ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

0
22
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಗ್ರಾಮೀಣ ಅಂಚೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು ಹಳಿಯಾಳ ತಾಲೂಕಾ ಕೇಂದ್ರ ಅಂಚೆ ಕಚೇರಿ ಎದುರು ಸಹ ಧರಣಿ ನಡೆಯುತ್ತಿದೆ. ತಾಲೂಕಿನ 21 ಗ್ರಾಮಗಳಲ್ಲಿ ಅಂಚೆ ಸೇವೆ ಸ್ಥಗಿತಗೊಂಡಿದೆ.
ಕೇಂದ್ರ ಸರ್ಕಾರವು ಕಳೆದ ಎರಡೂವರೆ ವರ್ಷಗಳಿಂದ ಗ್ರಾಮೀಣ ಅಂಚೆ ನೌಕರರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಖಂಡಿಸಿ ಅಂಚೆ ಇಲಾಖೆಯ ನೌಕರರಿಗೆ ಸಿಗುವ ಎಲ್ಲ ಸವಲತ್ತುಗಳು ತಮಗೂ ಸಹ ಅನ್ವಯವಾಗುವಂತೆ ಮಾಡಬೇಕು. ಸಾಮಾಜಿಕ ಭದ್ರತೆ ನೀಡಬೇಕು, ಸೇವಾ ನಿವೃತ್ತಿಯ ನಂತರ ಪಿಂಚಣಿ ದೊರೆಯಬೇಕು, ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಈ ಮುಷ್ಕರ ನಡೆಯುತ್ತಿದೆ.

ಹಳಿಯಾಳ ಹಾಗೂ ತೇರಗಾಂವ ಉಪ ಅಂಚೆಕಚೇರಿ ವ್ಯಾಪ್ತಿಯ 21 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮೀಣ ಅಂಚೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿರುವ ಕಾರಣ ಆ ಹಳ್ಳಿಗಳಲ್ಲಿ ಅಂಚೆ ಸೇವೆ ಸ್ಥಗಿತಗೊಂಡಿದೆ. ಸಾಮಾಜಿಕ ನೆರವಿನ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಮೊದಲಾದ ಪಿಂಚಣಿಗಳು ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಪಾನ್‍ಕಾರ್ಡ್, ಆಧಾರ್‍ಕಾರ್ಡ್ ಹಾಗೂ ಇತರ ಅಂಚೆ ಸೇವೆಗಳು ವಿತರಣೆಯಾಗುತ್ತಿಲ್ಲ.
ಮುಷ್ಕರದಲ್ಲಿ ಗ್ರಾಮೀಣ ಅಂಚೆ ನೌಕರರ ಹಳಿಯಾಳ ತಾಲೂಕಾ ಘಟಕದ ಅಧ್ಯಕ್ಷ ಎಸ್.ಎಲ್. ದೈವಜ್ಞ, ಕಾರ್ಯದರ್ಶಿ ಪಿ.ಬಿ. ಪಾಟೀಲ ಹಾಗೂ ಎ.ವಿ. ಕಾಕ್ತಿಕರ, ಪಿ.ಎಸ್. ಪಾಟೀಲ, ನಾಗಮ್ಮಾ ಮಾದರ, ಶಕುಂತಲಾ ಪಾಟೀಲ, ಜಿ.ಸಿ. ನಾಯ್ಕ, ಜಿ.ವೈ. ನಾಯ್ಕ, ಎಸ್.ಎ. ಮಡಿವಾಳ, ಸಿ.ಜೆ. ಬಾಂದೇಕರ ಮೊದಲಾದವರು ಪಾಲ್ಗೊಂಡಿದ್ದಾರೆ.

loading...