ಗಲ್ಲಿಗೆ ಸಂಚರಿಸಿ ಮತಯಾಚನೆ ಮಾಡಲಾಯಿತು. ನಂತರ ಅರ್ಬನ್‌ ಬ್ಯಾಂಕ್‌ ವೃತ್ತದಲ್ಲಿ ಬಹಿರಂಗ ಸಭೆ ಜರುಗಿತು.
ಸಾರ್ವಜನಿಕ ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸುನೀಲ ಹೆಗಡೆ ತಮ್ಮ ಭಾಷಣದಲ್ಲಿ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ. ದೇಶಪಾಂಡೆಯವರ ವಿರುದ್ಧ ಕಟುಶಬ್ದಗಳಲ್ಲಿ ಮಾತನಾಡಿದರು.
ಕ್ಷೇತ್ರದ ಜನತೆಯ ಬಗ್ಗೆ ಕಾಳಜಿಯೇ ಹೊಂದಿರದ ದೇಶಪಾಂಡೆ ಕಾಳಿನದಿ ನೀರಾವರಿ ಯೋಜನೆಯ ಬಗ್ಗೆ ಪರಿಕಲ್ಪನೆಯೇ ಹೊಂದಿಲ್ಲ. ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ಗಿಮಿಕ್‌ ಮಾಡುತ್ತಾ ಜನರನ್ನು ಮರಳುಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ವಿವರಿಸಿ ಹಾಗೂ ಕಾಂಗ್ರೆಸ್‌ ಸರ್ಕಾರ ಮತ್ತು ಆರ್‌.ವಿ. ದೇಶಪಾಂಡೆಯವರ ವಿಫಲತೆಯ ಬಗ್ಗೆ ಜನರಿಗೆ ತಿಳಿ ಹೇಳಿ ಬಿಜೆಪಿ ಪರವಾಗಿ ಮತಯಾಚಿಸುವಂತೆ ಸುನೀಲ ಹೆಗಡೆಯವರು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು.
ವೇದಿಕೆಯ ಮೇಲೆ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಕಾರ್ಯದರ್ಶಿ ವಿ.ಎಂ. ಪಾಟೀಲ, ವಿಲಾಸ ಯಡವಿ, ಹಿರಿಯ ಮುಖಂಡರಾದ ಅಪ್ಪಾಸಾಹೇಬ ದೇಸಾಯಿ, ಮಂಗೇಶ ದೇಶಪಾಂಡೆ ಮತ್ತು ಎಸ್‌.ಎ. ಶೆಟವಣ್ಣವರ, ವಾಸುದೇವ ಪೂಜಾರಿ, ಸಂತೋಷ ಘಟಕಾಂಬ್ಳೆ, ಅಪ್ಪಾರಾವ್‌ ಪೂಜಾರಿ, ಸುವರ್ಣಾ ಸುನೀಲ ಹೆಗಡೆ, ಜಯಲಕ್ಷ್ಮೀ ಚವ್ಹಾಣ, ರೂಪಾ ಅನಿಲ ಗಿರಿ, ಮಧುರಾ ಬಡಿಗೇರ ಮೊದಲಾದವರಿದ್ದರು.

loading...