ಗೆಲ್ಲಸಿದರೆ ಸಂಪೂರ್ಣ ನಿರಾವರಿ ಕನಸು ನನಸು: ಪ್ರಕಾಶ

0
3
loading...

ಮುದ್ದೇಬಿಹಾಳ : ದಲಿತರಿಗಾಗಿ ಇರುವ ವಿಶೇಷ ಬಡ್ತಿ ಮಿಸಾಲಾತಿ ಸೇರಿದಂತೆ ಆಶ್ಪೃಶ್ಯತೆ ಕಾಯ್ದೆ ಸಂವಿದಾಬದ್ದ ಹಕ್ಕು ಅದನ್ನು ಸುಪ್ರೀಂ ಕೋರ್ಟ ಮೂಲಕ ಆದೇಶಿಸಿ ದಲಿತರಿಗಾಗಿ ಇರುವ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಬಿಜೆಪಿ ಮಾಡುತ್ತಿದೆ ಈನಿಟ್ಟಿನಲ್ಲಿ ಈ ಗಾಗಲೇ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರಚಿಸಿದ ಪವಿತ್ರ ಸಂವಿದಾನವನ್ನೆ ತಿದ್ದು ಪಡೆ ಮಾಡುವ ಮೂಲಕ ಅಪಮಾನ ಮಾಡುತ್ತಿದ್ದಾರೆ ಸ್ವಾಭಿಮಾನಿ ದಲಿತರು ಯಾರೂ ಬಿಜೆಪಿಗೆ ಬೆಂಬಲಿಸಬಾರದು ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಹೇಳಿದರು.
ಪಟ್ಟಣದ ಇಲ್ಲಿ ಮನಿಯಾರ ಕಾಂಪ್ಲೇಸನಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷ ಒಂದು ಕೋಮುವಾದಿ ಪಕ್ಷ ಇಂತಹ ಪಕ್ಷವನ್ನು ಬುಡ ಸಮೇತ ಕಿತ್ತಿಹಾಕಬೇಕು ಇಲ್ಲದಿದ್ದರೆ ಈ ಹಿಂದೆ ದಲಿತರ ಮೇಲೆ ಹೇಗೆಲ್ಲ ದೌರ್ಜನ್ಯಗಳಾಗಿ ಅಶ್ಪೃಶ್ಯತೆಯಿಂದ ನರಳಾಡುವಂತಹ ಪರಿಸ್ಥತಿ ನಿರ್ಮಾಣವಾಗುವ ಸಾಧ್ಯತೆ ಇದೆ ಕಾರಣ ಯಾವುದೇ ಕಾರಣಕ್ಕೂ ದಲಿತರು ಒಬ್ಬರು ಕೂಡಾ ಬಿಜೆಪಿ ಬೆಂಬಲಿಸಬಾರದು.
ಶಾಸಕ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿ ಸಿ.ಎಸ್‌ ನಾಡಗೌಡರು ಸರಳ ಸಜ್ಜನೆ ಸ್ವಭಾವದವರು ಯಾವೂದೇ ಜಾತಿ ಬೇಧ ಮಾಡದೇ ಎಲ್ಲರನ್ನು ಸಮತೋಲನದಿಂದ ತೂಗಿ ಭಾವಕ್ಯತೆಯನ್ನು ಎತ್ತಿ ಹಿಡಿದಂತವರು ಕಳೇದ 25 ವರ್ಷಗಳ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿಗಾಗಿ ಶ್ರಮಿಸಿದವರು. ಆದರೇ ಈ ಭಾಗದಲ್ಲಿ ಬಹುದೊಡ್ಡ ಸಮಸ್ಯೆ ಎಂದರೆ ಸಸದಾ ಬರಗಾಲದಿಂದ ಬಳಲುವು ರೈತರಿಗೆ ಸಂಪೂರ್ಣ ನೀರಾವರಿಯಾಗಬೇಕು ಈಗಾಗಲೇ ನಿರಾವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆಯಾದರೂ ಅವುಗಳಿನ್ನು ಕಾರ್ಯರೂಪಕ್ಕೆ ಬರಬೇಕಾದರೆ ಒಂದರಿಂದ ಎರಡು ವರ್ಷಗಳ ಕಾಲ ಅವದಿ ಬೇಕಾಗುತ್ತದೆ. ಕಾರಣ ಸಜ್ಜನ ರಾಜಕಾರಣಿ ಸಿ.ಎಸ್‌ ನಾಡಗೌಡ ಅವರಿಗೆ ಬೆಂಬಲಿಸಿ ಗೆಲ್ಲಸಿದರೆ ಈ ಭಾಗದ ರೈತರ ಕನಸಾಗಿರುವ ಸಮಗ್ರ ನಿರಾವರಿ ಯೋಜನೆ ಕನಸು ನನಸು ಮಾಡುವ ಕಾರ್ಯ ಅವರಿಂದ ಸಾಧ್ಯವಾಗುತ್ತದೆ ಎಂದರು.
ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಮುರಾರಿ, ತಾಲೂಕಾ ಬ್ಲಾಕ ಕಾಂಗ್ರೆಸ್‌ ಅಧ್ಯಕ್ಷ ಗಫೂರಸಾಬ ಮಕಾಂದಾರ, ಅಶೋಕ ಚಿನ್ನು ನಾಡಗೌಡ, ರಾಷ್ಟ್ರೀಯ ಬಂಜಾರ ಕ್ರಾಂತಿ ದಳ ರಾಜ್ಯಾಧ್ಯಕ್ಷ ಅಶೋಕಕುಮಾರ ರಾಠೋಡ, ಎಪಿಎಂಸಿ ಸದಸ್ಯ ವಾಯ್‌ ಎಚ್‌ ವಿಜಯಕರ, ನ್ಯಾಯವಾದಿ ಎಸ್‌ ಎಸ್‌ ಮಾಲಗತ್ತಿ, ಕಾಂಗ್ರೆಸ ಮುಖಂಡ ಸಂತೋಷ ಲಮಾಣಿ, ಪುರಸಭೆ ಸದಸ್ಯ ಪಿಂಟು ಸಾಲಿಮನಿ, ಹುಸೇನ ಮುಲ್ಲಾ ಸೇರಿದಂಯತೆ ಮತ್ತಿತರರು ಉಪಸ್ಥಿತರಿದ್ದರು.

loading...