ಗಿರಡ್ಡಿ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಣೆಗೆ ಸಲಹೆ

0
12
loading...

ಗದಗ: ವಿಮರ್ಶೆ, ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಠಸೇವೆ ಸಲ್ಲಿಸಿದ ಡಾ.ಗಿರಡ್ಡಿ ಗೋವಿಂದರಾಜ ಅವರ ಸಮಗ್ರ ಸಾಹಿತ್ಯ ಸಂಪುಟ ತರಲಾಗುವದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿರುವ ಗಿರಡ್ಡಿ ಗೋವಿಂದರಾಜ ಅವರ ನಿವಾಸಕ್ಕೆ ರವಿವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಅವರು ಮಾತನಾಡುತ್ತಿದ್ದರು.
ಸಾಹಿತ್ಯ, ಕೃಷಿಯಲ್ಲಿ ತಮ್ಮ ಇಡೀಯಾದ ಬದುಕನ್ನು ತೊಡಗಿಸಿಕೊಂಡಿದ್ದ ಗಿರಡ್ಡಿ ಗೋವಿಂದರಾಜ ಅವರು ಗತ್ತಿನ ವ್ಯಕ್ತಿತ್ವ ಹೊಂದಿದ್ದರು. ಸಾಹಿತÀ ರಚನೆಯ ಜೊತೆಗೆ ಸಾಹಿತ್ಯಾಸಕ್ತರ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಧಾರವಾಡದಲ್ಲಿ ‘ಸಾಹಿತ್ಯ ಸಂಭ್ರಮ’ ಸಂಘಟಿಸುವ ಮೂಲಕ ಸಾಹಿತ್ಯ ಲೋಕದ ದಿಗ್ಗಜರನ್ನು ಒಂದೇ ಸ್ಥಳದಲ್ಲಿ ಮೂರ್ನಾಲ್ಕು ದಿನಗಳ ಕಾಲ ಸೇರುವಂತೆ ಮಾಡಿ ಯುವ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಪ್ರೇರಣೆ £ೀಡಿದ ಶ್ರೇಯಸ್ಸು ಗಿರಡ್ಡಿ ಗೋವಿಂದರಾಜ ಅವರಿಗೆ ಸಲ್ಲುತ್ತದೆ ಎಂದರು.

ಇಂದಿನ ಮತ್ತು ಮುಂದಿನ ಪೀಳಿಗೆಗೆ ಅವರ ಸಾಹಿತ್ಯ ಪರಿಚಯಿಸುವ ಉದ್ದೇಶದಿಂದ ಗಿರಡ್ಡಿ ಗೋವಿಂದರಾಜ ಅವರ ಸಮಗ್ರ ಸಾಹಿತ್ಯ ಸಂಪುಟ ತರುವ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಚಿಂತನೆ ನಡೆಸಿ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳಿಗೆ ಹೇಳಿದರು. ಕೆ.ಬಿ.ತಳಗೇರಿ, ಅರ್ಜುನ ಗೊಳಸಂಗಿ, ಜೆ.ಕೆ.ಜಮಾದಾರ, ಡಿ.ಆರ್.ಪಾಟೀಲ, ಶಾಸಕ ಜಿ.ಎಸ್.ಪಾಟೀಲ, ಗುರಣ್ಣ ಬಳಗಾನೂರ, ರೂಪಾ ಅಂಗಡಿ, ದಶರಥ ಗಾಣಿಗೇರ, ಪಿ.ಬಿ.ಅಳಗವಾಡಿ, ಬಿ.ಎಂ.ನವಲಗುಂದ, ತಯ್ಯಬ್ ಕುನ್ನಿಭಾವಿ ಉಪಸ್ಥಿತರಿದ್ದರು. ಗಿರಡ್ಡಿ ಗೋವಿಂದರಾಜರ ಪುತ್ರ ಬಾಬು ಗಿರಡ್ಡಿ ಅವರು ತಮ್ಮ ತಂದೆಯ ವ್ಯಕ್ತಿತ್ವದ ಕೆಲ ಘಟನೆಗಳನ್ನು ಸಚಿವರೊಂದಿಗೆ ಮೆಲುಕು ಹಾಕಿದರು.

loading...