ಗೋಕಾಕ ನಗರ ಅಭಿವೃದ್ಧಿಯತ್ತ ಸಾಗುತ್ತಿದೆ: ಜಾರಕಿಹೊಳಿ

0
50
loading...

ಕನ್ನಡಮ್ಮ ಸುದ್ದಿ- ಗೋಕಾಕ: ಗೋಕಾಕ ನಗರ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಬಟ್ಟೆ, ವಸ್ತುಗಳ ಮಾರಾಟ ಮಾಡುವ ಪ್ರತಿಷ್ಠಿತ ಕಂಪನಿಗಳು ಗೋಕಾಕ ನಗರದತ್ತ ಬರುತ್ತಿರುವದು ಗೋಕಾಕ ನಗರ ಮತ್ತಷ್ಟು ಖುಷಿ ತಂದಿದೆ ಎಂದು ಉದ್ಯಮಿ ಲಖನ್ ಜಾರಕಿಹೊಳಿ ಹೇಳಿದರು.

ಅವರು ರವಿವಾರದಂದು ನಗರದ ಲಕ್ಷ್ಮೀ ಚಿತ್ರಮಂದಿರದ ಹತ್ತಿರ ನೂತನ ಕಣ್ವ ಗ್ರುಪ್ ಆಫ್ ಕಂಪನಿಯ ಕಣ್ವ ಮಾರ್ಟ ಶೋ ರೂಮ್ ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತ ಗೋಕಾಕ ನಗರ ಇನ್ನು ಕೇಲ ವರ್ಷಗಳಲ್ಲಿ ವಿವಿಧ ಕಂಪಣಿಗಳ ಶೋ ರೂಮಗಳು ತೆರೆದುಕೊಳ್ಳಲಿದ್ದು ಸಂಜೆ ಹೊತ್ತಿನಲ್ಲಿ ಬೆಳಗಾವಿ ಮಾದರಿಯಲ್ಲಿ ಗೋಕಾಕ ಕಾಣ ಸಿಗಲಿದೆ ಎಂದರು.
ನಗರದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ,ಎಮ್. ಚಂದರಗಿ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿಯವರು ಪೂಜಾ ಕಾರ್ಯಕ್ರಮ ನೆರವೆರಿಸಿದರು.

ಈ ಸಂದರ್ಭದಲ್ಲಿ ಕಣ್ವ ಕಂಪನಿಯ ಜಿಎಮ್ ರವಿಕುಮಾರ ಡಿ.ಆರ್. ಡಿಜಿಎಮ್ ಸತೀಶ ಪಿ, ಶ್ರವಣ ಮನ್ನಿಕೇರಿ, ಅನುಶ್ರೀ ಮನ್ನಿಕೇರಿ, ಜಿಪಂ ಸದಸ್ಯ ಟಿ ಆರ್ ಕಾಗಲ್, ಮಡ್ಡೆಪ್ಪ ತೋಳಿನವರ, ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಕ, ನಗರಸಭೆ ಸದಸ್ಯರಾದ ಗಿರೀಶ ಖೋತ, ಭೀಮಶಿ ಭರಮಣ್ಣವರ, ಗಜಾನನ ಮನ್ನಿಕೇರಿ, ಶಿವಲಿಂಗ ಅಂಗಡಿ ಸೇರಿದಂತೆ ಇತರರು ಇದ್ದರು.

loading...