ಗುರು, ಗುರಿ ಇಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲಾ: ಶಾಸಕ ಹೆಬ್ಬಾರ

0
43
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಗುರು ಮತ್ತು ಗುರಿ ಇಲ್ಲದೇ ಯಾವದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲಾ. ಇಂದು ಶಿಕ್ಷಣ ಕೇವಲ ಶ್ರೀಮಂತರ ಸ್ವತ್ತಾಗಿರದೇ ಪ್ರತಿಯೊಬ್ಬರ ಮೂಲಭೂತ ಹಕ್ಕು ಆಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಉಚಿತ ಪಠ್ಯ, ಪುಸ್ತಕ ಸಮವಸ್ತ್ರ, ವಿತರಿಸಿ ಕ್ಷೀರ ಭಾಗ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಎರಡನೇ ಬಾರಿ ಶಾಸಕನಾಗಿ ಆಯ್ಕಯಾದ ನಂತರ ಮೊದಲ ಇಂತಹ ವಿಧಾಯಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸವನ್ನು ಇಮ್ಮಡಿಸಿದೆ. ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸರಕಾರ ಉಚಿತಶಿಕ್ಷಣ ಜೊತೆಗೆ ಪಠ್ಯ ಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ ಹೀಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಶಿಕ್ಷಣದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ ಎಂದರು. ತಾಪಂ ಅದ್ಯಕ್ಷೆ ಭವ್ಯಾ ಶೆಟ್ಟಿ ಮಾತನಾಡಿ ಮಣ್ಣಿನ ಮುದ್ದೆಯಂತಿರುವ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ರೂಪವನ್ನು ಶಿಕ್ಷಕರು ಕೊಡುತ್ತಾರೆ. ಶಿಕ್ಷಕ ವೃತ್ತಿ ಉದ್ಯೋಗವಾಗಿರದೇ ಸೇವೆಯಾಗಿದೆಎಂದರು. ವೇದಿಕೆಯಲ್ಲಿ ಪ.ಪಂ ಅಧ್ಯಕ್ಷ ಶೀರೀಷ ಪ್ರಭು, ಖಾದಿ ಗ್ರಾಮದ್ಯೋಗ ಮಂಡಳಿ ನಿರ್ದೇಶಕ ವಿಜಯ ಮಿರಾಶಿ, ಪ.ಪಂ ಸದಸ್ಯ ಎಂ.ಡಿ ಮುಲ್ಲಾ ,ಮುಖ್ಯೋಪಾದ್ಯಾಪಕಿ ಅನಸೂಯಾ, ಉಪಸ್ಥಿತರಿದ್ದರು.ಮೇಘನಾ ಸಂಗಡಿಗರು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಸ್ವಾಗತಿಸಿದರು. ಶಿಕ್ಷಕ ದೀಲೀಪ ದೊಡ್ಡಮನಿ ನಿರ್ವಹಿಸಿದರು. ಸಮನ್ವಯಾಧಿಕಾರಿ ಶ್ರೀರಾಮ ವಂದಿಸಿದರು

loading...