ಗೆಲುವಿಗೆ ಯೋಜನೆಗಳು ಶ್ರೀರಕ್ಷೆ : ಶರಣಪ್ಪ

0
3
loading...

ವಿಜಯಪುರ: ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಬಿ.ಪಾಟೀಲರು ಮಾಡಿರುವ ನೀರಾವರಿ ಹಾಗೂ ಸಾರ್ವಜನಿಕ ಮೂಲಭೂತ ಸೌಕರ್ಯಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಅವರ ಗೆಲುವಿಗೆ ಯೋಜನೆಗಳು ಶ್ರೀರಕ್ಷೆ ಎಂದು ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರ ಗಂಗಾಮತ ಸಂಘ ನಿಡೋಣಿಯಲ್ಲಿ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರವು ನಿಜಶರಣ ಅಂಬೀಗರ ಚೌಡಯ್ಯ ಸಮಾಜಕ್ಕೆ ಕರ್ನಾಟಕ ರಾಜ್ಯ ನಿಜಶರಣ ಅಂಬೀಗರ ಚೌಡಯ್ಯ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕದ ಕೂಲಿ ಕಬ್ಬಲಿಗ ಸಮುದಾಯದ ಏಕೈಕ ಪೀಠ ಅಂಬೀಗರ ಚೌಡಯ್ಯ ಗುರುಪೀಠಕ್ಕೆ ಸುಮಾರು 36 ಕೋಟಿ ರೂಪಾಯಿ ಜಲಸಂಪನ್ಮೂಲ ಇಲಾಖೆಯಿಂದ ಅಭಿವೃದ್ಧಿ ಮಾಡಲು ಎಂ.ಬಿ.ಪಾಟೀಲರ ಕೊಡುಗೆ ಅಪಾರವಾಗಿದೆ ಎಂದರು.
ಕಾಂಗ್ರೆಸ್‌ ಪಕ್ಷವು ನಮ್ಮ ಸಮಾಜಕ್ಕೆ ಕೊಡುಗೆ ಬಹಳಷ್ಟು ಇದೆ. ದಿ.ಬಿ.ಇ.ಚೌದ್ರಿ, ಆರ್‌.ಬಿ.ಚೌದ್ರಿ ಹಾಗೂ ನನಗೆ ಶಾಸಕನಾಗಿ ಮಾಡಲು ಎಂ.ಬಿ.ಪಾಟೀಲರ ಕೊಡುಗೆ ಇದೆ. ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯ ಯಾವುದೇ ಭಿನ್ನಭಿಪ್ರಾಯಗಳು ಇಲ್ಲ. ಕೆಲವು ವ್ಯಕ್ತಿಗಳು ರಾಜಕೀಯ ಇತಾಶಕ್ತಿಗಾಗಿ ಎಂ.ಬಿ.ಪಾಟೀಲರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಅದು ಸುಳ್ಳು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಎಂ.ಬಿ.ಪಾಟೀಲರಿಗೆ ಮತದಾನ ಮಾಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಲು ವಿನಂತಿಸಿದರು.
ಸಚಿವ ಎಂ.ಬಿ.ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರವಿಗೌಡ ಪಾಟೀಲ, ಮಾಜಿ ಕೆ.ಎಂ.ಎಫ್‌ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ, ಮಾಜಿ ಜಿ.ಪಂ.ಅಧ್ಯಕ್ಷ ಉಮೇಶ ಕೋಳಕೂರ, ಪ್ರಕಾಶ ಸೊನ್ನದ ಕೆ.ವೈ.ಗಡ್ಡಿ, ವಿಜಯಕುಮಾರ ವಾಲಿಕಾರ, ಅಪ್ಪು ವಾಲಿಕಾರ, ಶ್ರೀಶೈಲ ತಳವಾರ, ಶಶಿಕಾಂತ ಹಳಂಗಳಿ, ಸಾಹೇಬಗೌಡ ಬಿರಾದಾರ, ಸದಾಶಿವ ಕೋಲಕಾರ, ಅಡಿವೆಪ್ಪ ಕೋಲಕಾರ, ಶ್ರೀಶೈಲ ಜೈನಾಪುರ, ಅರ್ಜುಣ ಕಂಬಾಗಿ, ಕಲ್ಲಪ್ಪ ತಳವಾರ, ರವಿ ಪೂಜಾರಿ ಮತ್ತಿತರರು ಪ್ರಚಾರದಲ್ಲಿ ಭಾಗವಹಿಸಿದ್ದರು.

loading...