ಚರಂತಿಮಠರಿಂದ ಅಮೀನಗಡದಲ್ಲಿ ಭರ್ಜರಿ ರೋಡ ಶೋ

0
11
loading...

ಕನ್ನಡಮ್ಮ ಸುದ್ದಿ-ಬಾಗಲಕೋಟೆ: ಇಲ್ಲಿಯ ವಿಧಾನಸಭೆ ಮತಕ್ಷೇತ್ರದ ಅಮೀನಗಡ ಪಟ್ಟಣದಲ್ಲಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠವರಿಂದ ನಡೆದ ರೋಡ ಶೋಗೆ ಭಾರಿ ಬೆಂಬಲ ವ್ಯಕ್ತವಾಯಿತು. ಅಮೀನಗಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಚರಂತಿಮಠರ ರೋಡ ಶೋಗೆ ಜನರು ಬೆಂಬಲ ವ್ಯಕ್ತಪಡಿಸಿದರು. ಮಹಿಳೆಯರು, ಯುವಕರು,ವೃದ್ಧರೂ ಸಹ ಚರಂತಿಮಠರ ರೋಡಶೋದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಚರಂತಿಮಠರು ರೋಡಶೋ ಸಾಗುತ್ತಿದ್ದಂತೆ ಪಕ್ಕ ಪಕ್ಕ ಲೈಟ ಬಿಜೆಪಿಗೆ ಓಟು ಎಂದು ಘೋಷಣೆ ಕೂಗಿದರೆ ಇನ್ನೂ ಕೆಲವರು ಅಭಿವೃದ್ಧಿಗೆ ಚರಂತಿಮಠರು ಬೇಕು ಎಂದು ಘೋಷಣೆ ಹಾಕಿದರು. ನಂತರ ಅಮೀನಗಡ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಚರಂತಿಮಠರು,ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಅಮೀನಗಡದಲ್ಲಿ ಬಸ್‌ ನಿಲ್ಧಾಣ ಕಾಮಗಾರಿಗೆ ಪೂಜೆ ಮಾಡಲಾಗಿತ್ತು ಆದರೆ ಈಗಿನ ಶಾಸಕರ ಕಾಲದಲ್ಲಿ ಪೂರ್ಣಗೊಳ್ಳಲಿಲ್ಲ. ನಾನು ಈ ಭಾಗದಲ್ಲಿ ಮಾಡಿದ ಕಾಮಗಾರಿಗಳಿಗೆ ತೇಪೆ ಹಚ್ಚುವ ಕೆಲಸ ಸಹ ಮಾಡಲಿಲ್ಲ.ಬರೀ ಹಣ ಲೂಟಿ ಹೊಡೆಯುವುದೇ ಒಂದು ಕಾಯಕವನ್ನಾಗಿ ಮಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದರು. ಸದಾಶಿವ ಆಯೋಗ ವರದಿ ಜಾರಿಗೆ ಮಾಡುತ್ತೇನೆ ಎಂದು ಪರಿಶಿಷ್ಟ ಜನಾಂಗದವರಿಗೆ ಮೋಸ ಮಾಡುವುದು, ಕೆಲವರಿಗೆ ಎಸ್ಟಿಗೆ ಸೇರಿಸುತ್ತೇನೆ ಎಂದು ಹೇಳಿ ಪರಿಶಿಷ್ಟ ಪಂಗಡದವರ ಮಧ್ಯೆ ಜಗಳ ಹಚ್ಚುವುದು, ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಲು ಕಾಂಗ್ರೆಸ್‌ ಹೊರಟಿದೆ ಇವರಿಗೆ ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ.ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದರು. ವಿಜಯ ಕಣ್ಣೂರ, ಗುರುನಾಥ ಚಳ್ಳಮರದ, ಮಹಾಂತೇಶ ಹಿರೇಮಠ, ಪುಂಡಲಿಕಪ್ಪ ಮೂಲಿಮನಿ, ಸಿ.ಎಂ.ಅನವಾಲ, ರಾಘವೇಂದ್ರ ಗೌಡರ, ಸಂತೋಷ ಐಹೊಳಿ, ಚನ್ನಬಸಪ್ಪ ಕುಂಬಾರ,ಬಿಜೆಪಿ ಮುಖಂಡ ಅಶೋಕ ಲಾಗಲೋಟಿ, ಡಾ.ವಿಕಾಸ ದಡ್ಡೇನವರ, ಪ್ರಭುಸ್ವಾಮಿ ಸರಗಣಾಚಾರಿ, ಮಾಧವಿ ರಾಠೋಡ ಮತ್ತಿತರರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

loading...